AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೀಘ್ರದಲ್ಲೇ ಉಗ್ರರಿಂದ ನಿಮ್ಮ ಹತ್ಯೆ’; ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಪೋಸ್ಟ್ ಮೂಲಕ ಕೊಲೆ ಬೆದರಿಕೆ

ಲೋಕ್ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ನಾಯಕ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. 'ನಿಮ್ಮನ್ನು ಶೀಘ್ರದಲ್ಲೇ ತೀವ್ರಗಾಮಿ ಭಯೋತ್ಪಾದಕರು ಕೊಲೆ ಮಾಡಲಿದ್ದಾರೆ' ಎಂದು ಬಂದಿರುವ ಬೆದರಿಕೆಯು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಚಿರಾಗ್ ಪಾಸ್ವಾನ್ ಅವರ ಆಪ್ತ ಸಿಬ್ಬಂದಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕರೆಯ ಮೂಲ ಮತ್ತು ಬೆದರಿಕೆ ಹಾಕಿದ ವ್ಯಕ್ತಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

'ಶೀಘ್ರದಲ್ಲೇ ಉಗ್ರರಿಂದ ನಿಮ್ಮ ಹತ್ಯೆ'; ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಪೋಸ್ಟ್ ಮೂಲಕ ಕೊಲೆ ಬೆದರಿಕೆ
Chirag PaswanImage Credit source: PTI
ಸುಷ್ಮಾ ಚಕ್ರೆ
|

Updated on: Sep 01, 2026 | 7:58 PM

Share

ನವದೆಹಲಿ, ಸೆಪ್ಟೆಂಬರ್ 1: ಝಡ್ ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಅವರಿಗೆ ಇಂದು (ಸೆಪ್ಟೆಂಬರ್ 1) ಅಂಚೆ ಮೂಲಕ ಬಂದ ಅನಾಮಧೇಯ ಪತ್ರವೊಂದರಲ್ಲಿ ‘ತೀವ್ರಗಾಮಿ ಉಗ್ರರು ಶೀಘ್ರದಲ್ಲೇ ನಿಮ್ಮನ್ನು ಕೊಲೆ ಮಾಡುತ್ತಾರೆ’ ಎಂದು ಜೀವ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಪತ್ರ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಚಿರಾಗ್ ಪಾಸ್ವಾನ್ ಅವರ ಕಚೇರಿ ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ. ಈ ಬೆದರಿಕೆ ಪತ್ರದ ಮೂಲ ಮತ್ತು ಸತ್ಯಾಸತ್ಯತೆಯನ್ನು ತುರ್ತಾಗಿ ತನಿಖೆ ಮಾಡುವಂತೆ ಹಾಗೂ ಸಚಿವರ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಕೋರಿದೆ.

ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಚಿರಾಗ್ ಪಾಸ್ವಾನ್ ಅವರ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ ಆಲೋಕ್ ಕುಮಾರ್, “ಕೇಂದ್ರ ಗೃಹ ಸಚಿವಾಲಯದಿಂದ ಝಡ್ ಶ್ರೇಣಿಯ ಭದ್ರತೆ ಪಡೆಯುತ್ತಿರುವ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವರ ವೈಯಕ್ತಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನನಗೆ ನಿರ್ದೇಶಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ

ಪತ್ರದ ಪ್ರಕಾರ, 2 ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಅನಾಮಧೇಯ ಪತ್ರವೊಂದು ಇಂದು ಸಚಿವಾಲಯಕ್ಕೆ ತಲುಪಿದೆ. “ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಸಚಿವರ ಜೀವಕ್ಕೆ ನೇರ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆ ಬೆದರಿಕೆಯಲ್ಲಿ ‘ತೀವ್ರಗಾಮಿ ಉಗ್ರರಿಂದ ಶೀಘ್ರದಲ್ಲೇ ನಿಮ್ಮ ಹತ್ಯೆಯಾಗಲಿದೆ’ ಎಂದು ಬರೆಯಲಾಗಿದೆ” ಎಂದು ಆಲೋಕ್ ಕುಮಾರ್ ತಿಳಿಸಿದ್ದಾರೆ. ಪರಿಶೀಲನೆಗಾಗಿ ಮೂಲ ಬೆದರಿಕೆ ಪತ್ರವನ್ನೂ ಗೃಹ ಸಚಿವಾಲಯದ ಪತ್ರದೊಂದಿಗೆ ಲಗತ್ತಿಸಲಾಗಿದೆ.

Hrico0nauaa8rpj

ಸಚಿವರ ಭದ್ರತೆ ಹೆಚ್ಚಿಸಲು ಆಗ್ರಹ:

ಬೆದರಿಕೆ ಪತ್ರದ ಮೂಲ, ಸತ್ಯಾಸತ್ಯತೆ ಮತ್ತು ಅದರ ಹಿನ್ನೆಲೆಯನ್ನು ಯಾವುದೇ ವಿಳಂಬವಿಲ್ಲದೆ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಚಿರಾಗ್ ಪಾಸ್ವಾನ್ ಕಚೇರಿಯು ಗೃಹ ಕಾರ್ಯದರ್ಶಿಯವರನ್ನು ಆಗ್ರಹಿಸಿದೆ. ಚಿರಾಗ್ ಪಾಸ್ವಾನ್ ಅವರ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಬೆದರಿಕೆಯ ತೀವ್ರತೆಯನ್ನು ಪರಿಗಣಿಸಿ, ಅವರ ಪ್ರಸ್ತುತ ಭದ್ರತೆಯನ್ನು ಪರಿಶೀಲಿಸಬೇಕು ಮತ್ತು ಅಗತ್ಯವಿದ್ದರೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಕಚೇರಿ ವಿನಂತಿಸಿದೆ.

ಇದನ್ನೂ ಓದಿ: ಬಿಹಾರ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ; ಸಿಎಂ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಚಿರಾಗ್ ಪಾಸ್ವಾನ್

ಬಿಹಾರದ ರಾಜಕೀಯದ ಪ್ರಮುಖ ನಾಯಕರಾಗಿರುವ ಚಿರಾಗ್ ಪಾಸ್ವಾನ್ ಅವರಿಗೆ ಬೆದರಿಕೆ ಬಂದಿರುವುದನ್ನು ಎಲ್‌ಜೆಪಿ (LJP) ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ