AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಗಳಿಗೆ ಅವಮಾನ, ಯುವತಿಯರಿಗೆ ಲೈಂಗಿಕ ಕಿರುಕುಳ; ಟಿಸಿಎಸ್ ನಾಸಿಕ್ ಪ್ರಕರಣದ ಬಗ್ಗೆ ಮಹಿಳಾ ಆಯೋಗದಿಂದ 50 ಪುಟದ ವರದಿ

ನಾಸಿಕ್​ನ ಟಿಸಿಎಸ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮತಾಂತರ ಪ್ರಕರಣದ ಶಂಕಿತ ನಿದಾ ಖಾನ್‌ಳ ಪೊಲೀಸ್ ಕಸ್ಟಡಿಯ ನಂತರ, ಆಕೆಯನ್ನು ಇಂದು ನಾಸಿಕ್ ರಸ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 2 ತಿಂಗಳಿನಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಗರ್ಭಿಣಿ ನಿದಾ ಖಾನ್‌ಳನ್ನು ನಾಸಿಕ್ ರಸ್ತೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈಗ ಆಕೆಯನ್ನು ನಾಸಿಕ್ ರಸ್ತೆ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ. ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಟಿಸಿಎಸ್ ಪ್ರಕರಣದ ಬಗ್ಗೆ 50 ಪುಟಗಳ ವರದಿ ಸಲ್ಲಿಸಿದೆ.

ಹಿಂದೂಗಳಿಗೆ ಅವಮಾನ, ಯುವತಿಯರಿಗೆ ಲೈಂಗಿಕ ಕಿರುಕುಳ; ಟಿಸಿಎಸ್ ನಾಸಿಕ್ ಪ್ರಕರಣದ ಬಗ್ಗೆ ಮಹಿಳಾ ಆಯೋಗದಿಂದ 50 ಪುಟದ ವರದಿ
Tcs Nashik Nida Khan
ಸುಷ್ಮಾ ಚಕ್ರೆ
|

Updated on:May 11, 2026 | 10:59 PM

Share

ನವದೆಹಲಿ, ಮೇ 11: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಇಂದು 50 ಪುಟಗಳ ತನ್ನ ವರದಿ ಬಿಡುಗಡೆ ಮಾಡಿತು. ಬಿಪಿಒ ಘಟಕದಲ್ಲಿ ಕೆಲಸ ಮಾಡಲು ಅಹಿತಕರವಾದ ವಾತಾವರಣ, ಲೈಂಗಿಕ ಕಿರುಕುಳವನ್ನು ಮಹಿಳಾ ಆಯೋಗದ ಸಮಿತಿ ಗುರುತಿಸಿದೆ. ಟಿಸಿಎಸ್‌ನಿಂದ ಉದ್ಭವಿಸುವ ದೂರುಗಳ ವಿಷಯವನ್ನು ಎನ್‌ಸಿಡಬ್ಲ್ಯೂ ಸಮಿತಿಯು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಆರೋಪಗಳ ತನಿಖೆಗಾಗಿ ಸಮಿತಿಯನ್ನು ರಚಿಸಿತ್ತು.

ಈ ವರದಿಯನ್ನು ಮೇ 8ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸಲ್ಲಿಸಲಾಯಿತು. ಈ ಸಮಿತಿಯು 50 ಪುಟಗಳ ವಿವರವಾದ ವರದಿಯನ್ನು ಸಿದ್ಧಪಡಿಸಿತು. ಇದರಲ್ಲಿ ಅವಲೋಕನಗಳು ಮತ್ತು 25ಕ್ಕೂ ಹೆಚ್ಚು ಶಿಫಾರಸುಗಳಿವೆ. NCW ಸಮಿತಿಯು ಏಪ್ರಿಲ್ 18 ಮತ್ತು 19ರಂದು ನಾಸಿಕ್‌ನ ಟಿಸಿಎಸ್​ ಕಚೇರಿಗೆ ಭೇಟಿ ನೀಡಿತ್ತು. ಅಲ್ಲಿ ಅವರು ಸಂತ್ರಸ್ತರು, TCSನ POSH ಆಂತರಿಕ ಸಮಿತಿ (IC) ಸದಸ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಪ್ರಮುಖ ಸಾಕ್ಷಿಗಳೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್

NCW ಅಧ್ಯಕ್ಷೆ ವಿಜಯಾ ರಹತ್ಕರ್ ಅವರ ನಿರ್ದೇಶನದ ಮೇರೆಗೆ, ನ್ಯಾಯಮೂರ್ತಿ ಸಾಧನಾ ಜಾಧವ್ (ನಿವೃತ್ತ ನ್ಯಾಯಾಧೀಶರು, ಬಾಂಬೆ ಹೈಕೋರ್ಟ್), ಸಿನ್ಹಾ (ಮಾಜಿ ಡಿಜಿಪಿ, ಹರಿಯಾಣ), ವಕೀಲೆ ಮೋನಿಕಾ ಅರೋರಾ (ಭಾರತದ ಸುಪ್ರೀಂ ಕೋರ್ಟ್‌) ಅವರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು.

ವರದಿಯ ಪ್ರಕಾರ, ಆಂತರಿಕ ಸಮಿತಿ (IC) ಪುಣೆ ಮತ್ತು ನಾಸಿಕ್‌ಗೆ ಸಾಮಾನ್ಯ ಸಮಿತಿಯಾಗಿತ್ತು. POSH ಕಾಯ್ದೆ ಅನುಸರಣೆಗಾಗಿ ಒಬ್ಬ ಆಂತರಿಕ ಸಮಿತಿ ಸದಸ್ಯರೂ ನಾಸಿಕ್ ಘಟಕಕ್ಕೆ ಭೇಟಿ ನೀಡಿಲ್ಲ ಅಥವಾ ಪರಿಶೀಲಿಸಿಲ್ಲ. POSH ನಿಯಮಗಳ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವ ಯಾವುದೇ ಫಲಕಗಳು ಆ ಕಚೇರಿಯಲ್ಲಿ ಕಂಡುಬಂದಿಲ್ಲ.

ಇದನ್ನೂ ಓದಿ: ಸೀರೆ ಎಳೆದ್ರು, ಮೈ-ಕೈ ಮುಟ್ಟಿದ್ರು, ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯ ನರಕಯಾತನೆ

“ಆರೋಪಿಗಳ ವಿರುದ್ಧ ಯಾವುದೇ ಉದ್ಯೋಗಿಗೆ ಧ್ವನಿ ಎತ್ತುವ ಧೈರ್ಯವಿರಲಿಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೂ ವರ್ಗಾವಣೆ ಮತ್ತು ಸಸ್ಪೆಂಡ್ ಮಾಡುವ ಮೂಲಕ ಅವರಲ್ಲಿ ಭಯ ಸೃಷ್ಟಿಸುತ್ತಿದ್ದರು” ಎಂದು ವರದಿ ತಿಳಿಸಿದೆ. ಆ ವರದಿಯ ಪ್ರಕಾರ, ಆರೋಪಿಗಳು ಹಿಂದೂ ಪುರಾಣ, ನಂಬಿಕೆಗಳು, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಅವಹೇಳನ ಮಾಡುವ ಮೂಲಕ ಮಹಿಳಾ ಉದ್ಯೋಗಿಗಳನ್ನು ಬೆದರಿಸುತ್ತಿದ್ದರು. ಇಸ್ಲಾಂ ಧರ್ಮ ಹಿಂದೂ ಧರ್ಮಕ್ಕಿಂತ ಹೆಚ್ಚು ಶ್ರೇಷ್ಠ ಧರ್ಮ ಎಂದು ಅವರು ಯುವತಿಯರನ್ನು ನಂಬಿಸಲು ಪ್ರಯತ್ನಿಸಿದ್ದರು. ಈ ಎಲ್ಲ ವಿಷಯಗಳನ್ನೂ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Mon, 11 May 26

Follow Us
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ವೈಕೋ ಮನೆಗೆ ಹೋದ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ