IANS C-Voter Survey: ಪ್ರಧಾನಿಯಾಗಿ ನರೇಂದ್ರ ಮೋದಿ ಜನರ ಮೊದಲ ಆಯ್ಕೆ; ರಾಹುಲ್ ಗಾಂಧಿ; ಅರವಿಂದ್ ಕೇಜ್ರಿವಾಲ್​ಗೆ ಎಷ್ಟನೇ ಸ್ಥಾನ?

PM Modi | Arvind Kejriwal | Rahul Gandhi: ಐಎಎನ್​ಎಸ್ ಸಿವೋಟರ್ ಬಿಡುಗಡೆ ಮಾಡಿರುವ ಇತ್ತೀಚಿನ ಸಮೀಕ್ಷೆಯ ಅಂಕಿಅಂಶದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಜನರ ಮೊದಲ ಆಯ್ಕೆ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಪ್ರಸ್ತುತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಜನರು ಆದ್ಯತೆ ನೀಡಿದ್ದು, ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಂತರದ ಸ್ಥಾನದಲ್ಲಿದ್ದಾರೆ.

IANS C-Voter Survey: ಪ್ರಧಾನಿಯಾಗಿ ನರೇಂದ್ರ ಮೋದಿ ಜನರ ಮೊದಲ ಆಯ್ಕೆ; ರಾಹುಲ್ ಗಾಂಧಿ; ಅರವಿಂದ್ ಕೇಜ್ರಿವಾಲ್​ಗೆ ಎಷ್ಟನೇ ಸ್ಥಾನ?
ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ
Follow us
TV9 Web
| Updated By: shivaprasad.hs

Updated on: May 21, 2022 | 4:07 PM

ಐಎಎನ್​ಎಸ್ ಸಿವೋಟರ್ (IANS C Voter Survey) ಬಿಡುಗಡೆ ಮಾಡಿರುವ ಇತ್ತೀಚಿನ ಸಮೀಕ್ಷೆಯ ಅಂಕಿಅಂಶದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಜನರ ಮೊದಲ ಆಯ್ಕೆ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಪ್ರಸ್ತುತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ (PM Narendra Modi) ಜನರು ಆದ್ಯತೆ ನೀಡಿದ್ದು, ರಾಹುಲ್ ಗಾಂಧಿ (Rahul Gandhi) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಂತರದ ಸ್ಥಾನದಲ್ಲಿದ್ದಾರೆ. 2021ರಲ್ಲಿ ವಿಧಾನಸಭೆ ಚುನಾವಣೆ ನಡೆದ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಐಎಎನ್‌ಎಸ್ ಪರವಾಗಿ ಸಿ ವೋಟರ್ ಈ ವಿಶೇಷ ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಈ ಮಾಹಿತಿ ಲಭ್ಯವಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗಿಂತ ಬಹಳ ಹಿಂದಿಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಸಮೀಕ್ಷೆ ನಡೆದ ಐದು ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 120 ಲೋಕಸಭಾ ಸ್ಥಾನಗಳಿವೆ. ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿಧಾನವಾಗಿ ಪ್ರಬಲವಾಗುತ್ತಿದೆ. ಆದರೆ ಕಾಂಗ್ರೆಸ್ ತಮಿಳುನಾಡಿನಲ್ಲಿ ಮೈತ್ರಿ ಪಾಲುದಾರ ಪಕ್ಷವಾಗಿದ್ದು, ಕೇರಳದಲ್ಲಿ ವಿರೋಧ ಪಕ್ಷವಾಗಿದೆ. ಅಸ್ಸಾಂನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದಾಗ ಪ್ರತಿಕ್ರಿಯಿಸಿದವರಲ್ಲಿ 43 ಪ್ರತಿಶತ ಜನರು ಮೋದಿಯನ್ನು ಬೆಂಬಲಿಸಿದ್ದಾರೆ. ಕೇಜ್ರಿವಾಲ್ (ಶೇ 11.62) ಮತ್ತು ರಾಹುಲ್ ಗಾಂಧಿ (ಶೇ 10.7) ನಂತರದ ಸ್ಥಾನಗಳಲ್ಲಿದ್ದಾರೆ.

2019ರಲ್ಲಿ ರಾಹುಲ್ ಗಾಂಧಿ ಲೋಕಸಭೆಗೆ ಆಯ್ಕೆಯಾಗಿರುವ ಕೇರಳ ರಾಜ್ಯದಲ್ಲಿ ಶೇಕಡಾ 28 ರಷ್ಟು ಜನರು ಮೋದಿ ಅವರಿಗೆ ಆದ್ಯತೆ ನೀಡಿದ್ದಾರೆ. ನಂತರದ ಸ್ಥಾನಗಳಲ್ಲಿ ರಾಹುಲ್ ಗಾಂಧಿ (20.38 ಶೇಕಡಾ) ಮತ್ತು ಕೇಜ್ರಿವಾಲ್ (8.28 ಶೇಕಡಾ) ಇದ್ದಾರೆ.

ಇದನ್ನೂ ಓದಿ
Image
ದೆಹಲಿಯಲ್ಲಿ ಭಾರೀ ಮಳೆ; ರಕ್ಷಣಾ ಸಚಿವ ಪ್ರಯಾಣಿಸುತ್ತಿದ್ದ ವಿಮಾನ ಸೇರಿ 11 ವಿಮಾನಗಳ ಮಾರ್ಗ ಬದಲು
Image
ಜಮ್ಮು: ಮಸೀದಿಯ ಧ್ವನಿವರ್ಧಕಕ್ಕೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಿಸಿದ ವಿದ್ಯಾರ್ಥಿಗಳು
Image
Rahul Gandhi: ‘ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಪ್ರಧಾನಿಯವರಿಗಿಲ್ಲ’; ಲಂಡನ್​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ 
Image
Monkeypox: ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್: ವಿಶ್ವಸಂಸ್ಥೆ ಎಚ್ಚರಿಕೆ

ಅದೇ ರೀತಿ, ತಮಿಳುನಾಡಿನಲ್ಲಿ (ಕಾಂಗ್ರೆಸ್ ಆಡಳಿತಾರೂಢ ಡಿಎಂಕೆಯ ಮೈತ್ರಿ ಪಕ್ಷ) ಶೇ. 29.56 ಜನರು ಮೋದಿಯವರನ್ನು ಪ್ರಧಾನಿ ಹುದ್ದೆಗೆ ತಮ್ಮ ಆದ್ಯತೆ ಎಂದಿದ್ದು, ನಂತರದಲ್ಲಿ ರಾಹುಲ್ ಗಾಂಧಿ (ಶೇ. 24.65), ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಶೇ.5.23) ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಮೀಕ್ಷೆಯಲ್ಲಿ ಭಾಗಿಯಾದ ಜನರಲ್ಲಿ 42.37 ಪ್ರತಿಶತದಷ್ಟು ಜನರು ಮೋದಿ ಅವರನ್ನು ಪ್ರಧಾನಿಯಾಗಿ ಬೆಂಬಲಿಸಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (26.08%) ಮತ್ತು ರಾಹುಲ್ ಗಾಂಧಿ (14.4%) ನಂತರದ ಸ್ಥಾನಗಳಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಪುದುಚೇರಿಯಲ್ಲಿ 49.69 ಮಂದಿ ಮೋದಿ ಪರ ಒಲವು ತೋರಿದರೆ, ಶೇ 11.8ರಷ್ಟು ಜನರು ಇತರ ಕಾಂಗ್ರೆಸ್ ನಾಯಕರಿಗೆ ಆದ್ಯತೆ ನೀಡಿದ್ದಾರೆ. ರಾಹುಲ್ ಗಾಂಧಿ ಪರ ಶೇ. 3.22 ಜನರು ಒಲವು ತೋರಿದ್ದಾರೆ.

ಈ ಐದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಮೋದಿಯವರು ಶೇಕಡಾ 49.91 ಜನರ ಬೆಂಬಲ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿ ರಾಹುಲ್ ಗಾಂಧಿ (10.1 ಶೇಕಡಾ), ಕೇಜ್ರಿವಾಲ್ (7.62 ಶೇಕಡಾ), ಇತರ ಕಾಂಗ್ರೆಸ್ ನಾಯಕರು (5.46 ಶೇಕಡಾ) ಮತ್ತು ಮಮತಾ ಬ್ಯಾನರ್ಜಿ (3.23 ಶೇಕಡಾ) ಇದ್ದಾರೆ.

ಎಷ್ಟು ಜನ ಪ್ರಧಾನಿ ಮೋದಿ ಕಾರ್ಯದಿಂದ ತೃಪ್ತರಾಗಿದ್ದಾರೆ?

ಐಎಎನ್​ಎಸ್ ಸಿವೋಟರ್ ಬಿಡುಗಡೆ ಮಾಡಿರುವ ಮತ್ತೊಂದು ಸಮೀಕ್ಷೆಯ ಅಂಕಿಅಂಶದಲ್ಲಿ 44.77% ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯನಿರ್ವಹಣೆಯಿಂದ ತೃಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ. 37.66% ಭಾರತೀಯರು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸಕ್ಕೆ ತೃಪ್ತರಾಗಿದ್ದಾರೆ. ಸೋನಿಯಾ ಗಾಂಧಿಯವರ ಕಾರ್ಯವೈಖರಿಯ ಬಗ್ಗೆ ಜನರು ಪ್ರತಿಕ್ರಿಯಿಸಿದ್ದು, 45.92% ಜನರು ಸೋನಿಯಾ ಗಾಂಧಿಯವರ ಕೆಲಸದಿಂದ ತೃಪ್ತರಾಗಿಲ್ಲ ಎಂದು ಸಮೀಕ್ಷೆಯು ಹೇಳಿದೆ. 44.44% ಭಾರತೀಯರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕಳೆದ 12 ತಿಂಗಳಿಂದ ಪ್ರತಿದಿನವೂ ಸಮೀಕ್ಷೆ ನಡೆಸಲಾಗುತ್ತಿತ್ತು. IANS-CVoter ಸಮೀಕ್ಷೆಯ ಪ್ರಕಾರ, 36.48% ಭಾರತೀಯರು ತಮ್ಮ ರಾಜ್ಯಗಳಲ್ಲಿ ವಿರೋಧ ಪಕ್ಷದ ನಾಯಕರ ಕೆಲಸದಿಂದ ತೃಪ್ತರಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ