ಈಗ ಚುನಾವಣೆ ನಡೆದರೆ ವಿರೋಧ ಪಕ್ಷಗಳಿಗೆ ಜನ ಬೆಂಬಲ ನೀಡ್ತಾರಾ? TV9 ಪೋಲ್‌ನಲ್ಲಿ ಹೊರಬಿತ್ತು ಜನಾಭಿಪ್ರಾಯ!

ಎಸ್ಐಆರ್ ರದ್ದು ಮತ್ತು ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆಯ ಆಕ್ರೋಶ ಕಾವೇರಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣೆ ನಡೆದರೆ ನೀವು ವಿರೋಧ ಪಕ್ಷಗಳನ್ನು ಬೆಂಬಲಿಸುತ್ತೀರಾ? ಎಂಬ ಟಿವಿ9 ಪೋಲ್​ಗೆ ಉತ್ತರಿಸಿರುವ ಜನರು ವಿಪಕ್ಷಗಳ ಪಾತ್ರ, ಸರ್ಕಾರದ ಕಾರ್ಯವೈಖರಿ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ಓದಿ.

ಈಗ ಚುನಾವಣೆ ನಡೆದರೆ ವಿರೋಧ ಪಕ್ಷಗಳಿಗೆ ಜನ ಬೆಂಬಲ ನೀಡ್ತಾರಾ? TV9 ಪೋಲ್‌ನಲ್ಲಿ ಹೊರಬಿತ್ತು ಜನಾಭಿಪ್ರಾಯ!
ಮೋದಿ, ಅಭಿಜಿತ್​ ದಿಪ್ಕೆ ರಾಹುಲ್​ ಗಾಂಧಿ,
Image Credit source: tv9 kannada

Updated on: Oct 11, 2026 | 5:13 PM

ದೆಹಲಿ, ಅಕ್ಟೋಬರ್​ 11: ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ ನೀಟ್​ ಪರೀಕ್ಷೆ ಪೇಪರ್ ಲೀಕ್ ಹಗರಣ ಖಂಡಿಸಿ ಪ್ರತಿಭಟನೆ ಮಾಡಿತ್ತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿತ್ತು. ಸಿಜೆಪಿ ಪ್ರತಿಭಟನೆಗೆ ಮಣಿದ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಇದೀಗ ಎಸ್ಐಆರ್ ರದ್ದು ಮತ್ತು ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹಿಸಿದ್ದು, ಕೇಂದ್ರದ ವಿರುದ್ಧ ಯುವ ಜನತೆಯನ್ನ ಎತ್ತಿಕಟ್ಟು ಪ್ರಯತ್ನಗಳು ನಡೆದಿದ್ದು, ಇದಕ್ಕೆ ಕಾಂಗ್ರೆಸ್ ಕೂಡ ಸಾಥ್​ ನೀಡಿದೆ ಎಂಬ ಮಾತುಗಳು ಕೇಳಿಬಂದಿದೆ. ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಆಕ್ರೋಶ ಭುಗಿಲೆದ್ದಿದೆ. ‘ಈ ಒಂದು ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ ನೀವು ವಿರೋಧ ಪಕ್ಷಗಳನ್ನು ಬೆಂಬಲಿಸುತ್ತೀರಾ?’ ಎಂಬ ಟಿವಿ9 ಡಿಜಿಟಲ್​ ಪೋಲ್​ಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಟಿವಿ9 ಪೋಲ್​ಗೆ ಜನರಿಂದ ಉತ್ತಮ ಸ್ಪಂದನೆ

ದೇಶದಲ್ಲಿ ಇತ್ತೀಚೆಗೆ ತೀವ್ರಗೊಂಡಿರುವ ಸಿಜೆಪಿ ಪರ-ವಿರೋಧ ಹೋರಾಟಗಳು ಹಾಗೂ ವಿರೋಧ ಪಕ್ಷಗಳ ಚಟುವಟಿಕೆಗಳ ನಡುವೆ, “ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣೆ ನಡೆದರೆ ನೀವು ವಿರೋಧ ಪಕ್ಷಗಳನ್ನು ಬೆಂಬಲಿಸುತ್ತೀರಾ?” ಎಂಬ ಟಿವಿ9 ಪೋಲ್​ಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಈ ಕುರಿತು ಸಾರ್ವಜನಿಕರು ಮತ್ತು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ‘ರಾಷ್ಟ್ರೀಯ ಭದ್ರತೆ, ಚುನಾವಣಾ ಆಯೋಗದ ಕಾರ್ಯವೈಖರಿ, ಪ್ರತಿಭಟನೆಗಳ ನೈಜ ಉದ್ದೇಶ ಹಾಗೂ ರಾಜಕೀಯ ಪಕ್ಷಗಳ ಹೊಣೆಗಾರಿಕೆಯ ಕುರಿತು ಪರ-ವಿರೋಧದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯೇ?: ಅಭಿಜಿತ್ ದೀಪ್ಕೆ ಇದ್ದ ವಿಮಾನದಲ್ಲಿ ‘ಕಾಕ್ರೋಚ್’ ಕಾಟದ ಬಗ್ಗೆ ಸಹಪ್ರಯಾಣಿಕ ಅಸಮಾಧಾನ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಕುರಿತಾಗಿ ಜನಸಾಮಾನ್ಯರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ‘ಈ ಹೋರಾಟಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ರಾಜಕೀಯ ಪ್ರೇರಿತವಾಗಿವೆ’ ಎಂದಿದ್ದಾರೆ. ‘ಕೇವಲ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಆಡಳಿತವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂಬ ಆಕ್ಷೇಪ ಕೂಡ ವ್ಯಕ್ತವಾಗಿದೆ.

ಟಿವಿ9 ಪೋಲ್

‘ಯಾವುದೇ ಪ್ರತಿಭಟನೆಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿರಬಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಅನೇಕರು, ಸದ್ಯದ ರಾಜಕೀಯ ಬೆಳವಣಿಗೆಗಳು ವಾಸ್ತವವಾಗಿ ಆಡಳಿತಾರೂಢ ಬಿಜೆಪಿಯ ಪರವಾಗಿಯೇ ಸಾರ್ವಜನಿಕ ಅಭಿಪ್ರಾಯ ರೂಪಿಸಲು ನೆರವಾಗುತ್ತಿವೆ’ ಎಂದಿದ್ದಾರೆ. ‘ಜಮ್ಮು-ಕಾಶ್ಮೀರದ ರಾಜಕೀಯ ಸ್ಥಿತ್ಯಂತರಗಳು ಸೇರಿದಂತೆ ಶಾಂತಿಯುತ ಆಡಳಿತಕ್ಕೆ ಪ್ರಾಮುಖ್ಯತೆ ನೀಡಬೇಕೆಂಬ’ ವಾದವೂ ಕೇಳಿಬಂದಿದೆ.

ಜ್ಞಾನೇಶ್ ಕುಮಾರ್ ನೇತೃತ್ವದ ತಂಡದ ಕಾರ್ಯಕ್ಕೆ ಮೆಚ್ಚುಗೆ

ಇನ್ನೊಂದೆಡೆ, ಒಂದಿಷ್ಟು ಜನರು ‘ರಾಷ್ಟ್ರೀಯ ಭದ್ರತೆ, ಸೈನ್ಯದ ಸಬಲೀಕರಣ ಮತ್ತು ಅಕ್ರಮ ವಲಸಿಗರ ನಿಯಂತ್ರಣದಂತಹ ವಿಚಾರಗಳಲ್ಲಿ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಕಠಿಣ ನಿಲುವುಗಳನ್ನು ಬೆಂಬಲಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡವು ಮತದಾರರ ಪಟ್ಟಿಯಿಂದ ಅಕ್ರಮ ಹಾಗೂ ಬೋಗಸ್ ಮತದಾರರನ್ನು ಹೊರಹಾಕುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದೆ’ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಷ್ಟೇ ಅಲ್ಲದೆ ‘ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಆಡಳಿತದಲ್ಲಿ ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಗಳ ನಿಯಂತ್ರಣ, ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಯು ಮತದಾರರ ಗಮನ ಸೆಳೆದಿದೆ’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸಿನ ಮೂಲ ಪರಿಶೀಲನೆಗೆ ಒತ್ತಾಯ

‘ಇನ್ನು ವಿರೋಧ ಪಕ್ಷಗಳ ಕಾರ್ಯವೈಖರಿ ಮತ್ತು ಸಿಜೆಪಿ ಸಂಘಟನೆಯ ಹಣಕಾಸು ಮೂಲಗಳ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಪ್ರತಿಭಟನೆಗಳ ಹಿಂದೆ ನಿಂತಿವೆ ಎಂಬ ಆರೋಪಗಳ ಜೊತೆಗೆ, ಇಂತಹ ಸಂಘಟನೆಗಳಿಗೆ ಹಣಕಾಸಿನ ನೆರವಿನ ಬಗ್ಗೆ ಅಧಿಕೃತ ಲೆಕ್ಕಪರಿಶೋಧನೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ’

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ!

ಒಟ್ಟಾರೆಯಾಗಿ, ಸದ್ಯದ ಬಿಕ್ಕಟ್ಟು ಮತ್ತು ಪ್ರತಿಭಟನೆಗಳ ನಡುವೆಯೂ ಜನಸಾಮಾನ್ಯರು ದೇಶದ ಆಂತರಿಕ ಭದ್ರತೆ, ಸ್ಥಿರ ಸರ್ಕಾರ ಮತ್ತು ವ್ಯವಸ್ಥೆಯ ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:02 pm, Sun, 11 October 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us