
ನವದೆಹಲಿ, ಅಕ್ಟೋಬರ್ 9: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಬದಲಾಯಿಸುವ ಮೂಲಕ ರಾಜಕೀಯ ಅವಕಾಶವಾದಿತನ ಪ್ರದರ್ಶಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿರುವ ಧರ್ಮೇಂದ್ರ ಪ್ರಧಾನ್, “ರಾಜಕೀಯ ಅವಕಾಶವಾದಕ್ಕೆ ಮುಖವೊಂದಿದ್ದರೆ ಅದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎನ್ನಬಹುದಿತ್ತು! ವಿದೇಶಿ ಮಣ್ಣಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವುದರಿಂದ ಹಿಡಿದು, ಸ್ವತಃ ಭಾರತೀಯ ಒಕ್ಕೂಟ ವ್ಯವಸ್ಥೆಯ ವಿರುದ್ಧವೇ ಹೋರಾಟ ಘೋಷಿಸುವವರೆಗೆ ರಾಹುಲ್ ಗಾಂಧಿ ಅವರ ಆದ್ಯತೆಗಳು ಯಾವಾಗಲೂ ಅನುಮಾನಾಸ್ಪದವಾಗಿವೆ” ಎಂದು ಅವರು ಹೇಳಿದ್ದಾರೆ.
If political opportunism had a face, LoP Shri @RahulGandhi would be its flag bearer!
From questioning India’s democracy on foreign soil to declaring a fight against the Indian State itself, his politics has repeatedly raised questions about his priorities. Now, the Congress has reversed its own position on an issue it once opposed on national security grounds. What changed in a year? Principles cannot be discarded for political convenience.
India is a sovereign nation, and its policies are determined by its own institutions, laws and national interests, not dictated by foreign pressure or narratives on ‘X’.
With Hon’ble Prime Minister Shri @narendramodi Ji at the helm, India will never bow to external pressure or allow anyone to dictate its decisions. No pressure, no provocation, and no political agenda can ever compel India to compromise on its national security. We never have and we never will.
India welcomes global companies, innovation and investment. Businesses that respect our laws and comply with our security requirements have found opportunities to grow and thrive in our market. We are open to the world, but we will never compromise on the interests of our own nation.
@INCIndia must be held accountable for its shifting stand on an issue as sensitive as this. When political positions change so dramatically, questions about the interests driving that shift cannot be brushed aside. Is the pursuit of political support and resources from influential external interests beginning to outweigh faith in India’s own institutions?
History has its lessons for those who compromise national interest for political gain. The people of India are watching, and Congress must remember that our national interests are not up for negotiation. 🇮🇳
— Dharmendra Pradhan (@dpradhanbjp) October 9, 2026
“ಈ ಹಿಂದೆ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕಾಂಗ್ರೆಸ್ ಪಕ್ಷವೇ ವಿರೋಧಿಸಿದ್ದ ಪ್ರಮುಖ ವಿಚಾರವೊಂದರಲ್ಲಿ, ಈಗ ತನ್ನ ನಿಲುವನ್ನು ಸಂಪೂರ್ಣವಾಗಿ ಉಲ್ಟಾ ಮಾಡಿದೆ. ರಾಜಕೀಯ ಅನುಕೂಲಕ್ಕಾಗಿ ತತ್ವ ಮತ್ತು ಸಿದ್ಧಾಂತಗಳನ್ನು ಬಲಿಕೊಡಲು ಸಾಧ್ಯವಿಲ್ಲ. ಕೇವಲ ಒಂದು ವರ್ಷದಲ್ಲಿ ಕಾಂಗ್ರೆಸ್‌ನ ಈ ಬದಲಾವಣೆಗೆ ಕಾರಣವೇನು?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
“ಭಾರತವು ಒಂದು ಸಾರ್ವಭೌಮ ರಾಷ್ಟ್ರ. ದೇಶದ ನೀತಿ-ನಿಯಮಗಳನ್ನು ಭಾರತದ ಸ್ವಂತ ಸಾಂವಿಧಾನಿಕ ಸಂಸ್ಥೆಗಳು, ಕಾನೂನುಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳು ನಿರ್ಧರಿಸುತ್ತವೆಯೇ ಹೊರತು ವಿದೇಶಿ ಒತ್ತಡಗಳಾಗಲಿ ಅಥವಾ ‘ಎಕ್ಸ್’ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳ ನಿರೂಪಣೆಗಳಾಗಲಿ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ನೇತೃತ್ವದಲ್ಲಿ ಭಾರತವು ಎಂದಿಗೂ ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯುವುದಿಲ್ಲ. ಯಾವುದೇ ರಾಜಕೀಯ ಉದ್ದೇಶ ಅಥವಾ ಪ್ರಚೋದನೆಗಳು ದೇಶದ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಹಿಂದೆಂದೂ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ಮಾಡುವುದಿಲ್ಲ” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂಡಿಯಾ ಸಂಸದರ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ತ್ರಿವರ್ಣ ಧ್ವಜ ಬೀಸಿದ ರಾಹುಲ್ ಗಾಂಧಿ!
“ಭಾರತವು ಜಾಗತಿಕ ಕಂಪನಿಗಳು, ನಾವೀನ್ಯತೆ (ಇನೋವೇಶನ್) ಮತ್ತು ಹೂಡಿಕೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ದೇಶದ ಕಾನೂನು ಮತ್ತು ಭದ್ರತಾ ನಿಯಮಗಳನ್ನು ಗೌರವಿಸುವ ಉದ್ಯಮಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳಿವೆ. ಆದರೆ, ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಯಾವುದನ್ನೂ ಸ್ವೀಕರಿಸಲಾಗುವುದಿಲ್ಲ” ಎಂದು ಪ್ರಧಾನ್ ಹೇಳಿದ್ದಾರೆ.
ಕಾಂಗ್ರೆಸ್ ಬದ್ಧತೆಗೆ ಸವಾಲು:
“ಇಷ್ಟೊಂದು ಸೂಕ್ಷ್ಮವಾದ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಇದ್ದಕ್ಕಿದ್ದಂತೆ ಬದಲಾಯಿಸಿರುವುದಕ್ಕೆ ದೇಶಕ್ಕೆ ಉತ್ತರ ನೀಡಬೇಕಾಗಿದೆ. ಪ್ರಭಾವಿ ಬಾಹ್ಯ ಶಕ್ತಿಗಳಿಂದ ರಾಜಕೀಯ ಬೆಂಬಲ ಮತ್ತು ಸಂಪನ್ಮೂಲಗಳನ್ನು ಪಡೆಯುವ ಹಂಬಲವು ಭಾರತದ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಗಿಂತ ಹೆಚ್ಚಾಗುತ್ತಿದೆಯೇ? ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಡುವವರಿಗೆ ಇತಿಹಾಸವೇ ತಕ್ಕ ಪಾಠ ಕಲಿಸಿದೆ. ದೇಶದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿಗಳು ಎಂದಿಗೂ ಚೌಕಾಸಿಗೆ ಒಳಪಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಬೇಕು” ಎಂದು ಧರ್ಮೇಂದ್ರ ಪ್ರಧಾನ್ ಎಚ್ಚರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ