Indian Independence 2023: ತ್ರಿವರ್ಣಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರದ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳು

ರಾಷ್ಟ್ರಧ್ವಜ ದೇಶವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಅಂಶವಾಗಿದೆ. ಅದರಲ್ಲಂತೂ ರಾಷ್ಟ್ರೀಯ ಧ್ವಜವದಲ್ಲಿರುವ ಅಶೋಕ ಚಕ್ರವು ದೇಶದ ಪ್ರಮುಖ ಪ್ರಾತಿನಿಧ್ಯ ಸಂಕೇತವಾಗಿದೆ. ಈ ಅಶೋಕ ಚಕ್ರ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

Indian Independence 2023: ತ್ರಿವರ್ಣಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರದ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳು
ತ್ರಿವರ್ಣ ಧ್ವಜ
Follow us
ವಿವೇಕ ಬಿರಾದಾರ
|

Updated on:Aug 14, 2023 | 10:30 AM

ಭಾರತ 76ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಆಚರಿಸಲು ಸಿದ್ದವಾಗುತ್ತಿದೆ. ದೇಶಾದ್ಯಂತ ಹರ್​ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಗುತ್ತಿದೆ. ಅದರಂತೆ ದೇಶಾದ್ಯಂತ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು, ದೇಶವಾಸಿಗಳ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿದೆ. ಮತ್ತು ನಿನ್ನೆ (ಆ.13) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಾಮಾಜಿಕ ಜಾಲತಾಣಗಳ ಡಿಪಿಗೆ ರಾಷ್ಟ್ರ ಧ್ವಜ ಇರಿಸಿ ಎಂದು ಕರೆ ನೀಡಿದ್ದಾರೆ. ರಾಷ್ಟ್ರಧ್ವಜ ದೇಶವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಅಂಶವಾಗಿದೆ. ಅದರಲ್ಲಂತೂ ರಾಷ್ಟ್ರೀಯ ಧ್ವಜವದಲ್ಲಿರುವ ಅಶೋಕ ಚಕ್ರವು ದೇಶದ ಪ್ರಮುಖ ಪ್ರಾತಿನಿಧ್ಯ ಸಂಕೇತವಾಗಿದೆ. ಈ ಅಶೋಕ ಚಕ್ರ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ತಿಳಿಯಿರಿ.

  1. ರಾಷ್ಟ್ರಧ್ವಜವನ್ನು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದರು. ಅವರು 1923 ರಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಅಧಿವೇಶನದಲ್ಲಿ ಎರಡು ಬಣ್ಣಗಳಿಂದ ರಚನೆಯಾದ ಧ್ವಜವನ್ನು ವೆಂಕಯ್ಯ ಅವರು ಪ್ರಸ್ತುಪಡಿಸಿದ್ದರು.
  2. ಈ ಧ್ವಜದಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳಷ್ಟೇ ಇದ್ದವು. ಈ ಎರಡೂ ಬಣ್ಣಗಳು ಪ್ರಮುಖ ಎರಡು ಸಮುದಾಯ ಹಿಂದೂಗಳು ಮತ್ತು ಮುಸ್ಲಿಮರನ್ನು ಪ್ರತಿನಿಧಿಸುತ್ತಿದ್ದವು. ಆದರೆ ಭಾರತದ ಉಳಿದ ಸಮುದಾಯಗಳನ್ನು ಪ್ರತಿನಿಧಿಸುವ ಬಿಳಿ ಪಟ್ಟಿಯನ್ನು ಸೇರಿಸಲು ಗಾಂಧಿ ಅಧಿವೇಶನದಲ್ಲಿ ಸೂಚಿಸಿದ್ದರು. ಒಂದಷ್ಟು ಮಾರ್ಪಾಡುಗಳ ನಂತರ ರಾಷ್ಟ್ರಧ್ವಜವನ್ನು 1931ರಲ್ಲಿ ರೂಪಿಸಲಾಯಿತು.
  3. ಕೆಂಪು ಬಣ್ಣವನ್ನು ಕೇಸರಿಗೆ ಬದಲಾಯಿಸಲಾಯಿತು ಮತ್ತು ಬಳಿ ಪಟ್ಟಿಯನ್ನು ಮಧ್ಯಕ್ಕೆ ತರಲಾಯಿತು. ಅಡಿಯಲ್ಲಿ ಹಸಿರು ಬಣ್ಣ ಹೊಂದಿಸಲಾಯಿತು. ಧ್ವಜದ ಮಧ್ಯಭಾಗದಲ್ಲಿ ಚರಕವನ್ನು ಇರಿಸಲಾಗಿತ್ತು. ಜುಲೈ 22, 1947 ರಂದು ಭಾರತದ ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಲಾಯಿತು.
  4. ಧ್ವಜದಲ್ಲಿರುವ ಕೇಸರಿ ಬಣ್ಣವು ಭಾರತೀಯ ಜನರ ಧೈರ್ಯ, ತ್ಯಾಗವನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿ, ಬೆಳವಣಿಗೆ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತದೆ.
  5. ಧ್ವಜದ ಮಧ್ಯಭಾಗದಲ್ಲಿರುವ “ತಿರುಗುವ ಚಕ್ರ” ಅಶೋಕನ ಹಲವಾರು ಶಾಸನಗಳಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅಶೋಕ ಚಕ್ರ ಎಂದು ಕರೆಯಲಾಗುತ್ತದೆ.
  6.  ಅಶೋಕ ಚಕ್ರ ಕಡ್ಡಿಗಳು ದಿನದ 24 ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ಸಮಯದ ಚಕ್ರ ಎಂದೂ ಕರೆಯಲಾಗುತ್ತದೆ.
  7. ಅಶೋಕ ಚಕ್ರವು ಜೈನ ಧರ್ಮ, ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಸೂಚಕವಾಗಿ ರೂಪಿಸಲಾಗಿದೆ. ಅದಕ್ಕಾಗಿಯೇ ಅಶೋಕ ಚಕ್ರವನ್ನು ‘ಧರ್ಮದ ಚಕ್ರ’ ಎಂದು ಕೂಡಾ ಕರೆಯಲಾಗುತ್ತದೆ.
  8. ಧರ್ಮವು ಸಂಸ್ಕೃತ ಪದವಾಗಿದ್ದು, “ಸದಾಚಾರ” ಅಥವಾ “ಕರ್ತವ್ಯ” ಎಂದರ್ಥ.
  9. ಅಶೋಕ ಚಕ್ರದ 24 ಕಡ್ಡಿಗಳು ಪರಿಶುದ್ಧತೆ, ಆರೋಗ್ಯ, ಶಾಂತಿ,ತ್ಯಾಗ, ನೈತಿಕತೆ, ಸೇವೆ, ಕ್ಷಮೆ, ಪ್ರೀತಿ,ಸ್ನೇಹ, ಭ್ರಾತೃತ್ವ, ಸಂಘಟನೆ, ಕಲ್ಯಾಣ, ಸಮೃದ್ಧಿ, ಕೈಗಾರಿಕೆ, ಸುರಕ್ಷತೆ, ಅರಿವು, ಸಮಾನತೆ, ಅರ್ಥ, ನೀತಿ, ನ್ಯಾಯ, ಸಹಕಾರ, ಕರ್ತವ್ಯಗಳು, ಹಕ್ಕುಗಳು, ಬುದ್ಧಿವಂತಿಕೆ ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ.
  10. ಜಲಂಧರ್‌ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದರು. ಅದರಂತೆ ಮೊದಲು ಕೆಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:29 am, Mon, 14 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್