ದೆಹಲಿಯಲ್ಲಿ G20 ಶೃಂಗಸಭೆ: ಮೊದಲ ದಿನ ಏನೇನಾಯ್ತು?

ದೆಹಲಿ ಘೋಷಣೆಯನ್ನು ಚೀನಾ ಮತ್ತು ರಷ್ಯಾದೊಂದಿಗೆ ಒಪ್ಪಂದವಾಗಿ ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ರಾಷ್ಟ್ರಗಳಿಗೆ ಅದು ಕರೆ ನೀಡಿದೆ. ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆಗೆ ಪರ್ಯಾಯವಾಗಿ ಇದನ್ನು ನೀಡಲಾಗುತ್ತಿದೆ.

ದೆಹಲಿಯಲ್ಲಿ G20 ಶೃಂಗಸಭೆ: ಮೊದಲ ದಿನ ಏನೇನಾಯ್ತು?
ಜಿ20 ಶೃಂಗಸಭೆಯಲ್ಲಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 09, 2023 | 8:33 PM

ದೆಹಲಿ ಸೆಪ್ಟೆಂಬರ್  09: ದೆಹಲಿಯಲ್ಲಿ (Delhi) ಜಿ20 ಶೃಂಗಸಭೆ (G20 Summit) ನಡೆಯುತ್ತಿದ್ದು, ಮೊದಲ ದಿನವಾದ ಇಂದು (ಶನಿವಾರ) “ಜಾಗತಿಕ ವಿಶ್ವಾಸ ಕೊರತೆ”ಯನ್ನು ಕೊನೆಗೊಳಿಸುವ ಕರೆ, ಯುಎಸ್, ಭಾರತ, ಸೌದಿ ಅರೇಬಿಯಾ ಮತ್ತು ಗಲ್ಫ್ ಮತ್ತು ಅರಬ್ ರಾಜ್ಯಗಳನ್ನು ಸಂಪರ್ಕಿಸುವ ರೈಲು ಮತ್ತು ಹಡಗು ಸಂಪರ್ಕ ಜಾಲವನ್ನು ಪ್ರಾರಂಭಿಸುವುದು ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಭಾರತ ಘೋಷಣೆ ಮೊದಲಾದ ವಿಷಯಗಳ ಬಗ್ಗೆ  ನಿರ್ಧಾರ  ಕೈಗೊಳ್ಳಲಾಗಿದೆ.  ಆಫ್ರಿಕನ್ ಯೂನಿಯನ್ ಅನ್ನು G20 ಯ ಹೊಸ ಖಾಯಂ ಸದಸ್ಯರಾಗಿ ಸೇರ್ಪಡೆಗೊಳಿಸಲಾಗಿದೆ. ಇದು ಹೊಸ ವಿಶ್ವ ಕ್ರಮವನ್ನು ಮುಂದಕ್ಕೆ ತಳ್ಳುತ್ತದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಅವಕಾಶವನ್ನು ನೀಡುತ್ತದೆ.

ಸಮಗ್ರ ರೈಲು ಮತ್ತು ಹಡಗು ಸಂಪರ್ಕ ಜಾಲವು ಅಮೆರಿಕ, ಭಾರತ, ಸೌದಿ ಅರೇಬಿಯಾ ಮತ್ತು ಗಲ್ಫ್ ಮತ್ತು ಅರಬ್ ರಾಜ್ಯಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಸಂಪರ್ಕಿಸುತ್ತದೆ ಎಂದು ಘೋಷಿಸಿತು.

ದೆಹಲಿ ಘೋಷಣೆಯನ್ನು ಚೀನಾ ಮತ್ತು ರಷ್ಯಾದೊಂದಿಗೆ ಒಪ್ಪಂದವಾಗಿ ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ರಾಷ್ಟ್ರಗಳಿಗೆ ಅದು ಕರೆ ನೀಡಿದೆ. ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆಗೆ ಪರ್ಯಾಯವಾಗಿ ಇದನ್ನು ನೀಡಲಾಗುತ್ತಿದೆ.

ಶುದ್ಧ ಇಂಧನಗಳ ಬಳಕೆಯನ್ನು ಹೆಚ್ಚಿಸಲು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು. ಸಸ್ಯ ಮತ್ತು ಪ್ರಾಣಿ ತ್ಯಾಜ್ಯ ಸೇರಿದಂತೆ ವಿವಿಧ ಮೂಲಗಳಿಂದ ಪಡೆದ ಜೈವಿಕ ಇಂಧನಗಳ ವ್ಯಾಪಾರವನ್ನು ಸುಗಮಗೊಳಿಸುವ ಮೂಲಕ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಗಳನ್ನು ಪೂರೈಸುವ ಜಾಗತಿಕ ಪ್ರಯತ್ನಗಳನ್ನು ಈ ಒಕ್ಕೂಟವು ವೇಗಗೊಳಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ನಂಬಿಕೆ ಕೊರತೆಯನ್ನು ಜಿ20 ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರದಿಂದ ನೀಗಿಸಬೇಕು ಎಂದು ಶೃಂಗಸಭೆಹೇಳಿದೆ.

ಭಾರತದೊಂದಿಗೆ ಸಹಯೋಗವನ್ನು ವಿಸ್ತರಿಸಲು ಬಯಸುತ್ತೇವೆ: ಜಪಾನ್ ಪ್ರಧಾನಿ

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭಾರತದೊಂದಿಗಿನ ಸಹಯೋಗವನ್ನು ಪೂರೈಕೆ ಸರಪಳಿಗಳು ಸೇರಿದಂತೆ ವ್ಯಾಪಕ ಕ್ಷೇತ್ರಗಳಿಗೆ ವಿಸ್ತರಿಸಲು ಬಯಸುತ್ತಾರೆ ಎಂದು ಹೇಳಿದರು.ದೇಶಗಳ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸಲು ನಗರದಲ್ಲಿ ದೆಹಲಿ ಮೆಟ್ರೋ ನಿರ್ಮಾಣ ಸೇರಿದಂತೆ ವಿವಿಧ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಜಪಾನ್ ತಲುಪಿಸುತ್ತಿದೆ. ಸಂಪರ್ಕವನ್ನು ಬಲಪಡಿಸುವ ಮೂಲಕ ಜನರನ್ನು ಒಟ್ಟಿಗೆ ಜೋಡಿಸಲು ಪೂರೈಕೆ ಸರಪಳಿಗಳು ಸೇರಿದಂತೆ ವ್ಯಾಪಕ ಕ್ಷೇತ್ರಗಳಿಗೆ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಈ ಪ್ರಯತ್ನವನ್ನು ಒಂದು ಹೆಜ್ಜೆ ಮುಂದೆ ಇಡಲು ಬಯಸುತ್ತೇವೆ. ಇಡೀ ಬಂಗಾಳ ಕೊಲ್ಲಿಯಲ್ಲಿ ಕೈಗಾರಿಕಾ ಮೌಲ್ಯ ಸರಪಳಿಗಳನ್ನು ನಿರ್ಮಿಸುವ ಕೆಲಸ ಮಾಡಲು ನಾವು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಕಾರಿಡಾರ್ ಘೋಷಣೆ ಕುರಿತು ಸೌದಿ ಅರೇಬಿಯಾದ ಮುಹಮ್ಮದ್ ಬಿನ್ ಸಲ್ಮಾನ್

ಆರ್ಥಿಕ ಕಾರಿಡಾರ್ ಘೋಷಣೆ ಕುರಿತು ಮಾತನಾಡಿದ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಈ ಸಭೆಯಲ್ಲಿ ಘೋಷಿಸಲಾದ ಉಪಕ್ರಮ ಮತ್ತು ಆರ್ಥಿಕ ಕಾರಿಡಾರ್ ಯೋಜನೆಯ ಏಕೀಕರಣವನ್ನು ನಾವು ಎದುರು ನೋಡುತ್ತಿದ್ದೇವೆ. ಈ ಸ್ಥಾಪನೆಯ ಹಂತವನ್ನು ತಲುಪಲು ನಮ್ಮೊಂದಿಗೆ ಕೆಲಸ ಮಾಡಿದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ

ನವದೆಹಲಿ ಜಿ-20 ನಾಯಕರ ಶೃಂಗಸಭೆಯ ಘೋಷಣೆಯ ಕುರಿತು ಫ್ರಾನ್ಸ್ ಆರ್ಥಿಕ ಮತ್ತು ಹಣಕಾಸು ಸಚಿವ ಬ್ರೂನೋ ಲೆ ಮೈರ್, ಘೋಷಣೆಗೆ ಒಮ್ಮತವಿದೆ. ಇದು ಭಾರತದ ಜಿ 20 ಅಧ್ಯಕ್ಷತೆಯ ಯಶಸ್ಸು” ಎಂದು ಹೇಳಿದ್ದಾರೆ.

ಇದನ್ನೂ ಓದಿಜಿ20 ಶೃಂಗಸಭೆಯಲ್ಲಿ ಅಂಗೀಕರಿಸಲಿರುವ ‘ನವದೆಹಲಿ ಘೋಷಣೆ’ಗೆ ಒಮ್ಮತ; ನಾಯಕರು ಏನು ಹೇಳಿದರು?

ಭಾರತ-ಮಧ್ಯಪ್ರಾಚ್ಯ-ಯುರೋಪ್ ಸಂಪರ್ಕ ಕಾರಿಡಾರ್ ಅನ್ನು ಶೀಘ್ರದಲ್ಲೇ ಪ್ರಾರಂಭ

ಭಾರತ, ಮಧ್ಯಪ್ರಾಚ್ಯ, ಯುರೋಪ್ ಸಂಪರ್ಕ ಕಾರಿಡಾರ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಭಾರತ, ಯುಎಇ, ಸೌದಿ ಅರೇಬಿಯಾ, ಇಯು, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್ ಒಳಗೊಂಡಿರುವ ಸಂಪರ್ಕ ಮತ್ತು ಮೂಲಸೌಕರ್ಯಗಳ ಸಹಕಾರದ ಕುರಿತು ಇದು ಐತಿಹಾಸಿಕ ಮತ್ತು ಮೊದಲ-ರೀತಿಯ ಉಪಕ್ರಮವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ