ಪಂಜಾಬ್​ನ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ

ಪಂಜಾಬ್​ನ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ
ಸಾಂದರ್ಭಿಕ ಚಿತ್ರ

Ranjit Sagar Dam Helicopter Crash: ಪತಾನ್​ಕೋಟ್​ ಬಳಿ ಇರುವ ರಂಜಿತ್ ಸಾಗರ್ ಡ್ಯಾಂನಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

TV9kannada Web Team

| Edited By: Sushma Chakre

Aug 03, 2021 | 12:47 PM

ಪತಾನ್​​ಕೋಟ್: ಪಂಜಾಬ್​ ರಾಜ್ಯದ ಪತಾನ್​ಕೋಟ್ ಬಳಿ ಇರುವ ರಂಜಿತ್ ಸಾಗರ್ ಡ್ಯಾಂನಲ್ಲಿ (Ranjit Sagar Dam) ಭಾರತೀಯ ಸೇನೆಯ (Indian Army) ಹೆಲಿಕಾಪ್ಟರ್ ಪತನವಾಗಿದೆ. ರಂಜಿತ್ ಸಾಗರ್ ಡ್ಯಾಂನ ನೀರಿನೊಳಗೆ ಇಂದು ಬೆಳಗ್ಗೆ ಹೆಲಿಕಾಪ್ಟರ್ ಬಿದ್ದಿದ್ದು, ಈ ಬಗ್ಗೆ ಇಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಜಾಬ್​ನ ಪತಾನ್​ಕೋಟ್​ನಿಂದ (Pathankot) 30 ಕಿ.ಮೀ. ದೂರದಲ್ಲಿ ಈ ಡ್ಯಾಂ ಇದೆ. ಸೇನಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಾಣಾಪಾಯದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಜಮ್ಮು ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳ ಗಡಿಯಲ್ಲಿರುವ ರಂಜಿತ್ ಸಾಗರ್ ಡ್ಯಾಂ ಜಮ್ಮು ಕಾಶ್ಮೀರದ ಕಥುವಾ ಹಾಗೂ ಪಂಜಾಬ್​ನ ಪತಾನ್​ಕೋಟ್​ ಬಳಿ ಇದೆ. ಇಲ್ಲಿರುವ ಕೆರೆಯೊಳಗೆ ಹೆಲಿಕಾಪ್ಟರ್ ಪತನವಾಗಿದೆ. ಇಂದು ಬೆಳಗ್ಗೆ 10.43ಕ್ಕೆ ಹೆಲಿಕಾಪ್ಟರ್ ಪತನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ಹೆಲಿಕಾಪ್ಟರ್ ಒಳಗೆ ಎಷ್ಟು ಜನರಿದ್ದರು, ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಭಾರತೀಯ ಸೇನೆಯ 254 ಎಎ (254 AA) ಹೆಲಿಕಾಪ್ಟರ್ ಪತನವಾಗಿದ್ದು, ಮೂಲಗಳ ಪ್ರಕಾರ ಪೈಲಟ್ ಮತ್ತು ಸಹ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎನ್​ಡಿಆರ್​ಎಫ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ….

ಇದನ್ನೂ ಓದಿ: Aircraft Crash: ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಟ್ರೈನಿ ಪೈಲಟ್ ಪ್ರಾಣಾಪಾಯದಿಂದ ಪಾರು

ಗಡಿಯಿಂದ ಹಿಂದೆ ಸರಿಯಲು ಅಸ್ಸಾಂ- ನಾಗಾಲ್ಯಾಂಡ್ ಒಪ್ಪಿಗೆ; ಇದು ಐತಿಹಾಸಿಕ ನಿರ್ಧಾರ ಎಂದ ಸಿಎಂ ಹಿಮಾಂತ ಬಿಸ್ವಾ

(Indian Army helicopter crashes near Ranjit Sagar Dam in Punjabs Pathankot Rescue Operation Underway)

Follow us on

Related Stories

Most Read Stories

Click on your DTH Provider to Add TV9 Kannada