ISRO: ಇಸ್ರೋದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ ಯಶಸ್ವಿ
ಸಿಂಗಾಪುರದ ಏಳು ಉಪಗ್ರಹಗಳನ್ನು ಇಸ್ರೋ ಪಿಎಸ್ಎಲ್ವಿ- ಸಿ56 ರಾಕೆಟ್ ಮೂಲಕ ಇಂದು ಬೆಳಿಗ್ಗೆ 6.30ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.
ಶ್ರೀಹರಿಕೋಟಾ ಜು.30: ಇತ್ತೀಚಿಗಷ್ಟೆ ಚಂದ್ರಯಾನ-3 (Chandrayaan-3) ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ವಿಶೇಷ ಸಾಧನೆ ಮಾಡಿತ್ತು. ಇದೀಗ ಇಸ್ರೋ ಸಿಂಗಾಪುರದ ಏಳು ಉಪಗ್ರಹಗಳನ್ನು (Seven Singaporean Satellites) ಪಿಎಸ್ಎಲ್ವಿ- ಸಿ56 ರಾಕೆಟ್ ಮೂಲಕ ಇಂದು (ಜು.30) ಬೆಳಿಗ್ಗೆ 6.30ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.
??PSLV-C56/??DS-SAR Mission: The mission is successfully accomplished.
PSLV-C56 vehicle launched all seven satellites precisely into their intended orbits. ?
Thanks to @NSIL_India and Singapore, for the contract.
— ISRO (@isro) July 30, 2023
ನಭಕ್ಕೆ ಹಾರಿದ ಏಳು ಉಪಗ್ರಹಗಳಲ್ಲಿ ಇಸ್ರೇಲ್ ವಿಜ್ಞಾನಿಗಳು ಸಿದ್ಧಪಡಿಸಿರುವ ಡಿಎಸ್-ಸಿಂಥೆಟಿಕ್ ಅಪೆರ್ಚರ್ ಏರೋಸ್ಪೇಸ್ ಎಂಬ ಉಪಗ್ರಹ 360 ಕೇಜಿ ತೂಕವಿದ್ದು, ಇದು ಎಂತಹ ಹವಾಮಾನವಿದ್ದಾಗಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಿಂಗಾಪುರ ರಕ್ಷಣಾ ಇಲಾಖೆ ತಯಾರಿಸಿರುವ ಮೂರು ಉಪಗ್ರಹಗಳು ನಭಕ್ಕೆ ಹಾರಿವೆ. ಇದರಲ್ಲಿ ಸ್ವಯಂಚಾಲಿತ ಕಾರ್ ಚಾಲನೆಗೆ ಸಹಾಯ ಒದಗಿಸುವ ಉಪಗ್ರಹಗವಿದೆ.
ಇದನ್ನುಓದಿ: ISRO Satellite Launch: ಚಂದ್ರಯಾನ 3ರ ಬಳಿಕ ಇಸ್ರೋದಿಂದ ಮತ್ತೊಂದು ಸಾಧನೆ, ಒಂದೇ ಬಾರಿಗೆ 6 ಉಪಗ್ರಹಗಳ ಉಡಾವಣೆ
ಇನ್ನು ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಯೋಜನೆಯಡಿ ಈ ಉಪಗ್ರಹಗಳ ಉಡಾವಣೆಯಾಗಿದ್ದು, ಈ ಯೋಜನೆಯಡಿ ಖಾಸಗಿಯವರಿಗೂ ಉಪಗ್ರಹ ಉಡಾವಣೆಗೆ ಅವಕಾಶ ನೀಡಲಾಗಿದೆ. ವೆಲೊಕ್ಸ್-ಎಮ್, ಆರ್ಕೇಡ್ ಅಟ್ಮಾಸ್ಫಿಯರಿಕ್ ಕಪ್ಲಿಂಗ್ ಆಂಡ್ ಡೈನಾಮಿಕ್ಸ್ ಎಕ್ಸಪ್ಲೋರರ್ (ARCADE), ಸ್ಕೂಬ್-2, ಗೆಲೇಸಿಯ-2, ಒಆರ್ಬಿ12-ಸ್ಟ್ರೈಡರ್, ನೂಲಯನ್ ಎಂಬ ಹೆಸರಿನ ಉಪಗ್ರಹಗಳನ್ನು ಪಿಎಸ್ಎಲ್ವಿ- ಸಿ56 ರಾಕೆಟ್ ಹೊತ್ತೊಯ್ದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:44 am, Sun, 30 July 23