AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ಒತ್ತಡದಿಂದಾಗಿ ನ್ಯಾಯಾಂಗ ಅಪಾಯದಲ್ಲಿದೆ ಎಂದು ಸಿಜೆಐಗೆ ಪತ್ರ ಬರೆದ 600 ವಕೀಲರು

ರಾಜಕೀಯ ಒತ್ತಡದಿಂದಾಗಿ ನ್ಯಾಯಾಂಗ(Judiciary) ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿರುವ 600 ವಕೀಲರು        ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ಗೆ ಪತ್ರ ಬರೆದಿದ್ದಾರೆ. ರಾಜಕೀಯ ಒತ್ತಡದಿಂದ ನ್ಯಾಯಾಂಗವನ್ನು ರಕ್ಷಿಸುವುದು ಎಂಬ ಶೀರ್ಷಿಕೆಯಲ್ಲಿ ಪತ್ರ ಬರೆದಿದ್ದು ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್ವಾಲ್, ಚೇತನ್ ಮಿತ್ತಲ್, ಪಿಂಕಿ ಆನಂದ್ ಮತ್ತು ಸ್ವರೂಪಮಾ ಚತುರ್ವೇದಿ ಸೇರಿದಂತೆ ಪ್ರಮುಖ ವಕೀಲರು ಸಹಿ ಹಾಕಿದ್ದಾರೆ.

ರಾಜಕೀಯ ಒತ್ತಡದಿಂದಾಗಿ ನ್ಯಾಯಾಂಗ ಅಪಾಯದಲ್ಲಿದೆ ಎಂದು ಸಿಜೆಐಗೆ ಪತ್ರ ಬರೆದ 600 ವಕೀಲರು
ಡಿವೈ ಚಂದ್ರಚೂಡ್​
ನಯನಾ ರಾಜೀವ್
|

Updated on: Mar 28, 2024 | 10:43 AM

Share

ರಾಜಕೀಯ ಒತ್ತಡದಿಂದಾಗಿ ನ್ಯಾಯಾಂಗ(Judiciary) ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿರುವ 600 ವಕೀಲರು        ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ಗೆ ಪತ್ರ ಬರೆದಿದ್ದಾರೆ. ರಾಜಕೀಯ ಒತ್ತಡದಿಂದ ನ್ಯಾಯಾಂಗವನ್ನು ರಕ್ಷಿಸುವುದು ಎಂಬ ಶೀರ್ಷಿಕೆಯಲ್ಲಿ ಪತ್ರ ಬರೆದಿದ್ದು ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್ವಾಲ್, ಚೇತನ್ ಮಿತ್ತಲ್, ಪಿಂಕಿ ಆನಂದ್ ಮತ್ತು ಸ್ವರೂಪಮಾ ಚತುರ್ವೇದಿ ಸೇರಿದಂತೆ ಪ್ರಮುಖ ವಕೀಲರು ಸಹಿ ಹಾಕಿದ್ದಾರೆ.

ನ್ಯಾಯಾಂಗದ ಸಮಗ್ರತೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ನಿರ್ದಿಷ್ಟ ಹಿತಾಸಕ್ತಿಯ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡ ಪ್ರಕರಣಗಳಲ್ಲಿ ನ್ಯಾಯಾಂಗದ ತೀರ್ಪಿನ ಮೇಲೆ ಪ್ರಭಾವ ಬೀರಿ ಒತ್ತಡ ಹೇರುವ ತಂತ್ರವನ್ನು ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.

ಇಂತಹ ಕ್ರಮಗಳು ಪ್ರಜಾಪ್ರಭುತ್ವದ ಚೌಕಟ್ಟಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತದೆ ಎಂದಿದ್ದಾರೆ. ಅಖಿಲ ಮಣಿಪುರ ಬಾರ್ ಅಸೋಸಿಯೇಷನ್ ​​ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು ನ್ಯಾಯಾಂಗದ ಮೇಲಿನ ದಾಳಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ಮತ್ತಷ್ಟು ಓದಿ: ಕೋರ್ಟ್​ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ಎಎಪಿಗೆ ಹೈಕೋರ್ಟ್ ಎಚ್ಚರಿಕೆ ನೀಡಬೇಕು: ವೈಭವ್ ಸಿಂಗ್

ನ್ಯಾಯಾಲಯಗಳನ್ನು ಕಾನೂನಿನ ನಿಯಮವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ. ಇವು ಕೇವಲ ಟೀಕೆಗಳಲ್ಲ, ಅವು ನ್ಯಾಯಾಂಗ ವ್ಯವಸ್ಥೆಗೆ ಹಾನಿ ಮಾಡುವ ನೇರ ದಾಳಿಗಳಾಗಿವೆ. ನ್ಯಾಯಾಂಗದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ದಾಳಿಗಳ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರದಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಲು ನ್ಯಾಯಾಂಗದ ಬಗ್ಗೆ ಇಲ್ಲಸಲ್ಲದ ಆರೋಪಗಳು ಮಾಡಲಾಗುತ್ತಿದೆ. ಅಪಖ್ಯಾತಿಗೊಳಿಸುವ ಮತ್ತು ನ್ಯಾಯಾಲಯಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ದುರ್ಬಲಗೊಳಿಸುವ ಗುರಿಯನ್ನು ಕೆಲವರು ಹೊಂದಿದ್ದಾರೆ ಎಂದು ಬರೆಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ