AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರಿ ಪಂಡಿತರು ಪಲಾಯನ ಮಾಡುತ್ತಿದ್ದಾರೆ, ಶಾಂತಿ ನೆಲೆಸಲು ಕ್ರಮಕೈಗೊಳ್ಳಿ: ಮೋದಿಗೆ ರಾಹುಲ್ ಗಾಂಧಿ ಒತ್ತಾಯ

ಬ್ಯಾಂಕ್ ಮ್ಯಾನೇಜರ್, ಶಿಕ್ಷಕರು ಮತ್ತು ಅನೇಕ ಅಮಾಯಕರು ಪ್ರತಿದಿನ ಹತ್ಯೆಯಾಗುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಪಲಾಯನ ಮಾಡುತ್ತಿದ್ದಾರೆ. ಅವರನ್ನು ಕಾಪಾಡಬೇಕಾದವರಿಗೆ ಸಮಯವಿಲ್ಲ, ಅವರು ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಕಾಶ್ಮೀರಿ ಪಂಡಿತರು ಪಲಾಯನ ಮಾಡುತ್ತಿದ್ದಾರೆ, ಶಾಂತಿ ನೆಲೆಸಲು ಕ್ರಮಕೈಗೊಳ್ಳಿ: ಮೋದಿಗೆ ರಾಹುಲ್ ಗಾಂಧಿ ಒತ್ತಾಯ
ರಾಹುಲ್ ಗಾಂಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 02, 2022 | 10:53 PM

Share

ದೆಹಲಿ: ಕಾಶ್ಮೀರದಲ್ಲಿ ಮುಗ್ಧರು ಬಲಿಯಾಗುತ್ತಿದ್ದು, ಕಾಶ್ಮೀರಿ ಪಂಡಿತರು (Kashmiri Pandits) ಪಲಾಯನ ಮಾಡುತ್ತಿದ್ದಾರೆ ಎಂದಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೂಡಲೇ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ (Narendra Modi) ಒತ್ತಾಯಿಸಿದ್ದಾರೆ. “ಬ್ಯಾಂಕ್ ಮ್ಯಾನೇಜರ್, ಶಿಕ್ಷಕರು ಮತ್ತು ಅನೇಕ ಅಮಾಯಕರು ಪ್ರತಿದಿನ ಹತ್ಯೆಯಾಗುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಪಲಾಯನ ಮಾಡುತ್ತಿದ್ದಾರೆ. ಅವರನ್ನು ಕಾಪಾಡಬೇಕಾದವರಿಗೆ ಸಮಯವಿಲ್ಲ, ಅವರು ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿಯು ಅಧಿಕಾರ ಪಡೆಯಲು ಮಾತ್ರ ಕಾಶ್ಮೀರ ಬಗ್ಗೆ ಮಾತನಾಡುತ್ತದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರೇ, ಕಾಶ್ಮೀರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಿ ಎಂದಿದ್ದಾರೆ ರಾಹುಲ್. ಕಳೆದ ಕೆಲವು ದಿನಗಳಲ್ಲಿ ಹತ್ಯೆಯಾದವರ ಕೊಲಾಜ್ ಅನ್ನು ಹಂಚಿಕೊಂಡಿರುವ ರಾಹುಲ್ “ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಭಯಾನಕತೆ” ಎಂದು ಹೇಳಿದ್ದಾರೆ.  ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಉದ್ದೇಶಿತ ಹತ್ಯೆಗಳು ನಡೆಯುತ್ತಲೇ ಇದೆ ಗುರುವಾರ ಕುಲ್ಗಾಮ್ ಜಿಲ್ಲೆಯಲ್ಲಿ ಇಲಕ್ವೈ ದೇಹತಿ ಬ್ಯಾಂಕ್‌ನ ವ್ಯವಸ್ಥಾಪಕ ವಿಜಯ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕುಮಾರ್ ರಾಜಸ್ಥಾನ ಮೂಲದವರಾಗಿದ್ದಾರೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಣಿವೆಯಿಂದ ಪಲಾಯನ ಮಾಡುವಾಗ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಾಶ್ಮೀರಿ ಪಂಡಿತರು ಸರತಿ ಸಾಲಿನಲ್ಲಿ ನಿಂತಿರುವ ಫೋಟೊಗಳಿರುವ ಮಾಧ್ಯಮ ವರದಿಗಳನ್ನು ಹಂಚಿಕೊಂಡಿದ್ದಾರೆ.

100 ಕಾಶ್ಮೀರಿ ಹಿಂದೂ ಕುಟುಂಬಗಳು ವಲಸೆ ಹೋಗಿವೆ. ಭಯಭೀತರಾದ ಜನಸಮೂಹವಿರುವುದು ಉಕ್ರೇನ್ ನಲ್ಲಿ ಅಲ್ಲ ಶ್ರೀನಗರ ವಿಮಾನ ನಿಲ್ದಾಣದಲ್ಲಿ! ಇಂದು ಮತ್ತೆ ಭಯೋತ್ಪಾದಕರು ರಾಜಸ್ಥಾನದ ನೋಹರ್ ನಿವಾಸಿ ವಿಜಯ್ ಬೇನಿವಾಲ್ ಎಂಬ ಬ್ಯಾಂಕ್ ಮ್ಯಾನೇಜರ್ ಅವರನ್ನು ಹತ್ಯೆ ಮಾಡಿದ್ದಾರೆ. ‘ಪ್ರಜಾಪ್ರಭುತ್ವದ ವಿಘಟನೆ’ಯಲ್ಲಿ ತೊಡಗಿರುವ ರಾಜಸ್ಥಾನದ ಬಿಜೆಪಿ ನಾಯಕರು ಮೋದಿಯವರಿಂದ ಕ್ರಮಕ್ಕೆ ಏಕೆ ಒತ್ತಾಯಿಸುವುದಿಲ್ಲ” ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ