Kedarnath helicopter crash: ಕೇದಾರನಾಥದಲ್ಲಿ MI-17 ಹೆಲಿಕಾಪ್ಟರ್ ಪತನ

ಉತ್ತರಾಖಂಡದ ಕೇದಾರನಾಥದಿಂದ ಗೌಚಾರ್‌ಗೆ ಏರ್ಲಿಫ್ಟ್ ಮಾಡಲಾಗುತ್ತಿದ್ದ ವೇಳೆ ಈ ದುರಂತ ನಡೆದಿದೆ. ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಆಕಸ್ಮಿಕ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಹೇಳಲಾಗಿದೆ.

Kedarnath helicopter crash: ಕೇದಾರನಾಥದಲ್ಲಿ MI-17 ಹೆಲಿಕಾಪ್ಟರ್ ಪತನ
MI-17 ಹೆಲಿಕಾಪ್ಟರ್ ಪತನ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 31, 2024 | 11:18 AM

ಉತ್ತರಾಖಂಡ, ಆ.31: MI-17 ಹೆಲಿಕಾಪ್ಟರ್ ಉತ್ತರಾಖಂಡದ ಕೇದಾರನಾಥನಲ್ಲಿ ಪತನಗೊಂಡಿದೆ. ಉತ್ತರಾಖಂಡದ ಕೇದಾರನಾಥದಿಂದ ಗೌಚಾರ್‌ಗೆ ಏರ್ಲಿಫ್ಟ್ ಮಾಡಲಾಗುತ್ತಿದ್ದ ವೇಳೆ ಈ ದುರಂತ ನಡೆದಿದೆ. ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಆಕಸ್ಮಿಕ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ಕೂಡ ವೈರಲ್​​ ಆಗಿದೆ. ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಲಿಂಚೋಲಿಯ ಮಂದಾಕಿನಿ ನದಿಯ ಬಳಿ ಪತನಗೊಂಡಿದೆ.

ಇನ್ನು ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇದಾರನಾಥ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ತಾಂತ್ರಿಕ ದೋಷ ಹೊಂದಿದ್ದ  ಹೆಲಿಕಾಪ್ಟರ್​​​ನ್ನು ಏರ್ಲಿಫ್ಟ್  ಮಾಡುತ್ತಿದ್ದ ವೇಳೆ ರಭಸದಿಂದ ಬೀಸುತ್ತಿದ್ದ ಗಾಳಿಯನ್ನು ನಿಯಂತ್ರಣ ಮಾಡಲಾಗದೇ ಪತನಗೊಂಡಿದೆ ಎಂದು ಹೇಳಲಾಗಿದೆ.

ಹೆಲಿಕಾಪ್ಟರ್ ಸಮೀಪದ ಲಿಂಚೋಲಿಯಲ್ಲಿ ನದಿಗೆ ಬಿದ್ದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ರಕ್ಷಣಾ ತಂಡವು ಲಿಂಚೋಲಿಯಲ್ಲಿ ಪೊಲೀಸರ ಮೂಲಕ ಮಾಹಿತಿ ಪಡೆದಿದ್ದಾರೆ. ಎಸ್‌ಡಿಆರ್‌ಎಫ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಅಧಿಕೃತವಾಗಿ ಹೇಳಿದೆ.

ಪತನಗೊಂಡ ಹೆಲಿಕಾಪ್ಟರ್ ಈ ಹಿಂದೆ ಕೇದಾರನಾಥ ದೇವಸ್ಥಾನಕ್ಕೆ ಪ್ರಯಾಣಿಕರನ್ನು ಸಾಗಿಸುವಲ್ಲಿ ತೊಡಗಿಸಿಕೊಂಡಿತ್ತು. ಇನ್ನು ಕೇದಾರನಾಥದಲ್ಲಿ ಭಾರೀ ಮಳೆಯಿಂದ ಚಾರಣ ಮಾರ್ಗ ಹಾನಿಯಾಗಿದೆ. ಜುಲೈ 31 ರಿಂದ ಕೇದಾರನಾಥಕ್ಕೆ ಹೋಗುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದ ಕ್ಯಾಬ್​​​​ ಡ್ರೈವರ್​ನನ್ನು ಎತ್ತಿ ನೆಲಕ್ಕೆ ಎಸೆದ ಮಾಲೀಕ

ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಳೆಯಿಂದ ಭೂಕುಸಿತ ಕಂಡಿದ್ದು, ಸಾವಿರಾರು ಜನರು ಇಲ್ಲಿ ಸಿಲುಕಿಕೊಂಡಿದ್ದಾರೆ, ಖಾಸಗಿ ಹೆಲಿಕಾಪ್ಟರ್‌ಗಳಲ್ಲದೆ ವಾಯುಪಡೆಯ ಚಿನೂಕ್ ಮತ್ತು MI17 ಹೆಲಿಕಾಪ್ಟರ್‌ಗಳ ಸಹಾಯದಿಂದ ಅವರ ರಕ್ಷಣೆ ಮಾಡಲಾಗುತ್ತಿದೆ. ಆಗಸ್ಟ್‌ನಲ್ಲಿ ಚಾರಣ ಮಾರ್ಗವನ್ನು ನಿರ್ಬಂಧ ಹೇರಲಾಗಿದ್ದು, ಅದರೂ ಜನರು ಹೆಲಿಕಾಪ್ಟರ್‌ ಮೂಲಕ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Sat, 31 August 24