ಕಳೆದ 20 ವರ್ಷಗಳಲ್ಲಿ 543 ಲೋಕಸಭಾ ಕ್ಷೇತ್ರಗಳ ಪೈಕಿ 349ರಲ್ಲಿ ಮಹಿಳಾ ಸಂಸದರೇ ಇರಲಿಲ್ಲ

ಕಳೆದ 20 ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರನ್ನು ಹೆಚ್ಚಾಗಿ ಚುನಾವಣಾ ಕಣಕ್ಕಿಳಿಸಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಇದುವರೆಗೆ 434 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ 317 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಳೆದ 20 ವರ್ಷಗಳಲ್ಲಿ 543 ಲೋಕಸಭಾ ಕ್ಷೇತ್ರಗಳ ಪೈಕಿ 349ರಲ್ಲಿ ಮಹಿಳಾ ಸಂಸದರೇ ಇರಲಿಲ್ಲ

Updated on: May 03, 2024 | 11:24 AM

ದೇಶದಲ್ಲಿ ಲೋಕಸಭೆ ಚುನಾವಣೆ(Lok Sabha Election) ನಡೆಯುತ್ತಿದೆ. ಏಳು ಹಂತಗಳ ಪೈಕಿ ಎರಡು ಈಗಾಗಲೇ ನಡೆದಿದೆ. ಒಟ್ಟು 543 ಸಂಸದೀಯ ಕ್ಷೇತ್ರಗಳಿವೆ. ಈ ಪೈಕಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದುವರೆಗೆ 434 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ 317 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ, ಎರಡೂ ಪಕ್ಷಗಳಲ್ಲಿ ಮಹಿಳಾ ಸಂಸದೀಯ ಅಭ್ಯರ್ಥಿಗಳ ಭಾಗವಹಿಸುವಿಕೆ ಅಷ್ಟಾಗಿ ಇಲ್ಲ.

ಇಲ್ಲಿಯವರೆಗೆ ಘೋಷಿಸಲಾದ ಒಟ್ಟು ಅಭ್ಯರ್ಥಿಗಳ ಪೈಕಿ ಕೇಸರಿ ಪಕ್ಷದಲ್ಲಿ ಮಹಿಳಾ ಅಭ್ಯರ್ಥಿಗಳ ಪಾಲು ಶೇಕಡಾ 16 ರಷ್ಟಿದ್ದರೆ, ಕಾಂಗ್ರೆಸ್ ಶೇಕಡಾ 14 ರಷ್ಟಿದೆ. ಅಂದರೆ ಬಿಜೆಪಿಯಲ್ಲಿ ಪ್ರತಿ 7ರಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಮತ್ತು ಗ್ರ್ಯಾಂಡ್ ಓಲ್ಡ್ ಪಾರ್ಟಿಯಲ್ಲಿ ಪ್ರತಿ 6 ಅಭ್ಯರ್ಥಿಗಳಲ್ಲಿ ಒಬ್ಬ ಮಹಿಳಾ ಪ್ರತಿನಿಧಿ ಇದ್ದಾರೆ.

ಇನ್ನೂ ಕೆಲವು ಡೇಟಾವನ್ನು ಗಮನಿಸಿದರೆ, 2004 ಮತ್ತು 2019 ರ ನಡುವೆ ಒಟ್ಟು 1934 ಪುರುಷ ಸಂಸದರು ಮತ್ತು 248 ಮಹಿಳಾ ಸಂಸದರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇದಲ್ಲದೆ, ದೇಶದ ಒಟ್ಟು 543 ಸ್ಥಾನಗಳಲ್ಲಿ 349 ಸ್ಥಾನಗಳಿದ್ದು, ಕಳೆದ 20 ವರ್ಷಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ.

ಮತ್ತಷ್ಟು ಓದಿ: ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಮತದಾನದಲ್ಲಿಯೂ ಮಹಿಳೆಯರದ್ದೇ ಮೇಲುಗೈ

ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 99 ಮಹಿಳಾ ಸಂಸದರನ್ನು ಸಂಸತ್ತಿಗೆ ಕಳುಹಿಸಿದ್ದರೆ, ಕಾಂಗ್ರೆಸ್ 46, ಟಿಎಂಸಿ 25, ಬಿಜೆಡಿ 8, ಸಿಪಿಎಂ 7, ವೈಎಸ್‌ಆರ್ ಕಾಂಗ್ರೆಸ್ 6, ಶಿವಸೇನೆ 6, ಎನ್‌ಸಿಪಿ 6, ಡಿಎಂಕೆ 6, ಬಿಎಸ್‌ಪಿ 6, ಎಐಎಡಿಎಂಕೆ 4, ಜೆಡಿಯು 3, ಸ್ವತಂತ್ರರು 3, ಟಿಆರ್ ಎಸ್ 3, ಎಲ್ ಜೆಪಿ 2, ಪಿಡಿಪಿ 2, ಆರ್ ಎಲ್ ಡಿ 2.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us