ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಂತಂತ್ರ ಬಂದ್ರೆ ಬಿಜೆಪಿ ಮಾಡುತ್ತಾ ಆಪರೇಷನ್ ಕಮಲ? ತಿರುಗೇಟಿಗೆ ಕಾಂಗ್ರೆಸ್ ಸಜ್ಜು
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಈ ಮಧ್ಯೆ ಅಂತಂತ್ರ ಫಲಿತಾಂಶ ಬಂದರೆ ಬಿಜೆಪಿ ಆಪರೇಷನ್ ಕಮಲ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲ್ಲುವ ಹೊಸ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕರ್ನಾಟಕಕ್ಕೆ ತರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ದೆಹಲಿ, ನವೆಂಬರ್ 22: ನಾಳೆ ಮಹಾರಾಷ್ಟ್ರ (Maharashtra) ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಒಂದು ವೇಳೆ ಅಂತಂತ್ರ ಫಲಿತಾಂಶ ಬಂದರೆ ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆ. ಈ ಭಯದಿಂದಾಗಿ ನಾಳೆ ಚುನಾವಣೆಯಲ್ಲಿ ಗೆಲ್ಲುವ ಹೊಸ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕರ್ನಾಟಕಕ್ಕೆ ಕರೆದುಕೊಂಡು ಬರಬಹುದು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಕಂಡೂ ಕೇಳರಿಯದ ಮಹಾ ರಾಜಕೀಯ ಕದನಕ್ಕೆ ಸಾಕ್ಷಿ ಆಗಿದೆ. ಒಂದು ಕಡೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ. ಮತ್ತೊಂದು ಕಡೆ ವಿಪಕ್ಷ ಕಾಂಗ್ರೆಸ್. ಇವರ ಜೊತೆಗೆ ಇಬ್ಭಾಗವಾಗಿರುವ ಎನ್‌ಸಿಪಿ ಮತ್ತು ಶಿವಸೇನೆ ಬಣಗಳು. ಕಳೆದ ಬಾರಿ ಜೊತೆ ಜೊತೆಯಾಗಿ ಸ್ಪರ್ಧಿಸಿದ್ದವರು ಈ ಬಾರಿ ಬದ್ಧವೈರಿಗಳಾಗಿ ಕಾದಾಡಿದ್ದರು.
ಇನ್ನು ಈ ನಡುವೆ ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆ. ಹಾಗಾಗಿ ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಲು ಸಜ್ಜಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಹೊಸ ಅಭ್ಯರ್ಥಿಗಳನ್ನು ಕರ್ನಾಟಕಕ್ಕೆ ಕರೆದುಕೊಂಡು ಕಾಂಗ್ರೆಸ್ ಬರಬಹುದು. ಮ್ಯಾಜಿಕ್ ನಂಬರ್ 145 ಬಂದರೆ ಯಾವುದೇ ಆಪರೇಷನ್ ಕಮಲ ನಡೆಯುದಿಲ್ಲ. ಸರ್ಕಾರ ರಚನೆ ಮಾಡಲಾಗುತ್ತದೆ. ಒಂದು ವೇಳೆ ಅಂತಂತ್ರ ಬಂದರೆ ಆಪರೇಷನ್ ಕಮಲ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ರಾಹುಲ್ ಗಾಂಧಿ, ಶರದ್ ಪವಾರ್ ಅವರ ಎನ್‌ಸಿಪಿ ಹಾಗೂ ಉದ್ಧವ್ ಠಾಕ್ರೆ ಬಣದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಬಣ ಮತ್ತು ಬಿಜೆಪಿ, ಶಿವಸೇನೆ ಶಿಂಧೆ, ಎನ್ಸಿಪಿ ಅಜಿತ್ ಪವಾರ್ ಬಣದ ಮಹಾಯುತಿ ಬಣದ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಗೆ ಇಂದು ಮತದಾನ, ಜಾರ್ಖಂಡ್ನಲ್ಲಿ ಕೊನೆಯ ಹಂತದ ವೋಟಿಂಗ್
ಇನ್ನು ಕೆಲ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎಗೆ ಅಧಿಕಾರ ಎಂದು ಭವಿಷ್ಯ ನುಡಿದಿದ್ದರೆ, ಇನ್ನು ಕೆಲ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಎಂದು ಹೇಳಿದೆ. ಇದು ಕೇವಲ ಅಂದಾಜು ಲೆಕ್ಕಾಚಾರ ವಾಗಿದ್ದು, ನವೆಂಬರ್ 23 ರಂದು ಅಸಲಿ ಫಲಿತಾಂಶ ಹೊರ ಬೀಳಲಿದೆ.
ನಮಗೆ ಜನಾದೇಶದ ಮೇಲೆ ವಿಶ್ವಾಸವಿದೆ ಎಂದ ಸಿಟಿ ರವಿ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ, ಮಹಾರಾಷ್ಟ್ರ ಚುನಾವಣೆಯಲ್ಲಿ ಜನಾದೇಶ ಒಪ್ಪುತ್ತೇವೆ. ಗೋವಾ ಚುನಾವಣೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ವಿಮಾನ ಬುಕ್ ಮಾಡಿದ್ದರು. ಹರಿಯಾಣ ಚುನಾವಣೆ ವೇಳೆಯೂ ಹೋಟೆಲ್ ಬುಕ್ ಮಾಡಿದ್ದರು. ಫಲಿತಾಂಶ ಬಂದ ಮೇಲೆ ಪೆಚ್ಚು ಮೋರೆ ಹಾಕಿದ್ದರು. ಗೆದ್ದಾಗ ಜನಾದೇಶ, ಸೋತಾಗ ಇವಿಎಂ ಅಂತಾರೆ. ಸೋತರೆ EVM ಕಾರಣ ಅನ್ನೋದು ಕಾಂಗ್ರೆಸ್ ಕಾಯಿಲೆ. ನಮಗೆ ಜನಾದೇಶದ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:26 pm, Fri, 22 November 24