ನಂದಿಗ್ರಾಮ ಪ್ರಕರಣ: ಮುಖ್ಯ ರಕ್ಷಣಾಧಿಕಾರಿಯ ಅಮಾನತು ಆದೇಶ ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಮನವಿ

ಚುನಾವಣಾ ಆಯೋಗದ ಕ್ರಮಕ್ಕೆ ಮಾರ್ಚ್ 14ರಂದು ಮಮತಾ ಬ್ಯಾನರ್ಜಿ ಎರಡು ಪುಟಗಳ ಪತ್ರದ ಮುಖೇನ ಪ್ರತಿಕ್ರಿಯಿಸಿದ್ದಾರೆ. ಘಟನೆ ನಡೆದ ದಿನದ ವ್ಯವಸ್ಥೆಯ ಬಗ್ಗೆ ಮಮತಾಗೆ ಸಂಪೂರ್ಣ ಮಾಹಿತಿ ಇತ್ತು ಹಾಗೂ ಒಪ್ಪಿಗೆಯೂ ಇತ್ತು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾಗೆ ತಿಳಿಸಿದ್ದಾರೆ.

ನಂದಿಗ್ರಾಮ ಪ್ರಕರಣ: ಮುಖ್ಯ ರಕ್ಷಣಾಧಿಕಾರಿಯ ಅಮಾನತು ಆದೇಶ ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಮನವಿ
ಕೊಲ್ಕತ್ತಾದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡ ಮಮತಾ ಬ್ಯಾನರ್ಜಿ
Follow us
TV9 Web
| Updated By: ganapathi bhat

Updated on:Apr 06, 2022 | 7:03 PM

ಕೋಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ನಂದಿಗ್ರಾಮದಲ್ಲಿ ದಾಳಿಯಾಗಿತ್ತು. ಅದರಿಂದ ದೀದಿ ಎರಡು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಈ ಘಟನೆ ವರದಿಯಾಗುತ್ತಿದ್ದಂತೆ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಮುಖ್ಯ ರಕ್ಷಣಾ ಅಧಿಕಾರಿ ಈ ಘಟನೆಯಲ್ಲಿ ಯಾವುದೇ ರೀತಿಯಿಂದಲೂ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಕ್ರಮಕ್ಕೆ ಮಾರ್ಚ್ 14ರಂದು ಮಮತಾ ಬ್ಯಾನರ್ಜಿ ಎರಡು ಪುಟಗಳ ಪತ್ರದ ಮುಖೇನ ಪ್ರತಿಕ್ರಿಯಿಸಿದ್ದಾರೆ. ಘಟನೆ ನಡೆದ ದಿನದ ವ್ಯವಸ್ಥೆಯ ಬಗ್ಗೆ ಮಮತಾಗೆ ಸಂಪೂರ್ಣ ಮಾಹಿತಿ ಇತ್ತು ಹಾಗೂ ಒಪ್ಪಿಗೆಯೂ ಇತ್ತು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಅಮಾನತು ಆದೇಶವನ್ನು ಹಿಂಪಡೆಯುವಂತೆಯೂ ಕೇಳಿಕೊಂಡಿದ್ದಾರೆ.

ಚುನಾವಣಾ ಆಯೋಗವು ರಕ್ಷಣಾ ನಿರ್ದೇಶಕ ವಿವೇಕ್ ಸಾಹೇ ಮತ್ತಿತರರನ್ನು ಅಮಾನತುಗೊಳಿಸಿದೆ. ಜತೆಗೆ, ಅಂದು (ಮಾರ್ಚ್ 10) ದಾಳಿಗೆ ಯಾವುದೇ ಪೂರ್ವ ನಿಯೋಜಿತ ಸಿದ್ಧತೆಗಳಾಗಿರಲಿಲ್ಲ. ನಡೆದಿರುವ ಅವಘಡವು ಸಂಪೂರ್ಣ ರಕ್ಷಣಾ ವೈಫಲ್ಯದಿಂದ ಘಟಿಸಿದ್ದಾಗಿದೆ ಎಂದು ಹೇಳಿದೆ. ಝಡ್ ಪ್ಲಸ್ ಸೆಕ್ಯುರಿಟಿ ಹೊಂದಿರುವ ವ್ಯಕ್ತಿಯೊಬ್ಬರಿಗೆ ರಕ್ಷಣೆ ನೀಡಲು ವಿಫಲವಾಗಿದ್ದಾರೆ ಎಂದು ವಿವೇಕ್ ಸಾಹೇಗೆ ನೀಡಿರುವ ಅಮಾನತು ಪತ್ರದಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮಮತಾ ಮೇಲೆ ನಡೆದ ದಾಳಿಯಲ್ಲಿ ಎಡ ಕಾಲಿಗೆ ಗಾಯವಾಗಿತ್ತು. ಘಟನೆ ಒಂದು ಪೂರ್ವ ನಿಯೋಜಿತ ಕೃತ್ಯ, ವಿಪಕ್ಷದ ಷಡ್ಯಂತ್ರ ಎಂದು ಮಮತಾ ಹಾಗೂ ಇತರ ಟಿಎಂಸಿ ನಾಯಕರು ಆರೋಪಿಸಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ಕುರಿತಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗ ಮಾರ್ಚ್ 12ರಂದು ಚುನಾವಣಾ ಆಯೋಗವನ್ನು (EC) ಭೇಟಿ ಮಾಡಿದೆ. ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ ಹಿಂದಿರುಗುವ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆರು ಮಂದಿ ಟಿಎಂಸಿ ಸದಸ್ಯರ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು. ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ಅವರನ್ನು ಕೂಡ ಭೇಟಿಯಾಗಿತ್ತು.

ಒಂದು ಗಂಟೆಗೂ ಹೆಚ್ಚು ಕಾಲ ಚುನಾವಣಾ ಆಯೋಗದ ಸದಸ್ಯರ ಜತೆ ಮಾತುಕತೆ ನಡೆಸಿದ ಟಿಎಂಸಿ ನಿಯೋಗ ಜ್ಞಾಪಕ ಪತ್ರವನ್ನೂ ಸಲ್ಲಿಸಿತ್ತು. ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಟ್ವೀಟ್ ಮತ್ತು ಇತರ ಮಾರ್ಗಗಳ ಮೂಲಕ ಹೇಗೆ ಗುರಿಯಾಗಿಸಿದ್ದಾರೆ ಎಂದೂ ತಿಳಿಸಿತ್ತು.

ಇದನ್ನೂ ಓದಿ: West Bengal Assembly Elections 2021: ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಅಬ್ಬರಿಸಿದ ಮಮತಾ ಬ್ಯಾನರ್ಜಿ

ನಾನಿನ್ನೂ ನೋವು ಅನುಭವಿಸುತ್ತಿದ್ದೇನೆ, ಆದರೆ ಜನರ ನೋವು ಇನ್ನೂ ದೊಡ್ಡದು ಎನಿಸುತ್ತಿದೆ: ಮಮತಾ ಬ್ಯಾನರ್ಜಿ

Published On - 9:02 pm, Tue, 16 March 21