ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡ್ತಿಲ್ಲ, ಸ್ಕೈರೂಟ್ ಸಾಧನೆ ಶ್ಲಾಘನೆ ಬೆನ್ನಲ್ಲೇ ರಾಹುಲ್ ಗಾಂಧಿ ಕಾಲೆಳೆದ ಮೋದಿ
ಪ್ರಧಾನಿ ಮೋದಿ ಸಂಸತ್ ಅಧಿವೇಶನದ ಮುನ್ನ ಮಾಧ್ಯಮಗಳಿಗೆ, ಹೈದರಾಬಾದ್‌ನ ಸ್ಕೈರೂಟ್ ಏರೋಸ್ಪೇಸ್‌ನ ಯುವ ವಿಜ್ಞಾನಿಗಳನ್ನು ಶ್ಲಾಘಿಸಿದರು. ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಯಶಸ್ಸು 28 ವರ್ಷ ವಯಸ್ಸಿನ ನೈಜ ನವೋದ್ಯಮಿಗಳಿಗೆ ಸೇರಿದೆ ಎಂದು ಹೇಳುತ್ತಾ, ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು '56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ' ಎಂದು ಲೇವಡಿ ಮಾಡಿದರು. ಇದು ದೇಶದ ಯುವಶಕ್ತಿಯ ಆಕಾಂಕ್ಷೆಗಳಿಗೆ ಸಾಕ್ಷಿ ಎಂದರು.

ನವದೆಹಲಿ, ಜುಲೈ 20: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರ ಸಾಧಿಸಿದ ಯಶಸ್ಸನ್ನು ಕೊಂಡಾಡುತ್ತಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ.
ಹೈದರಾಬಾದ್ ಮೂಲದ ‘ಸ್ಕೈರೂಟ್ ಏರೋಸ್ಪೇಸ್’ ನವೋದ್ಯಮದ ಯುವ ವಿಜ್ಞಾನಿಗಳ ತಂಡವನ್ನು ಶ್ಲಾಘಿಸಿದ ಪ್ರಧಾನಿ, ಈ ದೇಶದ ಬಾಹ್ಯಾಕಾಶ ಯಶಸ್ಸು ಕೇವಲ 28 ವರ್ಷ ವಯಸ್ಸಿನ ನೈಜ ನವೋದ್ಯಮಿಗಳಿಗೆ ಸೇರಿದೆ. ನಾನು 56 ವರ್ಷ ವಯಸ್ಸಿನ ಯುವಕನ ಬಗ್ಗೆ ಮಾತನಾಡ್ತಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿದ್ದಾರೆ. ಭಾರತೀಯ ರಾಜಯದಲ್ಲಿ 56 ವರ್ಷದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಹಲವು ವಿಪಕ್ಷ ನಾಯಕರು ‘ಯುವ ನಾಯಕ’ ಎಂದೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ನಮ್ಮ ಯುವಕರ ಆಕಾಂಕ್ಷೆ ಬಾಹ್ಯಾಕಾಶದಷ್ಟೇ ಅಪರಿಮಿತ
ಸ್ಕೈರೂಟ್‌ನ ಯುವ ತಂಡ ನಡೆಸಿದ ಯಶಸ್ವಿ ರಾಕೆಟ್ ಉಡಾವಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶದ ಯುವ ಶಕ್ತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ರತದ ಯುವಪಡೆ ಇಂದು ಬಾಹ್ಯಾಕಾಶಕ್ಕೆ ಹೊಸ ಪ್ರಯಾಣವನ್ನು ಆರಂಭಿಸಿದೆ. ನನಗೆ ಸಿಕ್ಕ ಮಾಹಿತಿಯಂತೆ ಸ್ಕೈರೂಟ್ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು.
ನಿಜವಾದ ಯುವಕರು ಇಂತಹ ಮಹಾನ್ ಸಾಧನೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ನಾನು 56 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿಲ್ಲ. ದೇಶದ ನೈಜ ಯುವಶಕ್ತಿಯ ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ ಎಂಬುದಕ್ಕೆ ಈ ಯಶಸ್ಸೇ ಬಲವಾದ ಸಾಕ್ಷಿ ಎಂದು ಮೋದಿ ಹೇಳಿದರು.
ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ ಭಾರತದ ಹೆಜ್ಜೆಗುರುತು
ಕಳೆದ ವರ್ಷದ ಅಧಿವೇಶನದ ವೇಳೆಗೆ ಭಾರತೀಯ ನಾಗರಿಕನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿ ಇತಿಹಾಸ ಬರೆದಿದ್ದರು. ಜಗತ್ತಿನ ಕೆಲವೇ ಕೆಲವು ಆಯ್ದ ದೇಶಗಳು ಮಾತ್ರ ಸಾಧಿಸಿರುವ ಖಾಸಗಿ ರಾಕೆಟ್ ಉಡಾವಣೆಯ ಮಹತ್ಸಾಧನೆಯನ್ನು ಇಂದು ಭಾರತದ ಯುವ ಉದ್ಯಮಿಗಳು ಮಾಡಿ ತೋರಿಸಿದ್ದಾರೆ. ಇದು ಕಾಕತಾಳೀಯವಲ್ಲ, ಭಾರತದ ತಂತ್ರಜ್ಞಾನದ ಹೆಗ್ಗುರುತು ಎಂದು ಪ್ರಧಾನಿ ಬಣ್ಣಿಸಿದರು.
ಮತ್ತಷ್ಟು ಓದಿ: ಬಿಜೆಪಿಯಿಂದ ಮಾತ್ರ ಪಂಜಾಬ್ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಗತಿದಾಯಕ ಮುಂಗಾರು ಅಧಿವೇಶನದ ಆಶಯ
ಅಧಿವೇಶನದ ಕುರಿತು ಮಾತನಾಡಿದ ಪ್ರಧಾನಿ, ಮಳೆಗಾಲ ಮತ್ತು ಸಂಸತ್ತಿನ ಕಲಾಪಗಳೆರಡನ್ನೂ ಹೋಲಿಸಿದರು.ಸಮಯಕ್ಕೆ ಸರಿಯಾಗಿ ಮಳೆಯಾದರೆ ಹೇಗೆ ಕೃಷಿ ಮತ್ತು ದೇಶದ ಕಲ್ಯಾಣಕ್ಕೆ ಅನುಕೂಲವಾಗುತ್ತದೆಯೋ, ಹಾಗೆಯೇ ಸಂಸತ್ತಿನ ಅಧಿವೇಶನವೂ ಯಾವುದೇ ಗೊಂದಲಗಳಿಲ್ಲದೆ ಉತ್ಪಾದಕವಾಗಿ ಹಾಗೂ ಸುಗಮವಾಗಿ ನಡೆದರೆ ದೇಶಕ್ಕೆ ಅಷ್ಟೇ ದೊಡ್ಡ ಮಟ್ಟದ ಪ್ರಯೋಜನವಾಗುತ್ತದೆ ಎಂದು ಆಶಿಸಿದರು.
ವಿಡಿಯೋ:
Speaking at the start of the Monsoon Session of Parliament. May this session witness productive discussions that strengthen India’s development journey. https://t.co/v25Vg62apy
— Narendra Modi (@narendramodi) July 20, 2026
ಖಾಸಗಿ ರಂಗಕ್ಕೆ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ ನಂತರ ಭಾರತೀಯ ಸ್ಟಾರ್ಟ್‌ಅಪ್‌ಗಳು ತಂತ್ರಜ್ಞಾನ ವಲಯದಲ್ಲಿ ದೇಶದ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುತ್ತಿರುವುದನ್ನು ಪ್ರಧಾನಿ ಮೋದಿ ಈ ವೇಳೆ ವಿಶೇಷವಾಗಿ ಸ್ಮರಿಸಿದರು.
ಸ್ಕೈರೂಟ್ ಏರೋಸ್ಪೇಸ್ ಹಿನ್ನೆಲೆ: ಸ್ಕೈರೂಟ್ ಸಂಸ್ಥೆಯನ್ನು ಇಸ್ರೋದ (ISRO) ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಸ್ಥಾಪಿಸಿದ್ದರು. ಭಾರತ ಸರ್ಕಾರ ಬಾಹ್ಯಾಕಾಶ ರಂಗವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ ಈ ಮಟ್ಟದ ಜಾಗತಿಕ ಯಶಸ್ಸು ಸಾಧಿಸಿದ ಮೊದಲ ಭಾರತೀಯ ಸ್ಟಾರ್ಟ್‌ಅಪ್ ಇದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




