AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale deal ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ ಆರೋಪದ ತನಿಖೆ ನಡೆಸಲು ಸಿಬಿಐ ವಿಫಲ ಎಂಬುದಕ್ಕೆ ಪುರಾವೆ ಲಭ್ಯ

ಬಿಜೆಪಿ ನೇತೃತ್ವದ ಎನ್‌ಡಿಎ 1.0 ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ (UPA) ಅವಧಿಯಲ್ಲಿ ಮಧ್ಯವರ್ತಿಗಳಿಗೆ ರಫೇಲ್ ಜೆಟ್‌ಗಳ (Rafale jets) ತಯಾರಕರಾದ ಫ್ರೆಂಚ್ ಕಂಪನಿ ಡಸಾಲ್ಟ್ ಕೋಟ್ಯಂತರ ರೂಪಾಯಿಗಳನ್ನು ಪಾವತಿಸಿರಬಹುದು ಎಂಬ ಆರೋಪವನ್ನು ಭಾರತೀಯ ಏಜೆನ್ಸಿಗಳು ನಿರ್ಲಕ್ಷಿಸಿವೆ.

Rafale deal ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ ಆರೋಪದ ತನಿಖೆ ನಡೆಸಲು ಸಿಬಿಐ ವಿಫಲ ಎಂಬುದಕ್ಕೆ ಪುರಾವೆ ಲಭ್ಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 09, 2021 | 7:39 PM

Share

ದೆಹಲಿ: ರಫೇಲ್ ಒಪ್ಪಂದದ (Rafale deal)ಕುರಿತು ಹೊಸ ರಾಜಕೀಯ ವಿವಾದವು ಭುಗಿಲೆದ್ದಿರುವ ನಡುವೆಯೇ ಬಿಜೆಪಿ ನೇತೃತ್ವದ ಎನ್‌ಡಿಎ 1.0 ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ (UPA) ಅವಧಿಯಲ್ಲಿ ಮಧ್ಯವರ್ತಿಗಳಿಗೆ ರಫೇಲ್ ಜೆಟ್‌ಗಳ (Rafale jets) ತಯಾರಕರಾದ ಫ್ರೆಂಚ್ ಕಂಪನಿ ಡಸಾಲ್ಟ್ ಕೋಟ್ಯಂತರ ರೂಪಾಯಿಗಳನ್ನು ಪಾವತಿಸಿರಬಹುದು ಎಂಬ ಆರೋಪವನ್ನು ಭಾರತೀಯ ಏಜೆನ್ಸಿಗಳು ನಿರ್ಲಕ್ಷಿಸಿವೆ ಎಂಬುದಕ್ಕೆ ಎನ್‌ಡಿಟಿವಿ ಹೆಚ್ಚಿನ ಪುರಾವೆಗಳನ್ನು ಕಂಡುಕೊಂಡಿದೆ. ಒಂದು ದಿನದ ಹಿಂದೆ ಫ್ರೆಂಚ್ ಪೋರ್ಟಲ್ ಮೀಡಿಯಾಪಾರ್ಟ್ (Mediapart ) 2002-12 ರ ನಡುವೆ ಭಾರತಕ್ಕೆ ರಫೇಲ್ ಫೈಟರ್ ಜೆಟ್‌ಗಳ ಮಾರಾಟಕ್ಕೆ ಸಹಾಯ ಮಾಡಲು ಡಸಾಲ್ಟ್ (Dassault) ಸುಮಾರು 13 ಮಿಲಿಯನ್ ಯುರೋಗಳನ್ನು (ಈಗಿನ ದರದಲ್ಲಿ ಸುಮಾರು ₹ 110 ಕೋಟಿಗಳು) ಸುಷೇನ್ ಗುಪ್ತಾ ಎಂಬ ಮಧ್ಯವರ್ತಿಗೆ ಪಾವತಿಸಿದೆ ಎಂದು ವರದಿ ಮಾಡಿತ್ತು. ಆದರೆ ಭಾರತೀಯ ಏಜೆನ್ಸಿಗಳು ಈ ಪಾವತಿಗಳಲ್ಲಿ ಲೋಪವಿರುವ ಕೆಲವು ದಾಖಲೆಗಳನ್ನು ನೋಡಿದ್ದರೂ ಈ ಆರೋಪಗಳನ್ನು ತನಿಖೆ ಮಾಡಲು ವಿಫಲವಾಗಿದೆ.

ಭಾರತವು ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳ ನಂತರ 2019 ರಲ್ಲಿ ಡಸಾಲ್ಟ್ ಪಾವತಿಸಿದ ಕಿಕ್‌ಬ್ಯಾಕ್‌ಗಳ ಬಗ್ಗೆ ಸಿಬಿಐ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಯಿತು. ಆದರೂ ಅವರು ಆರೋಪಗಳ ಮೇಲೆ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ತೋರಿಸುವ ಹೆಚ್ಚಿನ ದಾಖಲೆಗಳನ್ನು ಈಗ ಎನ್​​ಡಿಟಿವಿ ಪತ್ತೆ ಮಾಡಿದೆ. ಇಂತಹ ಆರೋಪಗಳು ಭಾರತೀಯ ಕಾನೂನುಗಳ ಅಡಿಯಲ್ಲಿ ಡಸಾಲ್ಟ್ ಅನ್ನು ಕಪ್ಪುಪಟ್ಟಿಗೆ ಸೇರಿಸಲು ಕಾರಣವಾಗಬಹುದು.

ಭಾರತದ ಉನ್ನತ ನಾಯಕರಿಗಾಗಿರುವ 12 ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪವು ಸಿಬಿಐನ ಚಾರ್ಜ್‌ಶೀಟ್‌ನ ಭಾಗವಾಗಿದೆ. ಐಟಿ ಸೇವಾ ಕಂಪನಿ ಐಡಿಎಸ್‌ನ ಅಂದಿನ ಮ್ಯಾನೇಜರ್ ಧೀರಜ್ ಅಗರ್ವಾಲ್ ಅವರ ಹೇಳಿಕೆಯನ್ನು ಇದು ಒಳಗೊಂಡಿವೆ. ಧೀರಜ್ ಅವರು 2019 ರಲ್ಲಿ ಸಿಬಿಐಗೆ ಡಸಾಲ್ಟ್ ಸುಷೇನ್ ಗುಪ್ತಾ ಅವರ ಮಾರಿಷಸ್ ಮೂಲದ ಶೆಲ್ ಸಂಸ್ಥೆ ಇಂಟರ್‌ಸ್ಟೆಲ್ಲರ್‌ಗೆ ಐಡಿಎಸ್ ಮೂಲಕ ಹಣವನ್ನು ರವಾನಿಸಿದ್ದಾರೆ ಎಂದು ಹೇಳಿದರು.

ಡಸಾಲ್ಟ್ ಐಡಿಎಸ್‌ಗೆ ನೀಡಿದ ಪಾವತಿಯ ಶೇಕಡಾ 40 ರಷ್ಟು ಸುಷೇನ್ ಗುಪ್ತಾ ಅವರ ಇಂಟರ್‌ಸ್ಟೆಲ್ಲಾರ್‌ಗೆ ಕಮಿಷನ್ ಆಗಬೇಕಿತ್ತು. ಧೀರಜ್ ಅಗರ್ವಾಲ್ ಪ್ರಕಾರ 2003 ಮತ್ತು 2006 ರ ನಡುವೆ ಇಂಟರ್‌ಸ್ಟೆಲ್ಲಾರ್‌ಗೆ ಡಸಾಲ್ಟ್‌ನ ₹4.15 ಕೋಟಿ ಹಣವನ್ನು ರವಾನಿಸಲು ಐಡಿಎಸ್ ಸಹಾಯ ಮಾಡಿದೆ.

ಪಾವತಿ ಅವಧಿಯು 2004 ರವರೆಗೆ ಅಧಿಕಾರದಲ್ಲಿದ್ದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರವನ್ನು ವ್ಯಾಪಿಸಿದೆ.

ನ್ಯಾಯಾಲಯದ ದಾಖಲಾತಿಗಳಲ್ಲಿ ಈ ಸಾಕ್ಷ್ಯವನ್ನು ಸೇರಿಸಿದ್ದರೂ, ಸಿಬಿಐ ಕಂಪನಿಯ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಿಲ್ಲ. ಭಾರತೀಯ ಕಾನೂನುಗಳ ಪ್ರಕಾರ, ಬಿಡ್ಡಿಂಗ್ ಮತ್ತು ಮಾತುಕತೆಗಳ ಯಾವುದೇ ಅವಧಿಯಲ್ಲಿ ಕಂಪನಿಯು “ಭ್ರಷ್ಟ ಅಭ್ಯಾಸಗಳು,” “ಅನ್ಯಾಯ” ಅಥವಾ “ಕಾನೂನುಬಾಹಿರ ಚಟುವಟಿಕೆಗಳನ್ನು” ಆಶ್ರಯಿಸಿದರೆ ಅದನ್ನು ಅಮಾನತುಗೊಳಿಸಬಹುದು ಅಥವಾ ನಿಷೇಧಿಸಬಹುದು.

ಇದನ್ನೂ ಓದಿ: Rafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಇದನ್ನೂ ಓದಿ: ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ಗಳನ್ನು ಸಿಬಿಐ ತನಿಖೆ ಮಾಡದಿರಲು ನಿರ್ಧರಿಸಿದೆ ಎಂದ ಫ್ರೆಂಚ್ ಮಾಧ್ಯಮ ವರದಿ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ