AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೋ ಬೆಂಕಿ ಬೆಂಕಿ ಎಂದು ಕೂಗಿದ್ದಕ್ಕೆ ಭಯಗೊಂಡು ರೈಲಿನಿಂದ ಹಾರಿದ ನಾಲ್ವರಿಗೆ ಮತ್ತೊಂದು ರೈಲು ಡಿಕ್ಕಿ, ಎಲ್ಲರೂ ಸಾವು

ಮಧ್ಯಪ್ರದೇಶದ ಮೊರೆನಾದಲ್ಲಿ ಬೆಂಕಿ ವದಂತಿಯಿಂದ ರೈಲಿನಿಂದ ಹಾರಿದ ನಾಲ್ವರು ಪ್ರಯಾಣಿಕರು ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ವದಂತಿ ಹರಡಿದ್ದು, ಪ್ರಯಾಣಿಕರು ಪಕ್ಕದ ಹಳಿ ಮೇಲೆ ಕಾಲಿಡುವಾಗ ಫಿರೋಜ್‌ಪುರ-ಸಿಯೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್‌ಗೆ ಸಿಲುಕಿ ದುರಂತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಯಾರೋ ಬೆಂಕಿ ಬೆಂಕಿ ಎಂದು ಕೂಗಿದ್ದಕ್ಕೆ ಭಯಗೊಂಡು ರೈಲಿನಿಂದ ಹಾರಿದ ನಾಲ್ವರಿಗೆ ಮತ್ತೊಂದು ರೈಲು ಡಿಕ್ಕಿ, ಎಲ್ಲರೂ ಸಾವು
ರೈಲು Image Credit source: X Account-Atulkrishan
ನಯನಾ ರಾಜೀವ್
|

Updated on: Jun 15, 2026 | 7:33 AM

Share

ಮೊರೆನಾ, ಜೂನ್ 15: ರೈಲಿನಲ್ಲಿ ಯಾರೋ ಬೆಂಕಿ ಬೆಂಕಿ ಎಂದು ಕೂಗೊಕೊಂಡಿದ್ದಕ್ಕೆ ಭಯಗೊಂಡು ನಾಲ್ವರು ರೈಲಿನಿಂದ ಹಾರಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಮೊರೆನಾ ಜಿಲ್ಲೆಯ ಹೇತಾಂಪುರ ನಿಲ್ದಾಣದ ಬಳಿಯ ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಿಂದ ಗಾಬರಿಗೊಂಡ ಪ್ರಯಾಣಿಕರು ರೈಲಿ(Train)ನಿಂದ ಹಾರುವಾಗ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲಾ ನಾಲ್ವರು ಅಲ್ಲೇ ಉಸಿರು ಚೆಲ್ಲಿದ್ದಾರೆ.

ಜೂನ್ 14 ರಂದು ಸಂಜೆ 4.15 ರ ಸುಮಾರಿಗೆ ಈ ದುರಂತ ಸಂಭವಿಸಿತು, ಖಜುರಾಹೊ-ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ವೇಗವಾಗಿ ಹರಡಿತ್ತು. ಹೇತಾಂಪುರ್-ಧೋಲ್ಪುರ್ ವಿಭಾಗದಲ್ಲಿ ಪ್ರಯಾಣಿಕರೊಬ್ಬರು ಸಾಮಾನ್ಯ ಬೋಗಿಯಲ್ಲಿ ಅಲಾರಾಂ ಸರಪಳಿಯನ್ನು ಎಳೆದ ನಂತರ ರೈಲು ನಿಂತಿತ್ತು.

ನಂತರದ ಭಯದಲ್ಲಿ, ಹಲವಾರು ಪ್ರಯಾಣಿಕರು ರೈಲಿನಿಂದ ಹಾರಿ ಪಕ್ಕದ ರೈಲ್ವೆ ಹಳಿಯ ಮೇಲೆ ಹೆಜ್ಜೆ ಹಾಕಿದರು. ಆ ಕ್ಷಣದಲ್ಲಿ, ಫಿರೋಜ್‌ಪುರ-ಸಿಯೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20424) ವಿರುದ್ಧ ದಿಕ್ಕಿನಿಂದ ಬಂದಿದ್ದರಿಂದ ಮಾರಣಾಂತಿಕ ಅಪಘಾತ ಸಂಭವಿಸಿತು.

ಮತ್ತಷ್ಟು ಓದಿ: ಬ್ಯಾಂಕಾಕ್‌: ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ, ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ ವೈರಲ್!

ಮೃತರನ್ನು ಅಫ್ರೀನ್ (35), ಅವರ ನಾಲ್ಕು ವರ್ಷದ ಮಗ ಅಸದ್, ಶಕುಂತಲಾ (60) ಮತ್ತು ವೀರ್ಮ ದೇವಿ (58) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸಿದರು.

ಯಾರೋ ಬೆಂಕಿ ಬೆಂಕಿ ಎಂದು ಕೂಗಿದ್ದಕ್ಕೆ ಇನ್ಯಾರೂ ರೈಲಿನ ಚೈನ್ ಎಳೆದಿದ್ದಾರೆ, ರೈಲು ನಿಲ್ಲುವ ಸಮಯದಲ್ಲಿ ಕೆಲವು ಪ್ರಯಾಣಿಕರು ಕೆಳಗಿಳಿದು ಅಜಾಗರೂಕತೆಯಿಂದ ಇಳಿದು ಹಳಿಯ ಮೇಲೆ ಓಡಲು ಶುರು ಮಾಡಿದ್ದಾರೆ. ಆಗ ಎದುರಿನಿಂದ ಬರುತ್ತಿದ್ದ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.

ವಿಡಿಯೋ

ಬೆಂಕಿಯ ವದಂತಿ ಹೇಗೆ ಹುಟ್ಟಿಕೊಂಡಿತು ಮತ್ತು ಪ್ರಯಾಣಿಕರು ಪಕ್ಕದ ಹಳಿಯ ಮೇಲೆ ಚಲಿಸಲು ಏನು ಕಾರಣ ಎಂಬುದು ಸೇರಿದಂತೆ ಘಟನೆಗಳ ಬಗ್ಗೆ ರೈಲ್ವೆ ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ತನಿಖೆಯ ಮೇಲ್ವಿಚಾರಣೆ ನಡೆಸಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಝಾನ್ಸಿ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us