ಅಕ್ಬರ್ ಸಿಂಹ ಜತೆ ಸಿಂಹಿಣಿ ಸೀತಾ; ನಮೀಬಿಯಾ ಚೀತಾಗೂ ಆಗಿತ್ತು ಮರುನಾಮಕರಣ; ಪ್ರಾಣಿಗಳಿಗೆ ಹೆಸರಿಡುವವರಾರು?

ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ ಅಕ್ಬರ್ ಎಂಬ ಸಿಂಹ ಮತ್ತು ಸೀತಾ ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಿದ್ದಕ್ಕೆ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದೆ. ಪ್ರಾಣಿಗಳ ಹೆಸರಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹೊತ್ತಿನಲ್ಲಿ ವನ್ಯಜೀವಿಗಳಿಗೆ ಹೆಸರಿಡುವವರು ಯಾರು? ಅವುಗಳಿಗೆ ಹೇಗೆ ಹೆಸರಿಡಲಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ

ಅಕ್ಬರ್ ಸಿಂಹ ಜತೆ ಸಿಂಹಿಣಿ ಸೀತಾ; ನಮೀಬಿಯಾ ಚೀತಾಗೂ ಆಗಿತ್ತು ಮರುನಾಮಕರಣ; ಪ್ರಾಣಿಗಳಿಗೆ ಹೆಸರಿಡುವವರಾರು?
ಸಿಂಹ-ಚೀತಾ
Follow us
ರಶ್ಮಿ ಕಲ್ಲಕಟ್ಟ
|

Updated on: Feb 20, 2024 | 2:35 PM

ಸೀತಾ ಮತ್ತು ಅಕ್ಬರ್ ಎಂಬ ಸಿಂಹ ಒಂದೇ ಆವರಣದಲ್ಲಿ ಇರಬಾರದು ಎಂದು ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ (Siliguri safari park) ಅಕ್ಬರ್ ಎಂಬ ಸಿಂಹ ಮತ್ತು ಸೀತಾ (Sita)ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಲಾಗಿತ್ತು. ಹೀಗೆ ಸೀತಾ- ಅಕ್ಬರ್​​ನ್ನು ಇರಿಸಿದ್ದಕ್ಕಾಗಿ ಅರಣ್ಯ ಇಲಾಖೆಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ವಿಶ್ವ ಹಿಂದೂ ಪರಿಷತ್ತಿನ (VHP)  ಕಲ್ಕತ್ತಾ ಹೈಕೋರ್ಟ್‌ನ ಜಲಪೈಗುರಿ ಸರ್ಕ್ಯೂಟ್ ಬೆಂಚ್‌ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಇಂದು (ಫೆ.20 ಮಂಗಳವಾರ) ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಮತ್ತು ಟಿಎಂಸಿ ಶಾಸಕ ಬಿರ್ಬಹಾ ಹನ್ಸ್ಡಾ, ಪ್ರಾಣಿಗಳಿಗೆ ತ್ರಿಪುರಾ ಮೃಗಾಲಯದಿಂದ ಹೆಸರುಗಳನ್ನು ನೀಡಲಾಗಿದೆ.  ನಾವು ಹೆಸರಿಟ್ಟಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ತಂದಾಗ ಅವುಗಳ ಹೆಸರನ್ನು ಬದಲಿಸಲಾಗಿತ್ತು. ಈ ಚೀತಾಗಳಿಗೆ ಹೆಸರು ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರೇ ಮನ್ ಕೀ ಬಾತ್​​ನಲ್ಲಿ ಕೇಳಿದ್ದರು. ಸುಮಾರು 11,565 ಹೆಸರುಗಳನ್ನು ಜನರು ಸೂಚಿಸಿದ್ದರು ಎಂದು ಕಳೆದ ವರ್ಷ ಸರ್ಕಾರ ಹೇಳಿತ್ತು. ನಮೀಬಿಯಾದಿಂದ ತಂದ ಹೆಣ್ಣು ಚೀತಾ ಹಳೆಯ ಹೆಸರು ಅಶಾ ಎಂದಿತ್ತು. ಭಾರತಕ್ಕೆ ಬಂದಾಗ ಅನ್ನು ಆಶಾ ಎಂದು ಬದಲಾಯಿಸಲಾಗಿದೆ. ಓಬನ್ ಎಂಬ ಗಂಡು ಚೀತಾ ಹೆಸರನ್ನು ಪವನ್ ಎಂದು ಮರುನಾಮಕರಣ ಮಾಡಲಾಗಿದೆ. ನಮೀಬಿಯಾದ ಹೆಣ್ಣು ಚೀತಾ ಸವನ್ನಾ ನಭಾ ಆಗಿದ್ದರೆ, ಸಿಯಾಯಾ ಚೀತಾದ ಹೆಸರು ಜ್ವಾಲಾ ಎಂದು ಬದಲಿಸಲಾಗಿತ್ತು. ಎಲ್ಟನ್ ಹೆಸರನ್ನು ಗೌರವ್, ಫ್ರೆಡ್ಡಿಯವನ್ನು ಶೌರ್ಯ ಮತ್ತು ಟಿಬ್ಲಿಸಿ ಎಂಬ ಹೆಣ್ಣು ಚೀತಾ ಹೆಸರನ್ನು ಧಾತ್ರಿ ಎಂದು ಬದಲಾಯಿಸಲಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ  ದಕ್ಷಿಣ ಆಫ್ರಿಕಾದ 12 ಚೀತಾಗಳಿಗೆ ದಕ್ಷ, ನಿರ್ವ, ವಾಯು, ಅಗ್ನಿ, ಗಾಮಿನಿ, ತೇಜಸ್, ವೀರ, ಸೂರಜ್, ಧೀರ, ಉದಯ್, ಪ್ರಭಾಸ್, ಪಾವಕ್ ಎಂದು ಹೆಸರಿಡಲಾಗಿತ್ತು. ಇದೀಗ ವನ್ಯಜೀವಿಗಳ ಹೆಸರಿನ ಬಗ್ಗೆಯೇ ಚರ್ಚೆ ನಡೆಯುತ್ತಿರುವ ಈ ಹೊತ್ತಲ್ಲಿ ಅವುಗಳಿಗೆ ಹೆಸರಿಡುವುದು ಯಾರು? ಹೇಗೆ ಹೆಸರಿಡಲಾಗುತ್ತದೆ? ಎಂಬುದರ ಬಗ್ಗೆ ನೋಡೋಣ.

ಸಾಕು ಪ್ರಾಣಿಗಳಾದರೆ ನಾವೇ ಹೆಸರಿಡುತ್ತೇವೆ. ಕಾಡುಪ್ರಾಣಿಗಳಾದರೆ? ಕಾಡಿನಲ್ಲಿ ಅಲೆದಾಡುವ ವನ್ಯಜೀವಿಗಳು ಆಗಾಗ್ಗೆ ನಾಡಿಗೆ ನುಗ್ಗಿ ನಾಶ ಮಾಡುವುದೂ ಉಂಟು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಈ ಕಾಡು ಪ್ರಾಣಿಗಳಿಗೆ ಹೆಸರಿಟ್ಟು ಗುರುತಿಸುತ್ತಾರೆ. ಕೇರಳದಲ್ಲಿ ಆನೆ ದಾಳಿ ನಡೆದದ್ದು ಈಗ ಸುದ್ದಿಯಲ್ಲಿದೆ. ಇಲ್ಲಿನ ಕಾಡಾನೆಗಳಲ್ಲಿ ಹೆಚ್ಚಿನವುಗಳಿಗೆ ಹೆಸರಿಟ್ಟಿದ್ದು ಊರಿನ ಜನರೇ. ಪಾಲಕ್ಕಾಡ್ ಧೋನಿಯಿಂದ ಸೆರೆ ಹಿಡಿದ ಕಾಡಾನೆಗೆ ಪಿಟಿ ಸೆವೆನ್ ಧೋನಿ ಎಂದು ಹೆಸರಿಡಲಾಗಿತ್ತು. ಪಡಿತರ ಅಂಗಡಿಗಳಲ್ಲಿ ಅಕ್ಕಿ ಕದಿಯುವ ಆನೆ ಅರಿಕೊಂಬನ್ (ಮಲಯಾಳಂನಲ್ಲಿ ಅರಿ ಅಂದರೆ ಅಕ್ಕಿ, ಕೊಂಬನ್ ಅಂದರೆ ಆನೆ), ಹಲಸು ಪ್ರಿಯ ಆನೆಗೆ ಚಕ್ಕಕೊಂಬನ್ (ಚಕ್ಕ- ಹಲಸು), ನೀರು ಸರಬರಾಜು ಪೈಪ್ ಒಡೆದ ಕಾಡಾನೆಗೆ ತಣ್ಣೀರ್ ಕೊಂಬನ್ ಎಂದು ಹೆಸರಿಡಲಾಗಿತ್ತು. ಇದು ಸ್ಥಳೀಯರೇ ಇಡುವ ಹೆಸರುಗಳಾದರೆ ವನ್ಯಜೀವಿಗಳ ಗುಣ ಸ್ವಭಾವ ನೋಡಿ ಹೆಸರಿಡಲಾಗುತ್ತದೆ. ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರುಗಳನ್ನೂ, ರಾಜಕೀಯ ನಾಯಕರ ಹೆಸರನ್ನೂ ಜೀವಿಗಳಿಗೆ ಇಡುವ ಪದ್ಧತಿ ಇದೆ.

ಪತಂಗಕ್ಕೆ ಡೊನಾಲ್ಡ್ ಟ್ರಂಪ್ ಹೆಸರು

ಚಿಟ್ಟೆ(ಪತಂಗ)ವೊಂದಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿದೆ. 2011 ರಲ್ಲಿ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುವ ಮೊದಲು, ಅವರ ಹೆಸರನ್ನು ಹೊಸ ಚಿಟ್ಟೆಗೆ ಹೆಸರಿಸಲಾಯಿತು. ಡೊನಾಲ್ಡ್ ಟ್ರಂಪ್ ಎಂದು ನೇರವಾಗಿ ಇಡುವ ಬದಲು ವಿಜ್ಞಾನಿಗಳು ಈ ಪತಂಗಕ್ಕೆ – ‘ನಿಯೋಪಾಲ್ಪಾ ಡೊನಾಲ್ಡ್ ಟ್ರಂಪಿ’ (Neopalpa donaldtrumpi) ಎಂದು ಹೆಸರಿಟ್ಟಿದ್ದಾರೆ. ಇವು ಕ್ಯಾಲಿಫೋರ್ನಿಯಾ ಮತ್ತು ಬಾಜಾ, ಮೆಕ್ಸಿಕೋದಲ್ಲಿ ಕಂಡುಬರುತ್ತವೆ.

Donald Trump moth

ಡೊನಾಲ್ಡ್ ಟ್ರಂಪ್- ‘ನಿಯೋಪಾಲ್ಪಾ ಡೊನಾಲ್ಡ್ ಟ್ರಂಪಿ

ಚಿಟ್ಟೆಯ ರೋಮಗಳು ಟ್ರಂಪ್ ಅವರ ಚಿನ್ನದ ಕೂದಲಿನಂತೆಯೇ ಇರುತ್ತವೆ ಎಂಬ ಕಾರಣಕ್ಕಾಗಿಯೇ ಈ ಹೆಸರು ಆಯ್ಕೆ ಮಾಡಲಾಗಿತ್ತು. ಕೆನಡಾದ ಸಂಶೋಧಕ ವಸ್ರಿಕ್ ನಜಾರಿ ಡೊನಾಲ್ಡ್ ಟ್ರಂಪ್ ಪತಂಗ ಪ್ರಭೇದವನ್ನು ಪತ್ತೆ ಹಚ್ಚಿದ್ದರು. ಜೀವಿಗಳಿಗೆ ಪುರುಷರ ಹೆಸರಿಡುವುದಾದರೆ ಇದು ‘ಇ’ ಧ್ವನಿಯಲ್ಲಿ ಕೊನೆಗೊಳ್ಳಬೇಕು. ಹಾಗಾಗಿ ಪತಂಗಕ್ಕೆ ಡೊನಾಲ್ಡ್ ಟ್ರಂಪಿ ಎಂದು ಹೆಸರಿಡಲಾಗಿದೆ. ಬರಾಕ್ ಒಬಾಮ ಅವರು ಅಮೇರಿಕಾದ ಅಧ್ಯಕ್ಷರಾಗಿದ್ದಾಗ ವಿಜ್ಞಾನಿಗಳು ಒಂಬತ್ತು ಜೀವಿಗಳಿಗೆ ಅವರ ಹೆಸರಿಟ್ಟಿದ್ದರು. ಇವುಗಳಲ್ಲಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುವ ಟ್ರ್ಯಾಪ್ಡೋರ್ ಸ್ಪೈಡರ್ ಆಪ್ಟೋಸ್ಟಿಚಸ್ ಬರಾಕೊಬಾಮೈ, ಪೂರ್ವ ಅಮೆರಿಕದಲ್ಲಿ ಕಂಡುಬರುವ ಸಿಹಿನೀರಿನ ಡಾರ್ಟರ್ ಏಥಿಯೋಸ್ಟೋಮಾ ಒಬಾಮೈ, ಅಮೆಜಾನ್‌ನಲ್ಲಿ ವಾಸಿಸುವ ನೈಸ್ಟೆಲಸ್ ಒಬಾಮೈ ಮತ್ತು ಆಮೆಗಳ ಮೇಲೆ ಅವಲಂಬಿತವಾಗಿರುವ ಪರಾವಲಂಬಿಯಾದ ಬರಾಕ್ಟ್ರೆಮಾ ಒಬಾಮೈ ಸೇರಿವೆ. ತಮ್ಮ ಹೆಸರಿನಲ್ಲಿ ಹೆಚ್ಚು ಜೀವಿಗಳನ್ನು ಹೊಂದಿರುವ ವ್ಯಕ್ತಿ ಬರಾಕ್ ಒಬಾಮ ಒಬ್ಬರೇ.

ಇದನ್ನೂ ಓದಿ:  ಅಮೆರಿಕದ ಅತೀ ಕೆಟ್ಟ ನಾಯಕ ಡೊನಾಲ್ಡ್ ಟ್ರಂಪ್, ಪಟ್ಟಿಯಲ್ಲಿ ಬೈಡನ್​​ಗೆ 14ನೇ ಸ್ಥಾನ

ಭಾರತದಲ್ಲಿ ಹುಲಿಗಳಿಗೆ ಹೇಗೆ ಹೆಸರಿಡಲಾಗುತ್ತದೆ?

ಭಾರತದ ವಿವಿಧ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಲ್ಲಿ ಅನೇಕ ಹುಲಿಗಳಿಗೆ ಅವುಗಳ ಪಟ್ಟೆಗಳ ಗುರುತು ಅಥವಾ ವರ್ತನೆ ಆಧಾರದ ಮೇಲೆ ಹೆಸರುಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳ ಪ್ರಕಾರ, ಹುಲಿಗಳಿಗೆ ಹೆಸರುಗಳನ್ನು ನೀಡುವುದನ್ನು ಅರಣ್ಯ ಇಲಾಖೆಯು ಸ್ವೀಕರಿಸುವುದಿಲ್ಲ.ದಾಖಲೆಯ ಉದ್ದೇಶಕ್ಕಾಗಿ ಇವುಗಳಿಗೆ T-10, T-17, T-25 ಮತ್ತು T-64 ನಂತಹ ಹೆಸರು ನೀಡಲಾಗುತ್ತದೆ. ಹುಲಿಗಳ ಗುರುತಿಸುವಿಕೆಯನ್ನು ಕ್ಯಾಮೆರಾ ಟ್ರ್ಯಾಪ್ ಫೋಟೊಗಳ ಆಧಾರದ ಮೇಲೆ ಹುಲಿಗಳ ದೇಹದ ಮೇಲಿನ ಪಟ್ಟೆಗಳು ಮತ್ತು ಗುರುತುಗಳನ್ನು ವಿಶ್ಲೇಷಿಸುವ ಮೂಲಕ ಮಾಡಲಾಗುತ್ತದೆ. ಇದು ಪ್ರತಿ ಹುಲಿಗೆ ವಿಶಿಷ್ಟವಾದ ಡಿಎನ್ಎಯಂತಿದೆ.

ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳಿಗೆ ಹೇಗೆ ಹೆಸರಿಡಲಾಗುತ್ತದೆ?

ಭಾರತದ ಪ್ರಾಣಿಸಂಗ್ರಹಾಲಯಗಳಲ್ಲಿ ವನ್ಯಜೀವಿಗಳ ಜಾತಿಗಳು, ಗುಣಲಕ್ಷಣಗಳು, ಮೂಲ, ಅಥವಾ ಸಾಂಸ್ಕೃತಿಕ ಪ್ರಾಮುಖ್ಯತೆಯಂತಹ ವಿವಿಧ ಅಂಶಗಳ ಆಧಾರದ ಮೇಲೆ ಸಾಮಾನ್ಯವಾಗಿ ಹೆಸರಿಸಲಾಗುತ್ತದೆ. ಹೆಸರಿಸುವ ಪ್ರಕ್ರಿಯೆಯು ಮೃಗಾಲಯದವರು, ವನ್ಯಜೀವಿ ತಜ್ಞರು ಮತ್ತು ಕೆಲವೊಮ್ಮೆ ಸಾರ್ವಜನಿಕ ಭಾಗವಹಿಸುವಿಕೆಯನ್ನೂ ಒಳಗೊಂಡಿರುತ್ತದೆ.

ಜಾತಿ-ಪ್ರಭೇದ ಹೆಸರುಗಳು: ಪ್ರಾಣಿಗಳಿಗೆ ಸಾಮಾನ್ಯವಾಗಿ ಅವುಗಳ ಜಾತಿಗೆ ನಿರ್ದಿಷ್ಟವಾದ ಹೆಸರುಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ಬಂಗಾಳ ಹುಲಿಗೆ ಅದರ ಮೂಲ ಅಥವಾ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ಹೆಸರನ್ನು ನೀಡಲಾಗುತ್ತದೆ

ಸಾಂಸ್ಕೃತಿಕ ಅಥವಾ ಪ್ರಾದೇಶಿಕ ಹೆಸರುಗಳು: ಸಾಂಸ್ಕೃತಿಕ ಅಥವಾ ಪ್ರಾದೇಶಿಕ ಪ್ರಾಮುಖ್ಯತೆಯ ಆಧಾರದ ಮೇಲೆ ಕೆಲವು ಪ್ರಾಣಿಗಳನ್ನು ಹೆಸರಿಸಬಹುದು. ಇದು ಭಾರತೀಯ ಪುರಾಣ, ಜಾನಪದ, ಅಥವಾ ಮೃಗಾಲಯ ಇರುವ ಪ್ರದೇಶಕ್ಕೆ ಸಂಬಂಧಿಸಿದ ಹೆಸರುಗಳಾಗಿರುತ್ತವೆ

ಸಾರ್ವಜನಿಕ ಭಾಗವಹಿಸುವಿಕೆ: ಕೆಲವು ಸಂದರ್ಭಗಳಲ್ಲಿ, ಪ್ರಾಣಿಸಂಗ್ರಹಾಲಯಗಳು ಪ್ರಾಣಿಗಳಿಗೆ ಹೆಸರಿಡುವಲ್ಲಿ ಸಾರ್ವಜನಿಕರಿಂದಲೂ ಹೆಸರು ಆಹ್ವಾನಿಸುತ್ತವೆ. ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸ್ಪರ್ಧೆಗಳು, ಸಾಮಾಜಿಕ ಮಾಧ್ಯಮ ಸಮೀಕ್ಷೆಗಳನ್ನೂ ನಡೆಸಲಾಗುತ್ತದೆ

ಸಂರಕ್ಷಣಾ ವಿಷಯಗಳು: ಸಂರಕ್ಷಣಾ ಪ್ರಯತ್ನಗಳನ್ನು ಹೈಲೈಟ್ ಮಾಡಲು ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದ ಬಗ್ಗೆ ಗಮನ ಸೆಳೆಯಲು ಹೆಸರುಗಳನ್ನು ಆಯ್ಕೆ ಮಾಡಬಹುದು. ಇದು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ.

ವರ್ತನೆ ಅಥವಾ ಗುಣಲಕ್ಷಣಗಳು: ಪ್ರಾಣಿಗಳನ್ನು ಅವುಗಳ ವರ್ತನೆ ಅಥವಾ ವಿಶಿಷ್ಟ ಲಕ್ಷಣಗಳ ಆಧಾರದ ಮೇಲೆ ಹೆಸರಿಸಬಹುದು. ಇದು ಪ್ರಾಣಿಗಳು ಮತ್ತು ಮೃಗಾಲಯದ ಸಂದರ್ಶಕರ ನಡುವೆ ಹೆಚ್ಚು ವೈಯಕ್ತಿಕ ಸಂಪರ್ಕವನ್ನು ರಚಿಸಬಹುದು.

ವೈಜ್ಞಾನಿಕ ಅಥವಾ ಪ್ರಾಣಿಶಾಸ್ತ್ರದ ಹೆಸರುಗಳು: ಕೆಲವು ಪ್ರಾಣಿಸಂಗ್ರಹಾಲಯಗಳು ಪ್ರಾಣಿಗಳ ವೈಜ್ಞಾನಿಕ ಹೆಸರುಗಳನ್ನು ಬಳಸಲು ಬಯಸುತ್ತವೆ, ವಿಶೇಷವಾಗಿ ಅಳಿವಿನಂಚಿನಲ್ಲಿರುವ ಅಥವಾ ಅಪರೂಪದ ಪ್ರಭೇದಗಳಿಗೆ ಈ ರೀತಿ ಹೆಸರು ನೀಡಲಾಗುತ್ತದೆ. ಮೃಗಾಲಯದ ನೀತಿಗಳಿಗೆ ಅನುಗುಣವಾಗಿ ಪ್ರಾಣಿಗಳಿಗೆ ಹೆಸರಿಡುವ ರೀತಿ, ಪ್ರಕ್ರಿಯೆಯೂ ಭಿನ್ನವಾಗಿರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್