AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲಶ್​ ಟ್ಯಾಂಕ್​ನಲ್ಲಿ ಮೊಬೈಲ್ ಅಡಗಿಸಿಟ್ಟು ಹೊಟ್ಟೆ ನೋವೆಂದು ಎದ್ದು ಹೋಗ್ತಿದ್ದ ನೀಟ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ಹೇಗೆ?

ಹೈದರಾಬಾದ್‌ನಲ್ಲಿ ನಡೆದ ನೀಟ್ ಮರು ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಫ್ಲಶ್ ಟ್ಯಾಂಕ್‌ನಲ್ಲಿ ಮೊಬೈಲ್ ಅಡಗಿಸಿಟ್ಟು ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಹೊಟ್ಟೆ ನೋವಿನ ನಾಟಕವಾಡಿ ಶೌಚಾಲಯಕ್ಕೆ ಹೋಗಿ ಗೂಗಲ್ ಮೂಲಕ ಉತ್ತರ ಹುಡುಕುತ್ತಿದ್ದ ಈ ವಿದ್ಯಾರ್ಥಿಯ ಕೃತ್ಯದಿಂದ ಪರೀಕ್ಷಾ ಮಂಡಳಿ ಬೆಚ್ಚಿಬಿದ್ದಿದೆ. ಹೊಸದಾಗಿ ಜಾರಿಗೆ ಬಂದಿರುವ ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ ಕಾಯ್ದೆ 2024ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫ್ಲಶ್​ ಟ್ಯಾಂಕ್​ನಲ್ಲಿ ಮೊಬೈಲ್ ಅಡಗಿಸಿಟ್ಟು ಹೊಟ್ಟೆ ನೋವೆಂದು ಎದ್ದು ಹೋಗ್ತಿದ್ದ ನೀಟ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ಹೇಗೆ?
ಸಾಂದರ್ಭಿಕ ಚಿತ್ರ Image Credit source: Times Of India
ನಯನಾ ರಾಜೀವ್
|

Updated on: Jun 22, 2026 | 1:17 PM

Share

ಹೈದರಾಬಾದ್, ಜೂನ್ 22: ದೇಶಾದ್ಯಂತ ನೀಟ್-ಯುಜಿ(NEET-UG) ಮರು ಪರೀಕ್ಷೆ ಜೂನ್ 21ರಂದು ಯಶಸ್ವಿಯಾಗಿ ನಡೆದಿದೆ. ಮರು ಪರೀಕ್ಷೆಯ ವೇಳೆ ಹೈದರಾಬಾದಿನಲ್ಲಿ ವಿದ್ಯಾರ್ಥಿಯೊಬ್ಬನ ಕಾಪಿ ಹಗರಣವೂ ಬಯಲಾಗಿದೆ. 18 ವರ್ಷದ ವಿದ್ಯಾರ್ಥಿ, ಪರೀಕ್ಷಾ ಕೇಂದ್ರದ ಶೌಚಾಲಯದ ಫ್ಲಶ್ ಟ್ಯಾಂಕ್​ ಒಳಗೆ ಮೊಬೈಲ್ ಇಟ್ಟು ಸಿಕ್ಕಿಬಿದ್ದಿದ್ದಾನೆ. ಪರೀಕ್ಷೆ ವೇಳೆ ಹೊಟ್ಟೆ ನೋವೆಂದು ಪದೇ ಪದೇ ಶೌಚಾಲಯಕ್ಕೆ ಹೋಗಿ ಗೂಗಲ್​ನಲ್ಲಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ಘಟನೆ ಹೈದರಾಬಾದ್‌ನ ಆದಿಬಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಣ್ಣಗುಡದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲಾ (ZPHS) ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಪ್ಲಾನ್ ಹೇಗಿತ್ತು? ಮೊಬೈಲ್ ಅಡಗಿಸಿದ್ದು ಹೇಗೆ? ಮುಂಜಾನೆಯೇ ಎಂಟ್ರಿ: ಅಚಂಪೇಟ್ ನಿವಾಸಿಯಾದ ಈ ವಿದ್ಯಾರ್ಥಿ ಮುಂಚಿತವಾಗಿಯೇ ಸ್ಕೆಚ್ ಹಾಕಿದ್ದ. ಬೆಳಗ್ಗೆ 7 ಗಂಟೆಗೆಲ್ಲಾ ಶಾಲೆಗೆ ಬಂದ ಆತ, ಕಾಂಪೌಂಡ್ ಗೋಡೆಯ ವೆಂಟಿಲೇಟರ್ ಮೂಲಕ ಶೌಚಾಲಯದ ಬಳಿ ಮೊಬೈಲ್ ತಲುಪಿಸಿದ್ದಾನೆ.

ಬೆಳಗ್ಗೆ 11 ಗಂಟೆಗೆ ಪರೀಕ್ಷಾ ತಪಾಸಣೆ ಆರಂಭವಾಗುವ ಮುನ್ನ, ಫೋನ್‌ಗೆ ನೀರು ತಗುಲದಂತೆ ಜಿಪ್-ಲಾಕ್ ಕವರ್‌ನಲ್ಲಿ ಹಾಕಿ ಶೌಚಾಲಯದ ಫ್ಲಶ್ ಟ್ಯಾಂಕ್ ಒಳಗೆ ಅಡಗಿಸಿಟ್ಟಿದ್ದಾನೆ. ಭದ್ರತಾ ಸಿಬ್ಬಂದಿ ಎರಡು ಸುತ್ತು ತಪಾಸಣೆ ನಡೆಸಿದರೂ ಫ್ಲಶ್ ಟ್ಯಾಂಕ್ ಒಳಗಿದ್ದ ಫೋನ್ ಅವರ ಕಣ್ಣಿಗೆ ಬಿದ್ದಿರಲಿಲ್ಲ.

ಮತ್ತಷ್ಟು ಓದಿ: NEET 2026: ನೀಟ್ ಯುಜಿ ಮರುಪರೀಕ್ಷೆ ಬರೆಯಲಿದ್ದಾರೆ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು; ಸಿಸಿಟಿವಿ ಕಣ್ಗಾವಲು, ಹೈ-ಸೆಕ್ಯುರಿಟಿ

ಸಿಕ್ಕಿಬಿದ್ದಿದ್ದು ಹೇಗೆ? ಪರೀಕ್ಷೆ ಆರಂಭವಾದ ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತನಗೆ ತೀವ್ರ ಹೊಟ್ಟೆ ನೋವು ಬರುತ್ತಿದೆ ಎಂದು ನಾಟಕವಾಡಿ ಶೌಚಾಲಯಕ್ಕೆ ಹೋಗಲು ಅನುಮತಿ ಪಡೆದಿದ್ದಾನೆ. ಆದರೆ ಆತ ತುಂಬಾ ಸಮಯದವರೆಗೆ ಹೊರಗೆ ಬರದಿದ್ದಾಗ ಅನುಮಾನಗೊಂಡ ಮೇಲ್ವಿಚಾರಕರು ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಿದ್ದಾರೆ.

ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿ ಫ್ಲಶ್ ಟ್ಯಾಂಕ್‌ನಿಂದ ಫೋನ್ ತೆಗೆದು ಗೂಗಲ್ ಕ್ರೋಮ್  ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಅಲ್ಲಿದ್ದ ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಆರೋಪಿ ವಿದ್ಯಾರ್ಥಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಶಾಲಾ ಮಂಡಳಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024 ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಷ್ಟು ಬಿಗಿ ಭದ್ರತೆಯ ನಡುವೆಯೂ ವಿದ್ಯಾರ್ಥಿ ಮಾಡಿರುವ ಈ ಕೃತ್ಯ ಪರೀಕ್ಷಾ ಮಂಡಳಿಯನ್ನು ಬೆಚ್ಚಿಬೀಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?