OP Chautala: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು ಶಿಕ್ಷೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರಿಗೆ ದೆಹಲಿಯ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೇ, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ (Om Prakash Chautala) ಅವರಿಗೆ ದೆಹಲಿಯ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೇ, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಅಕ್ರಮ ಆಸ್ತಿ (ಡಿಎ) ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣದ ಕುರಿತು ದೆಹಲಿ ನ್ಯಾಯಾಲಯ ಇಂದು ತನ್ನ ಆದೇಶವನ್ನು ಪ್ರಕಟಿಸಿದೆ.
1993ರಿಂದ 2006ರವರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಓಂ ಪ್ರಕಾಶ್ ಚೌಟಾಲಾ ಹಾಗೂ ಸಿಬಿಐ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಗುರುವಾರ ಆಲಿಸಿದರು. ಶಿಕ್ಷೆಯ ಪ್ರಮಾಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಓಂ ಪ್ರಕಾಶ್ ಚೌಟಾಲಾ ಅವರ ವೈದ್ಯಕೀಯ ಕಾಯಿಲೆಗಳು ಮತ್ತು ವೃದ್ಧಾಪ್ಯವನ್ನು ಉಲ್ಲೇಖಿಸಿ ಅವರ ವಕೀಲರು ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದರು.
ಇದರ ನಡುವೆ ಓಂ ಪ್ರಕಾಶ್ ಚೌತಾಲಾ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋರಿದ್ದು, ಇದು ಸಮಾಜಕ್ಕೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿತ್ತು. ಆದರೆ, ಇಂದು ಚೌತಾಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗಿದೆ. ನ್ಯಾಯಾಲಯವು ಕಳೆದ ವಾರ ಓಂ ಪ್ರಕಾಶ್ ಚೌತಾಲಾ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆರೋಪಿಯು ತನ್ನ ಆದಾಯದ ಮೂಲವನ್ನು ಸಾಬೀತುಪಡಿಸುವ ಮೂಲಕ ಅಥವಾ ಈ ಅವಧಿಯಲ್ಲಿ ಆಸ್ತಿಯನ್ನು ಸಂಪಾದಿಸುವ ಮೂಲಕ ಅಂತಹ ಅನುಪಾತವನ್ನು ತೃಪ್ತಿಕರವಾಗಿ ಲೆಕ್ಕ ಹಾಕಲು ವಿಫಲವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Lalu Prasad Yadav: ಮೇವು ಹಗರಣ; ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ಗೆ ಜಾಮೀನು ಮಂಜೂರು
ಸಿಬಿಐ 2005ರಲ್ಲಿ ಪ್ರಕರಣವನ್ನು ದಾಖಲಿಸಿತ್ತು. 1993 ಮತ್ತು 2006ರ ನಡುವೆ ಅವರ ಕಾನೂನುಬದ್ಧ ಆದಾಯಕ್ಕೆ ಅನುಗುಣವಾಗಿ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ 2010ರ ಮಾರ್ಚ್ 26ರಂದು ಚಾರ್ಜ್ ಶೀಟ್ ಸಲ್ಲಿಸಲಾಯಿತು. ಸಿಬಿಐನ ಎಫ್‌ಐಆರ್‌ನ ಪ್ರಕಾರ, ಓಂ ಪ್ರಕಾಶ್ ಚೌತಾಲಾ ಅವರು ಹರಿಯಾಣದ ಮುಖ್ಯಮಂತ್ರಿಯಾಗಿದ್ದ 1999ರ ಜುಲೈ 24ರಿಂದ 2005ರ ಮಾರ್ಚ್ 5ರ ಅವಧಿಯಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಇತರರೊಂದಿಗೆ ಶಾಮೀಲಾಗಿ, ಅಕ್ರಮವಾಗಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಸಂಪಾದಿಸಿದ್ದರು. ಅವರ ಹೆಸರಿನಲ್ಲಿ, ಅವರ ಕುಟುಂಬದ ಸದಸ್ಯರು ಮತ್ತು ಇತರರ ಹೆಸರಿನಲ್ಲಿ 1,467 ಕೋಟಿ ರೂ.ಗಳಷ್ಟು ಆದಾಯದ ಕಾನೂನುಬದ್ಧ ಮೂಲಗಳಿವೆ ಎನ್ನಲಾಗಿದೆ.
ಆರೋಪಿಗಳು ಅಪಾರ ಪ್ರಮಾಣದ ಸಂಪತ್ತನ್ನು ಸಂಗ್ರಹಿಸಿದ್ದಾರೆ ಮತ್ತು ವಿದೇಶಿ ಹೂಡಿಕೆಯ ಹೊರತಾಗಿ ಸಾವಿರಾರು ಎಕರೆ ಭೂಮಿ, ಬಹು ಸಂಕೀರ್ಣಗಳು, ಅರಮನೆಯ ವಸತಿ ಗೃಹಗಳು, ಹೋಟೆಲ್‌ಗಳು, ಫಾರ್ಮ್‌ಹೌಸ್, ವ್ಯಾಪಾರ ಏಜೆನ್ಸಿಗಳು, ಪೆಟ್ರೋಲ್ ಪಂಪ್‌ಗಳು ಮತ್ತು ಇತರ ಹೂಡಿಕೆಗಳಲ್ಲಿ ದೇಶಾದ್ಯಂತ ಹೂಡಿಕೆ ಮಾಡಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ. ನಗದು ಮತ್ತು ಚಿನ್ನಾಭರಣಗಳನ್ನು ಹೊರತುಪಡಿಸಿ ಒಟ್ಟು 43 ಸ್ಥಿರಾಸ್ತಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಪಟ್ಟಿ ಮಾಡಲಾದ 43 ಆಪಾದಿತ ಆಸ್ತಿಗಳ ಹೊರತಾಗಿ, ಹೆಚ್ಚುವರಿ ಆಸ್ತಿಗಳು ಆರೋಪಿ ಕುಟುಂಬಕ್ಕೆ ಸೇರಿದವು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ಸುಪ್ರೀಂ ಕೋರ್ಟ್ನಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಜಾಮೀನು ಅರ್ಜಿ ವಜಾ
ಓಂ ಪ್ರಕಾಶ್ ಚೌತಾಲಾ ಅವರು ಭಾರತೀಯ ರಾಷ್ಟ್ರೀಯ ಲೋಕದಳದಿಂದ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಅವರು ಭಾರತದ ಆರನೇ ಉಪಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರರಾಗಿದ್ದಾರೆ. 2013ರ ಜನವರಿಯಲ್ಲಿ ನವದೆಹಲಿ ನ್ಯಾಯಾಲಯವು ಚೌತಾಲಾ ಮತ್ತು ಅವರ ಮಗ ಅಜಯ್ ಸಿಂಗ್ ಚೌತಾಲಾಗೆ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 27 May 22