AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಅರಣ್ಯಾಧಿಕಾರಿಗಳು ಸೆರೆ ಹಿಡಿದ ಚಿರತೆಯನ್ನು ಸುಟ್ಟು ಕೊಂದ ಜನರ ಗುಂಪು; 150 ಮಂದಿ ವಿರುದ್ಧ ಕೇಸು

ಅಧಿಕಾರಿಗಳ ಪ್ರಕಾರ ಈ ತಿಂಗಳಾರಂಭದಲ್ಲಿ ಚಿರತೆ ದಾಳಿಯಿಂದ ಊರಿನ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಈ ಸಿಟ್ಟಿನಿಂದ ಜನರು ಚಿರತೆಯನ್ನು ಸುಟ್ಟು ಕೊಂದಿದ್ದಾರೆ. ಆದಾಗ್ಯೂ ಮಹಿಳೆ ಮೇಲೆ ದಾಳಿ ಮಾಡಿದ ಚಿರತೆಯೇ ಇದು ಎಂಬುದು ಸ್ಪಷ್ಟವಾಗಿಲ್ಲ...

ಉತ್ತರಾಖಂಡ: ಅರಣ್ಯಾಧಿಕಾರಿಗಳು ಸೆರೆ ಹಿಡಿದ ಚಿರತೆಯನ್ನು ಸುಟ್ಟು ಕೊಂದ ಜನರ ಗುಂಪು; 150 ಮಂದಿ ವಿರುದ್ಧ ಕೇಸು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:May 27, 2022 | 2:32 PM

Share

ಡೆಹ್ರಾಡೂನ್: ಪೌರಿ ಗಡ್ವಾಲ್ (Pauri Garhwal) ಜಿಲ್ಲೆಯಲ್ಲಿ ಉತ್ತರಾಖಂಡ (Uttarakhand) ಅರಣ್ಯ ಇಲಾಖೆಯ ಅಧಿಕಾರಿಗಳು 7 ವರ್ಷದ ಗಂಡು ಚಿರತೆಯೊಂದನ್ನು (Leopard) ಸೆರೆ ಹಿಡಿದಿದ್ದರು. ಈ ಚಿರತೆಯನ್ನು ಅಲ್ಲಿನ ಗ್ರಾಮದ ಜನರು ಅರಣ್ಯಾಧಿಕಾರಿಗಳ ಕಣ್ಮುಂದೆಯೇ ಸುಟ್ಟು ಕೊಂದ ಘಟನೆ ಮಂಗಳವಾರ ನಡೆದಿದೆ. ಅಧಿಕಾರಿಗಳ ಪ್ರಕಾರ ಈ ತಿಂಗಳಾರಂಭದಲ್ಲಿ ಚಿರತೆ ದಾಳಿಯಿಂದ ಊರಿನ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಈ ಸಿಟ್ಟಿನಿಂದ ಜನರು ಚಿರತೆಯನ್ನು ಸುಟ್ಟು ಕೊಂದಿದ್ದಾರೆ. ಆದಾಗ್ಯೂ ಮಹಿಳೆ ಮೇಲೆ ದಾಳಿ ಮಾಡಿದ ಚಿರತೆಯೇ ಇದು ಎಂಬುದು ಸ್ಪಷ್ಟವಾಗಿಲ್ಲ. ಚಿರತೆಯನ್ನು ಸುಟ್ಟು ಗ್ರಾಮದ ಪ್ರಧಾನ್ ಸೇರಿದಂತೆ 149 ಮಂದಿ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಮತ್ತು ಇತರ ಕಾಯ್ದೆಗಳಡಿಯಲ್ಲಿ ಕೇಸು ದಾಖಲಿಸಲಾಗಿದೆ.  ಈ ಬಗ್ಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಮುಖೇಶ್ ಶರ್ಮಾ, ಚಿರತೆ ದಾಳಿಗೊಳಗಾದ ಮಹಿಳೆಯನ್ನು 47ರ ಹರೆಯದ ಸುಷ್ಮಾ ದೇವಿ ಎಂದು ಗುರುತಿಸಲಾಗಿದೆ. ಇಲ್ಲಿ ಸಪ್ಲೋದಿ  ಗ್ರಾಮದಲ್ಲಿ ಮೇ15ರಂದು ನಡೆದ ಚಿರತೆ ದಾಳಿಯಲ್ಲಿ ಈಕೆ ಮೃತಪಟ್ಟಿದ್ದರು. ಈ ಪ್ರಕರಣದ ನಂತರ ಅರಣ್ಯಾಧಿಕಾರಿಗಳು ಎರಡು ಜಾಗಗಳಲ್ಲಿ ಬೋನು ಇರಿಸಿದ್ದರು. ಮಂಗಳವಾರ ಬೆಳಗ್ಗೆ 5.20ಕ್ಕೆ ಒಂದು ಬೋನಿನೊಳಗೆ ಚಿರತೆ ಬಿದ್ದಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಅರಣ್ಯಇಲಾಖೆಯ ಅಧಿಕಾರಿಗಳು ತಕ್ಷಣವೇ ಅಲ್ಲಿಗೆ ಧಾವಿಸಿದರು.ಅಲ್ಲಿ ನೆರೆದಿದ್ದ ಗ್ರಾಮದ ಜನರೊಂದಿಗೆ ಮಾತನಾಡಿದರು.ಆದರೆ ಗ್ರಾಮದ ಪ್ರಧಾನ್ ನೇತೃತ್ವದ ಜನರ ಗುಂಪು ಬೋನಿನೊಳಗಿದ್ದ ಚಿರತೆ ಮೇಲೆ ದಾಳಿ ನಡೆಸಿದರು. ಬೋನಿನ ಮೇಲೆ ಪೆಟ್ರೋಲ್ ಸುರಿದು ಒಣಹುಲ್ಲಿಗೆ ಬೆಂಕಿ ಹಚ್ಚಿ ಎಸೆದರು. ಬೋನಿನೊಳಗಿದ್ದ ಚಿರತೆ ಸುಟ್ಟು ಸಾವಿಗೀಡಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಜನರನ್ನು ತಡೆಯಲು ಯತ್ನಿಸಿದರೂ ಸಪ್ಲೋದಿ ಮತ್ತು ನೆರೆಹೊರೆಯ ಮೂರು ನಾಲ್ಕು ಗ್ರಾಮದ ಜನರೂ ದಾಳಿಗೆ ಪ್ರೋತ್ಸಾಹ ನೀಡಿದರು ಎಂದು ಶರ್ಮಾ ಹೇಳಿದ್ದಾರೆ.

ಈ ಘಟನೆ ನಂತರ ನಾವು ಚಿರತೆಯ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ದೇವೆ. ಕಾನೂನು ಕೈಗೆತ್ತಿಕೊಂಡ ಗ್ರಾಮಸ್ಥರ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ. ಸಾವಿಗೀಡಾದ ಚಿರತೆ ಏಳು ವರ್ಷದ ಗಂಡು ಚಿರತೆ. ಮಹಿಳೆ ಮೇಲೆ ದಾಳಿ ನಡೆಸಿದ್ದು ಇದೇ ಚಿರತೆ ಎಂಬುದನ್ನು ದೃಢಪಡಿಸಿಲ್ಲ. ಚಿರತೆಯ ಮೇಲೆ ಗ್ರಾಮದ ಜನರು ಯಾಕೆ ದಾಳಿ ಮಾಡಿದರು ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಶರ್ಮಾ ಹೇಳಿದ್ದಾರೆ. 2011ರಲ್ಲಿಯೂ ಇಂಥದ್ದೇ ಘಟನೆ ಧಾಂಧರ್ ಗ್ರಾಮದಲ್ಲಿ ನಡೆದಿತ್ತು. ಪ್ರಾಣಿ ಹತ್ಯೆಗಾಗಿ ಕೇಸು ದಾಖಲಿಸಿದ್ದರೂ ನಂತರ ಅದನ್ನು ಹಿಂಪಡೆಯಲಾಯಿತು.

ಹಲವಾರು ಪ್ರಕರಣಗಳಲ್ಲಿ ಮನುಷ್ಯನ ಮೇಲೆ ದಾಳಿಮಾಡುವ ಮೃಗಗಳನ್ನು ಕೊಲ್ಲಲು ಅರಣ್ಯ ಇಲಾಖೆ ಬೇಟೆಗಾರರನ್ನು ಕರೆಸುತ್ತದೆ. 2020ರಲ್ಲಿ ಅಲ್ಮೋರಾ ಜಿಲ್ಲೆಯಲ್ಲಿ ಇಬ್ಬರನ್ನು ಕೊಂದ ಚಿರತೆಯನ್ನು ಅರಣ್ಯ ಇಲಾಖೆ ಕೊಂದಿತ್ತು. ಈ ವರ್ಷಾರಂಭದಲ್ಲಿ ತೆಹರಿ ಜಿಲ್ಲೆಯಲ್ಲಿ ಬಾಲಕನೊಬ್ಬನನ್ನು ಕೊಂದ ಚಿರತೆಯನ್ನು ಅರಣ್ಯ ಇಲಾಖೆಯ ಬೇಟೆಗಾರರು ಕೊಂದಿದ್ದರು.

ಇದನ್ನೂ ಓದಿ
Image
ಉತ್ತರಾಖಂಡ: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆ
Image
ಮೈಸೂರು ಬಳಿಯ ವೀರನಹೊಸಹಳ್ಳಿಗೆ ನುಗ್ಗಿತೊಂದು ಕಾಡಾನೆ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ!
Image
ಹಾಸನದಲ್ಲಿ ಚಿರತೆಯೊಂದಿಗೆ ಕಾದಾಡಿ ಗೆದ್ದ ಸಾಕು ನಾಯಿ; ವಿಡಿಯೋ ನೋಡಿ
Image
Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Fri, 27 May 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ