AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಕಿಸ್ತಾನ ಮಾನವೀಯತೆಗೆ ಬಡಿದ ಕ್ಯಾನ್ಸರ್’ : ಯುಪಿ ಸಿಎಂ ಯೋಗಿ ಆದಿತ್ಯನಾಥ್

ಆದಿತ್ಯನಾಥ್ ಅವರು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಕರೆ ನೀಡುತ್ತಿರುವುದು ಇದೇ ಮೊದಲಲ್ಲ.  ಮೇ 18 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳೊಳಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ ಎಂದು ಯುಪಿ ಸಿಎಂ ಹೇಳಿದ್ದರು.

'ಪಾಕಿಸ್ತಾನ ಮಾನವೀಯತೆಗೆ ಬಡಿದ ಕ್ಯಾನ್ಸರ್' : ಯುಪಿ ಸಿಎಂ ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 8:21 PM

Share

ಅಗರ್ತಲಾ ಸೆಪ್ಟೆಂಬರ್ 16: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸೋಮವಾರ ಪಾಕಿಸ್ತಾನದ (Pakistan) ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು “ಮಾನವೀಯತೆಗೆ ಬಡಿದ ಕ್ಯಾನ್ಸರ್”. ಇದಕ್ಕೆ ಜಾಗತಿಕ ಸಮುದಾಯ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ.”ಪಾಕಿಸ್ತಾನ ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ನೀಡುವವರೆಗೆ ನಾವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈಗ, ಪಾಕ್ ಆಕ್ರಮಿತ ಕಾಶ್ಮೀರ ಮುಕ್ತವಾಗಲು ಮತ್ತು ಮತ್ತೆ ಭಾರತದ ಭಾಗವಾಗಲು ಒತ್ತಾಯಿಸುತ್ತಿದೆ. ಪಾಕಿಸ್ತಾನವು ಮಾನವೀಯತೆಗೆ ಕ್ಯಾನ್ಸರ್. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಶ್ವದ ರಾಷ್ಟ್ರಗಳು ಒಗ್ಗೂಡಬೇಕು” ಎಂದು ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆದಿತ್ಯನಾಥ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಆದಿತ್ಯನಾಥ್ ಅವರು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಕರೆ ನೀಡುತ್ತಿರುವುದು ಇದೇ ಮೊದಲಲ್ಲ.  ಮೇ 18 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳೊಳಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ ಎಂದು ಯುಪಿ ಸಿಎಂ ಹೇಳಿದ್ದರು.

“ನಾವು ನಮ್ಮ ಶತ್ರುವನ್ನು ಆರಾಧಿಸುವುದಿಲ್ಲ. ನಮ್ಮ ಜನರನ್ನು ಯಾರಾದರೂ ಕೊಂದರೆ ನಾವು ಅವರನ್ನು ಪೂಜಿಸುವುದಿಲ್ಲ. ಆದರೆ ಅವರಿಗೆ ತಕ್ಕ ಉತ್ತರವನ್ನು ನೀಡುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿ ಮತ್ತು ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ, ”ಎಂದು ಯೋಗಿ ಆದಿತ್ಯನಾಥ್  ಈ ಹಿಂದೆ ಹೇಳಿದ್ದರು.

ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ವಿಭಜನೆಯನ್ನು ಒಪ್ಪಿಕೊಂಡಿದೆ: ಆದಿತ್ಯನಾಥ್

ರ‍್ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಭಾರತದ ವಿಭಜನೆಗೆ ಕಾಂಗ್ರೆಸ್ ಅನ್ನು ದೂಷಿಸಿದರು. “ನಾವು ಕಾಂಗ್ರೆಸ್ ಒಪ್ಪಂದವನ್ನು ಅನುಸರಿಸಿದರೆ, ಅವರು ರಾಷ್ಟ್ರವನ್ನು ವಿಭಜಿಸುತ್ತಾರೆ, ಹಿಂದೂಗಳನ್ನು ನರಮೇಧ ಮಾಡುತ್ತಾರೆ. ನಮ್ಮ ದೇಶದ ಜನಾಂಗೀಯ ಸಂಪ್ರದಾಯಗಳನ್ನು ನಾಶಪಡಿಸುತ್ತಾರೆ ಎಂದು ಆರ್​​ಎಸ್​​ಎಸ್​​​ಗೆ ತಿಳಿದಿತ್ತು. ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ದೇಶ ವಿಭಜನೆಯನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ: ಅಧಿಕಾರದ ಹಸಿವಿನ ದುರಾಸೆಯ ಜನರು ಭಾರತವನ್ನು ಒಡೆಯಲು ಬಯಸುತ್ತಾರೆ: ಗುಜರಾತ್‌ನಲ್ಲಿ ಪ್ರಧಾನಿ ಮೋದಿ

“ಇಂದು ನಾವೆಲ್ಲರೂ ‘ಏಕ್ ಭಾರತ್, ಶ್ರೇಷ್ಠ ಭಾರತ’ಕ್ಕಾಗಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದೇವೆ.ಶ್ರೀಕೃಷ್ಣನ ನೆನಪುಗಳನ್ನು ಮೆಲುಕು ಹಾಕಿದಾಗಲೆಲ್ಲ ಒಂದು ಕೈಯಲ್ಲಿ ‘ಮುರಳಿ’ ಮತ್ತು ಇನ್ನೊಂದು ಕೈಯಲ್ಲಿ ‘ಸುದರ್ಶನ’ ಇರುವುದನ್ನು ಕಾಣಬಹುದು. . ‘ಮುರಳಿ’ಯಿಂದ ಮಾತ್ರ ಒಳ್ಳೆಯದಾಗುವುದಿಲ್ಲ, ಭದ್ರತೆಗೆ ‘ಸುದರ್ಶನ’ ಕೂಡ ಬೇಕು,” ಎಂದಿದ್ದಾರೆ ಉತ್ತರ ಪ್ರದೇಶದ ಸಿಎಂ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ