ಹನುಮಂತನ ಅಪ್ಪಣೆ ಪಡೆದು ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ, ಅಷ್ಟಕ್ಕು ಹನುಮಂತನ ಅಪ್ಪಣೆ ಯಾಕೆ ಮುಖ್ಯ?

ರಾಮ ಮಂದಿರ‌(Ram Mandir) ಉದ್ಘಾಟನೆಯ ದಿನದಂದು ಅಯೋಧ್ಯೆ(Ayodhya)ಯ ರಾಜ ಎಂದೇ ಕರೆಯಲ್ಪಡುವ ಹನುಮಂತನ ಅನುಮತಿ ಪಡೆದು ಪ್ರಧಾನಿ ಮೋದಿ ರಾಮಜನ್ಮಭೂಮಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರು ಮೊದಲು ಹನುಮಾನ್ ಘಡಿಯಲ್ಲಿ ಪ್ರತಿಜ್ಞೆ ಮಾಡಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಇದಾದ ಬಳಿಕ ರಾಮಮಂದಿರದಲ್ಲಿ ಷೋಡಶೋಪಚಾರ ಪೂಜೆ ನಡೆಯಲಿದೆ. ಷೋಡಶೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ಗರ್ಭಗುಡಿಯಲ್ಲಿ ಒಟ್ಟು 40 ನಿಮಿಷಗಳು ಪೂಜೆ‌ ನಡೆಯಲಿದೆ

ಹನುಮಂತನ ಅಪ್ಪಣೆ ಪಡೆದು ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ, ಅಷ್ಟಕ್ಕು ಹನುಮಂತನ ಅಪ್ಪಣೆ ಯಾಕೆ ಮುಖ್ಯ?
ಆಂಜನೇಯ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ನಯನಾ ರಾಜೀವ್

Updated on:Jan 04, 2024 | 10:41 AM

ರಾಮ ಮಂದಿರ‌(Ram Mandir) ಉದ್ಘಾಟನೆಯ ದಿನದಂದು ಅಯೋಧ್ಯೆ(Ayodhya)ಯ ರಾಜ ಎಂದೇ ಕರೆಯಲ್ಪಡುವ ಹನುಮಂತನ ಅನುಮತಿ ಪಡೆದು ಪ್ರಧಾನಿ ಮೋದಿ ರಾಮಜನ್ಮಭೂಮಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರು ಮೊದಲು ಹನುಮಾನ್ ಘಡಿಯಲ್ಲಿ ಪ್ರತಿಜ್ಞೆ ಮಾಡಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಇದಾದ ಬಳಿಕ ರಾಮಮಂದಿರದಲ್ಲಿ ಷೋಡಶೋಪಚಾರ ಪೂಜೆ ನಡೆಯಲಿದೆ. ಷೋಡಶೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ಗರ್ಭಗುಡಿಯಲ್ಲಿ ಒಟ್ಟು 40 ನಿಮಿಷಗಳು ಪೂಜೆ‌ ನಡೆಯಲಿದೆ

ಅಯೋಧ್ಯೆಯಲ್ಲಿ ಹನುಮಂತ ರಾಜನಾಗಿ ಕುಳಿತಿದ್ದಾನೆ ಎಂಬ ನಂಬಿಕೆಯಿದೆ. ಅವರ ಅನುಮತಿಯಿಲ್ಲದೆ ಅಯೋಧ್ಯೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ನಂಬಿಕೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ಆಸ್ಥಾನ ಹುಮಾನ್ ಗಢಿಗೆ ತೆರಳಲಿದ್ದಾರೆ‌. ಅಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಹನುಮಾನ್ ಅವರಿಂದ ವಿಶೇಷ ಅನುಮತಿ ಪಡೆದು ರಾಮಮಂದಿರಕ್ಕೆ‌‌ ತೆರಳಲಿದ್ದಾರೆ.

ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಆಚರಣೆಗಳು ಜನವರಿ 16 ರಿಂದ ಪ್ರಾರಂಭವಾಗಲಿವೆ. ಆಚರಣೆಯಲ್ಲಿ, ಪ್ರಧಾನಿ ಮೋದಿ ಮೊದಲು ಪ್ರತಿಜ್ಞೆ ತೆಗೆದುಕೊಂಡು ದೇಶಕ್ಕೆ ಸಮರ್ಪಿಸಲಿದ್ದಾರೆ. ನಂತರ ರಾಮಲಲ್ಲಾ ಷೋಡಶೋಪಚಾರ ಪೂಜೆ ಶುರುವಾಗಲಿವೆ. ಷೋಡಶೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ರಾಮಮಂದಿರದ ಗರ್ಭಗುಡಿಯಲ್ಲಿ ಒಟ್ಟು 40 ನಿಮಿಷಗಳು ಪೂಜೆ ನಡೆಯಲಿವೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ

ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ 84 ಸೆಕೆಂಡುಗಳ ಅತ್ಯಂತ ಪವಿತ್ರ ಮುಹೂರ್ತ ಇರುತ್ತದೆ. ಅದು 12.29 ನಿಮಿಷ 8 ಸೆಕೆಂಡುಗಳಿಂದ 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ಪೂಜೆಯ ಸಮಯದಲ್ಲಿ ಗರ್ಭಗುಡಿಯಲ್ಲಿ 11 ಜನರು ಇರಬಹುದಾಗಿದೆ. ಆಚಾರ್ಯ ಲಕ್ಷ್ಮೀಕಾಂತ್ ಮತ್ತು ಗಣೇಶ್ವರ್ ದ್ರಾವಿಡ್ ಅವರ ನೇತೃತ್ವದಲ್ಲಿ ಪೂಜೆ ನಡೆಯಲಿದೆ.

ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ಶ್ರೀರಾಮರು ಸಾಕೇತ್ ಧಾಮಕ್ಕೆ ಹೋಗಲು ಪ್ರಾರಂಭಿಸಿದಾಗ, ಅದಕ್ಕೂ ಮೊದಲು ಅವರು ಹನುಮಾನ್ ಅವರಿಗೆ ಪಟ್ಟಾಭಿಷೇಕವನ್ನು ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಹನುಮಾನ್ ಅವರ ಅನುಮತಿಯನ್ನು ಪಡೆಯದೆ, ರಾಮನ ದರ್ಶನ ಮತ್ತು ಪೂಜೆಯ ಪ್ರಯೋಜನವನ್ನು ಪಡೆಯಲಾಗುವುದಿಲ್ಲ. ತಾಯಿ ಸೀತೆಯೂ ಹನುಮಾನರಿಗೆ ಅಮರತ್ವವನ್ನು ದಯಪಾಲಿಸಿದ್ದರು. ಈ ಕಾರಣಕ್ಕಾಗಿಯೇ ರಾಮಮಂದಿರ‌ ದರ್ಶನಕ್ಕೂ ಮೊದಲು ಹನುಮಾನ್ ಗಢಿ ಯಲ್ಲಿ ದರ್ಶನ ಪಡೆದು ರಾಮಮಂದಿರಕ್ಕೆ ತೆರಳುವ ಪ್ರತಿತಿ ಇದೆ.

ಇನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ 8 ರಿಂದ 10 ಸಾವಿರ ಅತಿಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು 100 ಚಾರ್ಟರ್ಡ್ ವಿಮಾನಗಳ ಮೂಲಕ ಅತಿಥಿಗಳು ಆಗಮಿಸುತ್ತಾರೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ವಿಶೇಷ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:37 am, Thu, 4 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ