ಮಳೆಯಿಂದ ಹಾನಿಗೊಳಗಾದ ಉತ್ತರಾಖಂಡಕ್ಕೆ ಪ್ರಧಾನಿ ಮೋದಿ 1,200 ಕೋಟಿ ರೂ.ನೆರವು ಘೋಷಣೆ
ಉತ್ತರಾಖಂಡದ ವಿಪತ್ತು ಪೀಡಿತ ಪ್ರದೇಶಗಳಿಗೆ ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ 1,200 ಕೋಟಿ ರೂ. ನೆರವು ಘೋಷಿಸಿದ್ದಾರೆ. ಈ ಮಾನ್ಸೂನ್‌ನಲ್ಲಿ ಭಾರಿ ಮಳೆ, ಮೇಘಸ್ಫೋಟ ಮತ್ತು ಭೂಕುಸಿತಗಳು ಉತ್ತರಕಾಶಿಯ ಧರಾಲಿ-ಹರ್ಸಿಲ್, ಚಮೋಲಿಯ ಥರಾಲಿ ಮತ್ತು ರುದ್ರಪ್ರಯಾಗದ ಚೆನಗಡ್ ಸೇರಿದಂತೆ ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ಹಾನಿ ಉಂಟುಮಾಡಿದೆ.

ನವದೆಹಲಿ, ಸೆಪ್ಟೆಂಬರ್ 11: ಉತ್ತರಾಖಂಡದ ವಿಪತ್ತು ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು (ಗುರುವಾರ) 1,200 ಕೋಟಿ ರೂ. ನೆರವು ಪ್ಯಾಕೇಜ್ ಘೋಷಿಸಿದ್ದಾರೆ. ಈ ಮಾನ್ಸೂನ್‌ನಲ್ಲಿ ಮಳೆ ಸಂಬಂಧಿತ ನೈಸರ್ಗಿಕ ವಿಕೋಪಗಳ ಸರಣಿಯ ನಂತರ ರಾಜ್ಯ ಸರ್ಕಾರ ಕೇಂದ್ರದಿಂದ 5,702 ಕೋಟಿ ರೂ. ಪರಿಹಾರವನ್ನು ಕೋರಿದೆ. ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಕೇಂದ್ರ ತಂಡವು ಈಗಾಗಲೇ ಉತ್ತರಕಾಶಿ, ರುದ್ರಪ್ರಯಾಗ, ಪೌರಿ ಗರ್ವಾಲ್, ಚಮೋಲಿ, ಬಾಗೇಶ್ವರ ಮತ್ತು ನೈನಿತಾಲ್ ಜಿಲ್ಲೆಗಳ ಪೀಡಿತ ಪ್ರದೇಶಗಳಿಗೆ ಪರಿಶೀಲನೆಗಾಗಿ ಭೇಟಿ ನೀಡಿದೆ. ಇಂದು ಮುಂಜಾನೆ ಡೆಹ್ರಾಡೂನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. 2013ರ ಕೇದಾರನಾಥ ದುರಂತದ ನಂತರ ಈ ವರ್ಷ ಉತ್ತರಾಖಂಡ ರಾಜ್ಯವು ಅತಿ ಹೆಚ್ಚು ವಿಪತ್ತುಗಳಿಗೆ ಸಾಕ್ಷಿಯಾಗಿದೆ.
Met the teams of NDRF, SDRF, Aapda Mitras and others who are working across Uttarakhand, providing assistance to all those who have been affected. I am very proud of their courage as well as dedication towards helping others in these testing circumstances. pic.twitter.com/1s5lBdCpO7
— Narendra Modi (@narendramodi) September 11, 2025
ಇದನ್ನೂ ಓದಿ: ಪ್ರವಾಹದಿಂದ ತತ್ತರಿಸಿದ ಪಂಜಾಬ್ಗೆ ಪ್ರಧಾನಿ ಮೋದಿ ಭೇಟಿ; 1,600 ಕೋಟಿ ರೂ. ಆರ್ಥಿಕ ಸಹಾಯ ಘೋಷಣೆ
VIDEO | PM Narendra Modi (@narendramodi) chairs flood review meeting in Dehradun, Uttarakhand.
(Source: Third Party)
(Full video available on PTI Videos – https://t.co/n147TvrpG7) pic.twitter.com/3C2cYkqN4f
— Press Trust of India (@PTI_News) September 11, 2025
ಈ ಮಳೆಗಾಲದಲ್ಲಿ ಉತ್ತರಾಖಂಡದ ಹಲವಾರು ಪ್ರದೇಶಗಳು ಭಾರೀ ಮಳೆ, ಮೇಘಸ್ಫೋಟ ಮತ್ತು ಭೂಕುಸಿತಗಳಿಂದ ಹಾನಿಗೊಳಗಾಗಿವೆ. ಇದರಲ್ಲಿ ಉತ್ತರಕಾಶಿಯ ಧರಾಲಿ-ಹರ್ಸಿಲ್, ಚಮೋಲಿಯ ಥರಾಲಿ, ರುದ್ರಪ್ರಯಾಗದ ಚೆನಾಗಡ್, ಪೌರಿಯ ಸೈಂಜಿ, ಬಾಗೇಶ್ವರದ ಕಪ್‌ಕೋಟ್ ಮತ್ತು ನೈನಿತಾಲ್ ಜಿಲ್ಲೆಯ ಕೆಲವು ಭಾಗಗಳು ಸೇರಿವೆ. ಧರಾಲಿ-ಹರ್ಸಿಲ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಗಂಗಾ ನದಿ ಹುಟ್ಟುವ ಗಂಗೋತ್ರಿಯ ಮಾರ್ಗದಲ್ಲಿರುವ ಈ ಸುಂದರ ತಾಣಗಳನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಹೋಟೆಲ್‌ಗಳು, ಹೋಂಸ್ಟೇಗಳು, ರೆಸ್ಟೋರೆಂಟ್‌ಗಳು ಮತ್ತು ಅತಿಥಿ ಗೃಹಗಳಿಂದ ತುಂಬಿದ್ದ ಈ ಪ್ರದೇಶವು ಆಗಸ್ಟ್ 5ರಂದು ಕೆಲವೇ ಸೆಕೆಂಡುಗಳಲ್ಲಿ ಮಣ್ಣು ಮತ್ತು ಅವಶೇಷಗಳಿಂದ ತುಂಬಿತು.
Chaired a review meeting on the flood situation in Uttarakhand. The devastation caused by floods in the state has saddened us all. My deepest condolences to the families who lost their loved ones. I pray that the people injured recover at the earliest. We are ensuring swift… pic.twitter.com/FIWDoU0NCD
— Narendra Modi (@narendramodi) September 11, 2025
ಏಪ್ರಿಲ್‌ನಿಂದ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳು ಇಲ್ಲಿಯವರೆಗೆ 85 ಜನರು ಸಾವನ್ನಪ್ಪಿದ್ದಾರೆ, 128 ಜನರು ಗಾಯಗೊಂಡಿದ್ದಾರೆ ಮತ್ತು 94 ಜನರು ಕಾಣೆಯಾಗಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Thu, 11 September 25




