ನಮೋ ಕ್ರೇಜ್; ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿಗೆ ರಾತ್ರೋರಾತ್ರಿ 1.1 ಮಿಲಿಯನ್ ಫಾಲೋವರ್ಸ್ ಹೆಚ್ಚಳ, 303 ಮಿಲಿಯನ್ ವ್ಯೂಸ್!

ಭಾರತದ ಪ್ರಧಾನಿ ನರೇಂದ್ರ ಮೋದಿ ಕ್ರೇಜ್ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಅನುಯಾಯಿಗಳ ಸಂಖ್ಯೆ ಕೆಲವೇ ನಿಮಿಷಗಳಲ್ಲಿ ಗಗನಕ್ಕೇರಿದೆ. ಕೇವಲ 12 ಗಂಟೆಗಳಲ್ಲಿ ಮೋದಿ ಅವರ ಇನ್​​ಸ್ಟಾಗ್ರಾಂ ಖಾತೆಗೆ 1.1 ಮಿಲಿಯನ್ ಅನುಯಾಯಿಗಳು ಹೆಚ್ಚಾಗಿದ್ದಾರೆ. ಗುರುವಾರ ಮಧ್ಯರಾತ್ರಿ ಪ್ರಧಾನಿ ಮೋದಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಪ್ರಮುಖ ಘೋಷಣೆ ಮಾಡಿದ್ದರು. ಅವರ ಈ ಸೆಲ್ಫೀ ವಿಡಿಯೋ ಬಳಿಕ ಫಾಲೋವರ್​​ಗಳ ಸಂಖ್ಯೆ ಭಾರೀ ಹೆಚ್ಚಾಗಿದೆ.

ನಮೋ ಕ್ರೇಜ್; ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿಗೆ ರಾತ್ರೋರಾತ್ರಿ 1.1 ಮಿಲಿಯನ್ ಫಾಲೋವರ್ಸ್ ಹೆಚ್ಚಳ, 303 ಮಿಲಿಯನ್ ವ್ಯೂಸ್!
Narendra Modi Instagram Followers
Image Credit source: PTI
Edited By:

Updated on: Jul 25, 2026 | 9:31 AM

ಮುಖ್ಯಾಂಶಗಳು

  • ರಾತ್ರೋರಾತ್ರಿ ಪ್ರಧಾನಿ ಮೋದಿ ಅನುಯಾಯಿಗಳ ಸಂಖ್ಯೆ 1.1 ಮಿಲಿಯನ್ ಹೆಚ್ಚಳ
  • ನಿನ್ನೆ ರಾತ್ರಿ ಸೆಲ್ಫೀ ವಿಡಿಯೋ ಬಳಿಕ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ಏರಿಕೆ
  • ಟ್ರಂಪ್​ಗಿಂತ ಫೇಮಸ್ ನಮ್ಮ ಪ್ರಧಾನಿ ಮೋದಿ

ನವದೆಹಲಿ, ಜುಲೈ 24: ಪ್ರಧಾನಿ ನರೇಂದ್ರ ಮೋದಿ (Prime Minsiter Narendra Modi) ನಿನ್ನೆ ರಾತ್ರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ (NEET Paper Leak) ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸೆಲ್ಫಿ ವಿಡಿಯೋ ಅಪ್​ಲೋಡ್ ಮಾಡಿದ್ದರು. ಇದಾದ ಬಳಿಕ ಅವರಿಗೆ ರಾತ್ರೋರಾತ್ರಿ 1.1 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi Instagram) ಅವರು ನಿನ್ನೆ ಅಪ್​ಲೋಡ್ ಮಾಡಿದ ಸೆಲ್ಫಿ ವಿಡಿಯೋ ಬಳಿಕ, ಕೇವಲ ಒಂದೇ ರಾತ್ರಿಯಲ್ಲಿ ಸುಮಾರು 11 ಲಕ್ಷ ಹೊಸ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಗಳಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡುವ ಮೊದಲು ಪ್ರಧಾನಿ ಮೋದಿ 101 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಈ ವಿಡಿಯೋ ಅಪ್‌ಲೋಡ್ ಮಾಡಿದ ನಂತರ ಆ ಸಂಖ್ಯೆ 102 ಮಿಲಿಯನ್ ದಾಟಿದೆ. ಫಾಲೋವರ್ಸ್‌ಗಳ ಈ ಹೆಚ್ಚಳವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ನೀಟ್ ಪ್ರತಿಭಟನೆ, ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ

ಮೋದಿಯ ಸೆಲ್ಫಿ ವಿಡಿಯೋ:

ನೀಟ್ (NEET) ಪರೀಕ್ಷಾ ಪೇಪರ್ ಸೋರಿಕೆ ವಿವಾದ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳ ನಡುವೆ, ಪ್ರಧಾನಿ ಮೋದಿ ಅವರು ನಿನ್ನೆ ಮಧ್ಯರಾತ್ರಿ ತಮ್ಮ ಮೊಬೈಲ್‌ನ ಸೆಲ್ಫಿ ಕ್ಯಾಮೆರಾದಲ್ಲಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾವುದೇ ಅಧಿಕೃತ ಸ್ಟುಡಿಯೋ ಅಥವಾ ಪೋಡಿಯಂ ಇಲ್ಲದೆ, ನೇರವಾಗಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಈ ‘ಜೆನ್-ಝಡ್’ (Gen-Z) ಶೈಲಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು.


ಪೇಪರ್ ಲೀಕ್ ವಿರುದ್ಧ ಕಠಿಣ ಕಾನೂನುಗಳು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಯ ಕುರಿತು ಪ್ರಕಟಿಸಿದ ಈ ವಿಡಿಯೋ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಲಕ್ಷಾಂತರ ಜನ ಹೊಸ ಫಾಲೋವರ್ಸ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ಒಟ್ಟು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 102 ಮಿಲಿಯನ್‌ಗೆ ತಲುಪಿದೆ.


ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ

ಮೋದಿಯ ಜನಪ್ರಿಯತೆ ಕಡಿಮೆಯೇನಿಲ್ಲ!:

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜಾಗತಿಕ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ನರೇಂದ್ರ ಮೋದಿ ಈಗಾಗಲೇ 100 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳ ಅಪರೂಪದ ಮೈಲಿಗಲ್ಲನ್ನು ದಾಟುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರ ಫಾಲೋವರ್‌ಗಳ ಸಂಖ್ಯೆ ಅಮೆರಿಕದ ಅಧ್ಯಕ್ಷ ಟ್ರಂಪ್, ಯುಕೆ ಪ್ರಧಾನಿ ಮತ್ತು ಇತರ ಜಾಗತಿಕ ನಾಯಕರಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎಂಬುದು ಅವರ ಜನಪ್ರಿಯತೆಯನ್ನು ಸಾರುತ್ತದೆ.

ವ್ಯೂಸ್​ನಲ್ಲಿ ಐಶೋಸ್ಪೀಡ್​ ಹಿಂದಿಕ್ಕಿ ವರ್ಲ್ಡ್ ರೆಕಾರ್ಡ್​ ಮಾಡಿದ ಮೋದಿ!

ಇನ್ಸ್‌ಟಾಗ್ರಾಮ್‌ನಲ್ಲಿ ತೀರಾ ಚರ್ಚೆಯಾಗಿದ್ದ ಐಶೋಸ್ಪೀಡ್ (IShowSpeed) ಅವರ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ‘ಬಿಟಿಎಸ್’ (BTS) ತಂಡವನ್ನು ಭೇಟಿಯಾದ ಸ್ಪೀಡ್ ಅವರ ರೀಲ್ಸ್ ಕೇವಲ 24 ಗಂಟೆಗಳಲ್ಲಿ 300 ಮಿಲಿಯನ್ ವೀಕ್ಷಣೆ (Views) ಪಡೆದು ವಿಶ್ವ ದಾಖಲೆ ನಿರ್ಮಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಇನ್‌ಸ್ಟಾಗ್ರಾಮ್ ರೀಲ್ಸ್ ಕೇವಲ 24 ಗಂಟೆಗಳಲ್ಲಿ 303 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಸ್ಪೀಡ್ ಅವರ ದಾಖಲೆಯನ್ನು ಮುರಿದು, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಹೊಸ ಇತಿಹಾಸ ಬರೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Fri, 24 July 26

Loading...
Unable to load recommendations.
Follow Us