ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆ ತೀರ್ಪು ರದ್ದು ಮಾಡುವೆ ಎಂದಿದ್ದ ರಾಹುಲ್ : ಮಾಜಿ ಕಾಂಗ್ರೆಸ್ ನಾಯಕ
ಈ ಬಾರಿ ಲೋಕಸಭೆ ಚುನಾವಣೆ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಅವರು ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ರದ್ದು ಮಾಡುತ್ತೇವೆ ಎಂದು ಹೇಳಿದರು ಎಂದು ಕಾಂಗ್ರೆಸ್ನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಎಎನ್ಐಯಲ್ಲಿ ಹೇಳಿದ್ದಾರೆ.
ದೆಹಲಿ, ಮೇ.6: ಕಾಂಗ್ರೆಸ್ನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Pramod Krishnam) ಕಾಂಗ್ರೆಸ್ನ ಒಂದಲ್ಲ ಒಂದು ನಿರ್ಧಾರ ಹಾಗೂ ಅಲ್ಲಿ ನಡೆದಿರುವ ಅನೇಕ ಚರ್ಚೆಗಳನ್ನು ಬಿಡಿಬಿಡಿಯಾಗಿ ಬಿಚ್ಚಿಡುತ್ತಿದ್ದಾರೆ. ಇದೀಗ ಮತ್ತೊಂದು ಮಹತ್ವದ ವಿಚಾರವನ್ನು ಎಎನ್ಐಗೆ ತಿಳಿಸಿದ್ದಾರೆ. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ರದ್ದುಗೊಳಿಸುವುದಾಗಿ ರಾಹುಲ್ ಗಾಂಧಿ ಒಮ್ಮೆ ಹೇಳಿದರು ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ. ಫೆಬ್ರವರಿ 2024 ರಲ್ಲಿ “ಅಶಿಸ್ತಿನ” ಕಾರಣಕ್ಕಾಗಿ ಪ್ರಮೋದ್ ಕೃಷ್ಣಂ ಅವರನ್ನು ಕಾಂಗ್ರೆಸ್ನಿಂದ ಹೊರಹಾಕಲಾಯಿತು. ಇದರ ನಂತರ ಕಾಂಗ್ರೆಸ್ನ ಒಂದೊಂದು ಪ್ರಮಾದವನ್ನು ಅವರು ಬಿಚ್ಚಿಡುತ್ತಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರಮೋದ್ ಕೃಷ್ಣಂ ಅವರು, ನಾನು 32 ವರ್ಷಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದೇನೆ. ರಾಮಮಂದಿರ ನಿರ್ಧಾರ ಬಂದಾಗ, ರಾಹುಲ್ ಗಾಂಧಿ ಅವರು ತಮ್ಮ ಆಪ್ತರೊಂದಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಸೂಪರ್ ಪವರ್ ಆಯೋಗವನ್ನು ರಚಿಸುತ್ತೇವೆ ಎಂದು ಹೇಳಿದರು. ಈ ಮಹಾಶಕ್ತಿ ಆಯೋಗ ರಾಮಮಂದಿರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ್ನು ರದ್ದು ಮಾಡುತ್ತದೆ ಎಂದು ಹೇಳಿದರು ಎಂದು ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
#WATCH | Sambal, Uttar Pradesh: Former Congress leader Acharya Pramod Krishnam says, “I have spent more than 32 years in the Congress and when the Ram Mandir decision came, Rahul Gandhi in a meeting with his close aides said that after the Congress govt is formed, they will form… pic.twitter.com/Qpgs91XPZT
— ANI (@ANI) May 6, 2024
1985ರಲ್ಲಿ ವಿಚ್ಛೇದನದ ನಂತರ ತನ್ನ ಪತಿಯಿಂದ ಜೀವನಾಂಶವನ್ನು ಕೋರಿದ ಇಂದೋರ್‌ನ ಶಾ ಬಾನೋ ಎಂಬ ಮುಸ್ಲಿಂ ಮಹಿಳೆ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು, ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರವು ಆಕ್ಟ್ ಮೂಲಕ ತೀರ್ಪನ್ನು ರದ್ದುಗೊಳಿಸಿತು. ಅದೇ ರೀತಿಯಲ್ಲಿ ರಾಮಮಂದಿರದ ತೀರ್ಪುನ್ನು ರದ್ದು ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಹೊಸದೊಂದು ವಿವಾದದಲ್ಲಿ ಸಿಲುಕಿದ ರಾಹುಲ್ ಗಾಂಧಿ, ಕುಲಪತಿಗಳು, ಶಿಕ್ಷಣ ತಜ್ಞರಿಂದ ಬಹಿರಂಗ ಪತ್ರ
ಇನ್ನು ಕಾಂಗ್ರೆಸ್ ಎರಡು ಬಣಗಳಾಗಿ ವಿಭಜನೆಯಾಗಲಿದೆ. ಒಂದು ಪ್ರಿಯಾಂಕಾ ಗಾಂಧಿ ಮತ್ತು ಇನ್ನೊಂದು ರಾಹುಲ್ ಗಾಂಧಿ ಪಕ್ಷ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅಮೇಠಿ ತೊರೆದ ನಂತರ ಕಾಂಗ್ರೆಸ್ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿದಿದೆ. ಇದು ಜೂನ್ 4 ರ ನಂತರ ಸ್ಫೋಟಗೊಳ್ಳಿದೆ. ಬೆಂಬಲಿಗರ ಹೃದಯದಲ್ಲಿ ಈಗ ಜ್ವಾಲಾಮುಖಿಯಾಗಿ ಇದು ಉಳಿದೆ. ಕಾಂಗ್ರೆಸ್ ಮತ್ತೆ ಎರಡು ಬಣಗಳಾಗಿ ವಿಭಜನೆ ಆಗುವುದು ಖಂಡಿತ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ರಾಹುಲ್ ಗಾಂಧಿ ಅವರು ರಾಯ್ಬರೇಲಿಯ ಬದಲಿಗೆ ರಾವಲ್ಪಿಂಡಿಯಿಂದ ಸ್ಪರ್ಧಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 6 May 24