AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಜೊತೆ ರಾಘವ್ ಚಡ್ಡಾ ಸೇರಿ 7 ಆಪ್ ಸಂಸದರ ವಿಲೀನವನ್ನು ಅಂಗೀಕರಿಸಿದ ರಾಜ್ಯಸಭೆ

ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ವಿಲೀನಗೊಂಡ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ ಸೇರಿ 7 ಎಎಪಿ ರೆಬೆಲ್ ಸಂಸದರ ನಿರ್ಧಾರವನ್ನು ರಾಜ್ಯಸಭಾ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಈ 7 ಸಂಸದರಿಗೆ ಪದಚ್ಯುತಗೊಳ್ಳುವ ಆತಂಕವಿಲ್ಲ. ರಾಘವ್ ಛಡ್ಡಾ ಮತ್ತು ಇತರ 6 ಎಎಪಿ ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಮಾಡಿದ ಮನವಿಯನ್ನು ರಾಜ್ಯಸಭಾ ಕಾರ್ಯದರ್ಶಿ ಅಂಗೀಕರಿಸಿರುವುದರಿಂದ ಎನ್‌ಡಿಎ ರಾಜ್ಯಸಭೆಯಲ್ಲಿ 140 ಸ್ಥಾನಗಳನ್ನು ದಾಟಿದಂತಾಗಿದೆ.

ಬಿಜೆಪಿ ಜೊತೆ ರಾಘವ್ ಚಡ್ಡಾ ಸೇರಿ 7 ಆಪ್ ಸಂಸದರ ವಿಲೀನವನ್ನು ಅಂಗೀಕರಿಸಿದ ರಾಜ್ಯಸಭೆ
Aap Rebel Mps
ಸುಷ್ಮಾ ಚಕ್ರೆ
|

Updated on: Apr 27, 2026 | 2:58 PM

Share

ನವದೆಹಲಿ, ಏಪ್ರಿಲ್ 27: ರಾಘವ್ ಚಡ್ಡಾ (Raghav Chadha) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ 6 ಸಂಸದರು ಭಾರತೀಯ ಜನತಾ ಪಕ್ಷ (ಬಿಜೆಪಿ)ದೊಂದಿಗೆ ವಿಲೀನಗೊಳ್ಳಲು ಮಾಡಿದ ಮನವಿಯನ್ನು ರಾಜ್ಯಸಭಾ ಅಧ್ಯಕ್ಷರು ಅಂಗೀಕರಿಸಿದ್ದಾರೆ. ಈ ಮೂಲಕ ಮೇಲ್ಮನೆಯ ಸದಸ್ಯರ ಪಟ್ಟಿಯನ್ನು ನವೀಕರಿಸಲಾಗಿದೆ. ಈ ವಿಲೀನದೊಂದಿಗೆ, ಬಿಜೆಪಿಯ ಬಲ 113ಕ್ಕೆ ಏರಿತು. ಹಾಗೇ, ಎನ್‌ಡಿಎ ರಾಜ್ಯಸಭೆಯಲ್ಲಿ 140 ಸ್ಥಾನಗಳನ್ನು ದಾಟಿದೆ. ಈ ವಿಲೀನದ ಬಳಿಕ ಆಮ್ ಆದ್ಮಿ ಪಕ್ಷದ ಬಲ 3ಕ್ಕೆ ಇಳಿದಿದೆ.

ರಾಘವ್ ಚಡ್ಡಾ ಜೊತೆಗೆ, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮಜಿತ್ ಸಿಂಗ್ ಸಾಹ್ನಿ, ಸ್ವಾತಿ ಮಲಿವಾಲ್, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಈ ವಿಲೀನದ ನಂತರ 7 ಸಂಸದರು ರಾಜ್ಯಸಭಾ ಅಧ್ಯಕ್ಷರನ್ನು ತಮ್ಮನ್ನು ಬಿಜೆಪಿ ಸಂಸದರೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು. ಅದನ್ನು ಈಗ ಅಂಗೀಕರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾದಾಮಿಯಲ್ಲೊಂದು ಅಚ್ಚರಿ!
ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾದಾಮಿಯಲ್ಲೊಂದು ಅಚ್ಚರಿ!
ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ!
ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ!