ತೇಜಸ್ವಿ ಯಾದವ್‌ಗೆ ಆಹ್ವಾನವಿಲ್ಲದಕ್ಕೆ ಆಕ್ರೋಶ; ನಿತೀಶ್ ಸೇತುವೆ ಮೇಲಿನ ಮೋದಿ, ನಿತೀಶ್ ಪೋಸ್ಟರ್‌ಗಳನ್ನು ಹರಿದು ಹಾಕಿದ ಆರ್‌ಜೆಡಿ ಕಾರ್ಯಕರ್ತರು

ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರಿಗೆ ಸೇತುವೆ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ ಕಾರಣಕ್ಕೆ ಆಕ್ರೋಶಗೊಂಡ ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಕಾರ್ಯಕರ್ತರು ಪ್ರಧಾನಿ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಫೋಟೋ ಇದ್ದ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ನೂತನವಾಗಿ ನಿರ್ಮಿಸಲಾಗಿರುವ ‘ನಿತೀಶ್ ಸೇತು’ ಉದ್ಘಾಟನಾ ಕಾರ್ಯಕ್ರಮಕ್ಕೆ ಸರ್ಕಾರವು ಸ್ಥಳೀಯ ಜನಪ್ರತಿನಿಧಿಯೂ ಆಗಿರುವ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕರಾಗಿರುವ ತೇಜಸ್ವಿ ಯಾದವ್ ಅವರನ್ನು ಆಹ್ವಾನಿಸಿರಲಿಲ್ಲ. ಅಲ್ಲದೆ, ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಪ್ರಚಾರ ಫಲಕಗಳಲ್ಲಿ ಅವರ ಹೆಸರನ್ನು ಕೈಬಿಡಲಾಗಿತ್ತು ಎನ್ನಲಾಗಿದೆ.

ತೇಜಸ್ವಿ ಯಾದವ್‌ಗೆ ಆಹ್ವಾನವಿಲ್ಲದಕ್ಕೆ ಆಕ್ರೋಶ; ನಿತೀಶ್ ಸೇತುವೆ ಮೇಲಿನ ಮೋದಿ, ನಿತೀಶ್ ಪೋಸ್ಟರ್‌ಗಳನ್ನು ಹರಿದು ಹಾಕಿದ ಆರ್‌ಜೆಡಿ ಕಾರ್ಯಕರ್ತರು
ಮೋದಿ, ನಿತೀಶ್ ಪೋಸ್ಟರ್‌ಗಳನ್ನು ಹರಿದು ಹಾಕಿದ ಆರ್‌ಜೆಡಿ ಕಾರ್ಯಕರ್ತರು

Updated on: Nov 22, 2026 | 3:52 PM

ನವದೆಹಲಿ, ನವೆಂಬರ್ 22: 6 ಪಥದ ಸೇತುವೆ ಉದ್ಘಾಟನೆಯಾದ ಕೆಲವೇ ಗಂಟೆಗಳ ನಂತರ, ಬಿಹಾರದ ‘ನಿತೀಶ್ ಸೇತು’ ಬಳಿ ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಘಟನೆಯ ವಿಡಿಯೋಗಳಲ್ಲಿ, ಬೆಂಬಲಿಗರು ಆರ್‌ಜೆಡಿ ಧ್ವಜಗಳನ್ನು ಹಿಡಿದುಕೊಂಡು ಎನ್‌ಡಿಎ ಬ್ಯಾನರ್‌ಗಳನ್ನು ಕೆಳಗಿಳಿಸುತ್ತಿರುವುದು ಹಾಗೂ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಪರ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ. ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಬೈಕ್​ಗಳಲ್ಲಿ ಆಗಮಿಸಿದ್ದು, ಜನಸಮೂಹದ ಜೊತೆಗೆ ಪೊಲೀಸ್ ಸಿಬ್ಬಂದಿಯೂ ಕಾಣಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್​​ಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿ ನೀಡದ ಕುರಿತು ಆರ್​ಜೆಡಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ನಾಯಕನಿಗೆ ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡದೆ ಅಗೌರವ ತೋರಲಾಗಿದೆ ಎಂದು ಆರೋಪಿಸಿದ ಆರ್‌ಜೆಡಿ ಕಾರ್ಯಕರ್ತರು, ಸೇತುವೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಉದ್ಘಾಟನಾ ಸಮಾರಂಭದ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಬಿಹಾರ ಸರ್ಕಾರ ಮತ್ತು ನಿತೀಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

Loading...

ಇದನ್ನೂ ಓದಿ: ಯುಸಿಸಿ ಜಾರಿ ಗದ್ದಲದ ಬೆನ್ನಲ್ಲೇ ಬಿಹಾರದಲ್ಲಿ ಸಂಚಲನ: ಜೆಡಿಯು ಸಂಸದರು, ಶಾಸಕರ ಮಹತ್ವದ ಸಭೆ ಕರೆದ ನಿತೀಶ್ ಕುಮಾರ್

ಆರ್‌ಜೆಡಿ ಪಕ್ಷವು ಅಭಿವೃದ್ಧಿಗಿಂತ ರಾಜಕೀಯ ನಾಟಕಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ನೀರಜ್ ಕುಮಾರ್ ಶರ್ಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದರೆ, ಆರ್‌ಜೆಡಿ ಅಡ್ಡಿಪಡಿಸುವುದು ಮತ್ತು ಗದ್ದಲ ಸೃಷ್ಟಿಸುವ ಕೆಲಸದಲ್ಲಿ ತೊಡಗಿದೆ” ಎಂದು ಶರ್ಮಾ ಹೇಳಿದ್ದಾರೆ.


ತೇಜಸ್ವಿ ಯಾದವ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, “ಬಿಹಾರದ ಜನರಿಗೆ ಸೇತುವೆಗಳು ಮತ್ತು ಪ್ರಗತಿ ಬೇಕೇ ಹೊರತು, ಪೋಸ್ಟರ್‌ಗಳನ್ನು ಹರಿದು ಹಾಕುವ ಸುತ್ತ ಹೆಣೆಯಲಾದ ರಾಜಕೀಯವಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ನಿವಾಸದ ಹೊರಗೆ ಭಾರಿ ಗುಂಡಿನ ದಾಳಿ: ಇಬ್ಬರು ಯುವಕರಿಗೆ ಗಂಭೀರ ಗಾಯ

ನಿತೀಶ್ ಸೇತು ಹೆಸರಿನ ಕುರಿತ ವಿವಾದ:

ಈ ಸೇತುವೆಗೆ ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್  ಅವರ ಹೆಸರಿಡುವ ಬದಲು, ಸೇತುವೆಗೆ ನಿತೀಶ್ ಕುಮಾರ್ ಅವರ ಹೆಸರಿಟ್ಟ ನಿರ್ಧಾರವನ್ನು ತೇಜಸ್ವಿ ಯಾದವ್ ಪ್ರಶ್ನಿಸಿದ್ದರು. ಗುರುಗಳ ಹೆಸರನ್ನು ಪ್ರಸ್ತಾಪಿಸಿ ತಾವು ಈ ಹಿಂದೆ ಬಿಹಾರ ವಿಧಾನಸಭೆಯಲ್ಲಿ ಖಾಸಗಿ ಸದಸ್ಯರ ನಿರ್ಣಯವನ್ನು ಮಂಡಿಸಿದ್ದಾಗಿ ಆರ್‌ಜೆಡಿ ನಾಯಕ ಹೇಳಿಕೊಂಡಿದ್ದರು. ಸುಮಾರು 18 ತಿಂಗಳ ಹಿಂದೆಯೇ ನಿತೀಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದರು ಎಂದೂ ಆರೋಪಿಸಿರುವ ಅವರು, ರಾಜಕೀಯ ಕಾರಣಗಳಿಗಾಗಿ ಎನ್‌ಡಿಎ ಮತ್ತೊಂದು ಸಮಾರಂಭವನ್ನು ಆಯೋಜಿಸುತ್ತಿದೆ ಎಂದು ದೂರಿದ್ದಾರೆ.

ಸುಮಾರು 4,280 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ 9.76 ಕಿಲೋಮೀಟರ್ ಉದ್ದದ ಈ ‘ನಿತೀಶ್ ಸೇತು’, ಪಾಟ್ನಾದ ಕಚ್ಚಿ ದರ್ಗಾವನ್ನು ವೈಶಾಲಿಯ ಬಿದುಪುರದೊಂದಿಗೆ ಸಂಪರ್ಕಿಸುತ್ತದೆ. ಈ 6 ಪಥದ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದ್ದು, ಮಹಾತ್ಮ ಗಾಂಧಿ ಸೇತುವೆಯ ಮೇಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us