AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್​ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಇಂದು ರಾತ್ರಿ ಮೋಹನ್ ಭಾಗವತ್ ಭಾಷಣ

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ನ್ಯೂಯಾರ್ಕ್ ಪ್ರವಾಸದಲ್ಲಿದ್ದಾರೆ. ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸುವ 'ಯುನಿವರ್ಸಲ್ ಒನ್ನೆಸ್' (ವಿಶ್ವ ಏಕತೆ) ಬೃಹತ್ ಸಮಾವೇಶದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ರಾತ್ರಿ 11.30ಕ್ಕೆ (ಭಾರತೀಯ ಕಾಲಮಾನ) ಭಾಷಣ ಮಾಡಲಿದ್ದಾರೆ. ಅಮೆರಿಕದ 39 ರಾಜ್ಯಗಳಿಂದ ಆಗಮಿಸುವ 5 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ನಿವಾಸಿಗಳು ಮತ್ತು ಅಂತಾಷ್ಟ್ರೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ನ್ಯೂಯಾರ್ಕ್​ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಇಂದು ರಾತ್ರಿ ಮೋಹನ್ ಭಾಗವತ್ ಭಾಷಣ
Mohan Bhagwat In New YorkImage Credit source: PTI
ಸುಷ್ಮಾ ಚಕ್ರೆ
|

Updated on: Aug 29, 2026 | 5:25 PM

Share

ನ್ಯೂಯಾರ್ಕ್, ಆಗಸ್ಟ್ 29: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಇಂದು (ಶನಿವಾರ) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ‘ಯುನಿವರ್ಸಲ್ ಒನ್ನೆಸ್’ (ವಿಶ್ವ ಏಕತೆ) ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕದ 39 ರಾಜ್ಯಗಳ 85 ನಗರಗಳಿಂದ 5,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದ ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಗೆ (ಭಾರತೀಯ ಸಮಯ ರಾತ್ರಿ 11.30) ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಸಂಸ್ಥೆಗಳು ಸಹಭಾಗಿಗಳಾಗಿವೆ ಎಂದು ಕಾರ್ಯಕ್ರಮದ ವಕ್ತಾರೆ ಪ್ರಿಯಾ ಸಮಂತ್ ತಿಳಿಸಿದ್ದಾರೆ.

“ಈ ಕಾರ್ಯಕ್ರಮವು ಭಾರತೀಯ ತತ್ತ್ವಶಾಸ್ತ್ರವಾದ ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಪರಿಕಲ್ಪನೆಯ ಆಚರಣೆಯಾಗಿದೆ. ವಿಭಿನ್ನತೆಗಳ ನಡುವೆಯೂ ನಾವೆಲ್ಲರೂ ಶಾಂತಿ ಮತ್ತು ಸಾಮರಸ್ಯದಿಂದ ಬಾಳಬಹುದು ಎಂಬುದನ್ನು ಇದು ಎತ್ತಿಹಿಡಿಯುತ್ತದೆ” ಎಂದು ಪ್ರಿಯಾ ಸಮಂತ್ ಹೇಳಿದ್ದಾರೆ.

ಇದನ್ನೂ ಓದಿ: ಮೋಹನ್ ಭಾಗವತ್​ರ ನ್ಯೂಯಾರ್ಕ್ ಸಮಾವೇಶಕ್ಕೆ ಬೆಂಬಲವಿಲ್ಲ: ಮೇಯರ್ ಜೋಹ್ರಾನ್ ಮಮ್ದಾನಿ

ಅಮೆರಿಕ, ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಪ್ರವಾಸದಲ್ಲಿರುವ ಮೋಹನ್ ಭಾಗವತ್ ಅವರು ಮಂಗಳವಾರ ನ್ಯೂಯಾರ್ಕ್ ತಲುಪಿದ್ದರು. ಆರೆಸ್ಸೆಸ್‌ನ ಶತಾಬ್ದಿ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 1925ರಲ್ಲಿ ನಾಗ್ಪುರದಲ್ಲಿ ಆರಂಭವಾದ ಆರ್‌ಎಸ್‌ಎಸ್, ತನ್ನ ಶತಾಬ್ದಿ ವರ್ಷವನ್ನು (100 ವರ್ಷ) ಆಚರಿಸಿಕೊಳ್ಳುತ್ತಿದೆ. ಮೋಹನ್ ಭಾಗವತ್ ಅವರು 2009ರಿಂದ ಸಂಘದ ಸರಸಂಘಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಸ್ಕಾನ್ ದೇವಾಲಯಕ್ಕೆ ಭೇಟಿ:

ಶುಕ್ರವಾರ ನ್ಯೂಯಾರ್ಕ್‌ನ ಇಸ್ಕಾನ್ (ISKCON) ದೇವಾಲಯಕ್ಕೆ ಭೇಟಿ ನೀಡಿದ್ದ ಮೋಹನ್ ಭಾಗವತ್, ನಿರಾಶ್ರಿತರಿಗೆ ಅನ್ನದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಇಡೀ ಜಗತ್ತು ಕೃಷ್ಣನಿಂದ ತುಂಬಿದೆ, ಮತ್ತು ನಾವು ಅವನ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ನಾವೆಲ್ಲರೂ ಒಂದೇ, ಮತ್ತು ಈ ಪ್ರಪಂಚದ ವಿರೋಧಾಭಾಸಗಳ ನಡುವೆಯೂ, ಇಷ್ಟೊಂದು ವೈವಿಧ್ಯತೆ, ಸಂಘರ್ಷ ಮತ್ತು ವಿರೋಧಾಭಾಸಗಳ ಹೊರತಾಗಿಯೂ, ಅಂತಿಮವಾಗಿ ಎಲ್ಲವೂ ಕೃಷ್ಣನೇ ಎಂಬ ಆಳವಾದ ತಿಳುವಳಿಕೆ ನಮಗಿದೆ. ಇದು ಭಗವದ್ಗೀತೆಯ ಕೇಂದ್ರ ಬೋಧನೆಯಾಗಿದೆ. ಜೀವನದಿಂದ ಓಡಿಹೋಗಬೇಡಿ; ದೃಢವಾಗಿ ನಿಂತುಕೊಳ್ಳಿ, ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಮತ್ತು ಎಲ್ಲವೂ ದೈವಿಕ ಎಂದು ಅರ್ಥಮಾಡಿಕೊಳ್ಳಿ. ಈ ಸಂದೇಶವು ಪ್ರತಿಯೊಬ್ಬ ಹೃದಯವನ್ನು ತಲುಪಿದರೆ, ನಮ್ಮ ಜಗತ್ತು ನಿಜವಾಗಿಯೂ ಉತ್ತಮ ಸ್ಥಳವಾಗುತ್ತದೆ. ಇದು ಇಂದಿನ ಭೌತಿಕ ಮಿತಿಗಳಿಂದ ಸೀಮಿತವಾಗಿರುವುದಿಲ್ಲ, ಆದರೆ ಎಲ್ಲಾ ಮನುಷ್ಯರಿಗೆ ಸ್ವರ್ಗದಂತಹ ಸ್ಥಳವಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ನ್ಯೂಯಾರ್ಕ್​ನಲ್ಲಿ ಆಗಸ್ಟ್ 29ರಂದು ಏಕತಾ ಆಚರಣೆಯಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

ಇಂದು ಮೋಹನ್ ಭಾಗವತ್ ಭಾಷಣದ ಬಳಿಕ ಭಾರತೀಯ-ಅಮೆರಿಕನ್ ಯುವಕರಿಂದ ‘ಎ ಕ್ಯಾಪೆಲ್ಲಾ’ ಸಂಗೀತ ಪ್ರದರ್ಶನ ಮತ್ತು ವೈದಿಕ ಮಂತ್ರೋಚ್ಚಾರಣೆಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ನೋಂದಣಿಗಳು ಹರಿದುಬಂದಿದ್ದರಿಂದ ಸಾರ್ವಜನಿಕ ಪ್ರವೇಶ ನೋಂದಣಿಯನ್ನು ಮುಕ್ತಾಯಗೊಳಿಸಲಾಗಿದ್ದು, ನೇರ ಪ್ರಸಾರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!