AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಭೂಮಿ-ರಿಯಾಯಿತಿ ಪಡೆದು ದಂಧೆ ಮಾಡುವಂತಿಲ್ಲ: ಖಾಸಗಿ ವಿವಿಗಳ ಹಣಕಾಸು ತನಿಖೆಗೆ ರಾಜ್ಯಗಳ ಸಿಎಸ್‌ಗಳಿಗೆ ಸುಪ್ರೀಂ ಡೆಡ್‌ಲೈನ್

ಖಾಸಗಿ ವಿಶ್ವವಿದ್ಯಾಲಯಗಳು ಲಾಭಕೋರ ಉದ್ದೇಶದಿಂದ ಕಾರ್ಯನಿರ್ವಹಿಸಬಾರದೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಎಚ್ಚರಿಸಿದೆ. ಕಳೆದ 5 ವರ್ಷಗಳ ಆಡಿಟ್ ವರದಿ, ಶುಲ್ಕ ವಿವರ, ಹೆಚ್ಚುವರಿ ಹಣದ ಹೂಡಿಕೆ ಹಾಗೂ ಶೈಕ್ಷಣಿಕೇತರ ಪಾವತಿಗಳ ಸಂಪೂರ್ಣ ಮಾಹಿತಿ ಸಲ್ಲಿಸಲು ನ್ಯಾಯಪೀಠ ಆದೇಶಿಸಿದೆ. ಶಿಕ್ಷಣವು ಸಾರ್ವಜನಿಕ ಸೇವೆ, ವಾಣಿಜ್ಯವಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ರಾಜ್ಯ ಸರ್ಕಾರಗಳಿಗೆ 6 ವಾರಗಳ ಗಡುವು ನೀಡಿದೆ.

ಸರ್ಕಾರದಿಂದ ಭೂಮಿ-ರಿಯಾಯಿತಿ ಪಡೆದು ದಂಧೆ ಮಾಡುವಂತಿಲ್ಲ: ಖಾಸಗಿ ವಿವಿಗಳ ಹಣಕಾಸು ತನಿಖೆಗೆ ರಾಜ್ಯಗಳ ಸಿಎಸ್‌ಗಳಿಗೆ ಸುಪ್ರೀಂ ಡೆಡ್‌ಲೈನ್
ಸುಪ್ರೀಂಕೋರ್ಟ್​ Image Credit source: PTI
ನಯನಾ ರಾಜೀವ್
|

Updated on: Sep 22, 2026 | 11:40 AM

Share

ನವದೆಹಲಿ, ಸೆಪ್ಟೆಂಬರ್ 22: ಖಾಸಗಿ ವಿಶ್ವವಿದ್ಯಾಲಯಗಳು ಲಾಭ ಗಳಿಸುವ ವ್ಯಾಪಾರಿ ಸಂಸ್ಥೆಗಳಾಗಿ ಕೆಲಸ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಎಚ್ಚರಿಸಿದೆ. ದೇಶಾದ್ಯಂತ ಇರುವ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ತಮ್ಮ ಕಳೆದ 5 ವರ್ಷಗಳ ಸಂಪೂರ್ಣ ಆಡಿಟ್ ಲೆಕ್ಕಪತ್ರಗಳು, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ವಿವರ, ಹೆಚ್ಚುವರಿ ಹಣದ ಹೂಡಿಕೆ ಹಾಗೂ ಶೈಕ್ಷಣಿಕ ಕೆಲಸದಲ್ಲಿ ಭಾಗಿಯಾಗದ ವ್ಯಕ್ತಿಗಳಿಗೆ ನೀಡಲಾದ ಪಾವತಿಗಳ ಸಂಪೂರ್ಣ ಮಾಹಿತಿಯನ್ನು ಆರು ವಾರಗಳೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಕ್ಕೆ ನ್ಯಾಯಪೀಠ ಖಡಕ್ ಆದೇಶ ನೀಡಿದೆ.

ಲಾಭದ ಉದ್ದೇಶ ಸಲ್ಲದು: ಶಿಕ್ಷಣವು ಸಾರ್ವಜನಿಕ ಹಿತಾಸಕ್ತಿಯ ಸೇವೆಯಾಗಿದೆ. ಸಂಸ್ಥೆಯು ಸುಗಮವಾಗಿ ನಡೆಯಲು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸೂಕ್ತ ವೇತನ ನೀಡಲು ಆರ್ಥಿಕ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೇ ಹೊರತು ಅದನ್ನು ಲಾಭಕೋರ ಉದ್ಯಮವನ್ನಾಗಿ ಮಾಡಬಾರದು ಎಂದು ಪೀಠ ಹೇಳಿದೆ.

ಮಂಡಳಿ ಸದಸ್ಯರಿಗೆ ಹಣ ಡೈವರ್ಟ್ ಮಾಡುವಂತಿಲ್ಲ: ಆಡಳಿತ ಮಂಡಳಿಯ ನಿರ್ದೇಶಕರಿಗೆ ಅತಿಯಾದ ವೇತನ ನೀಡುವುದು, ಟ್ರಸ್ಟಿಗಳಿಗೆ ಐಷಾರಾಮಿ ಸೌಲಭ್ಯ ಒದಗಿಸುವುದು ಅಥವಾ ಶೈಕ್ಷಣಿಕ ಕಾರ್ಯಗಳಲ್ಲಿ ನೇರವಾಗಿ ಭಾಗಿಯಾಗದ ವ್ಯಕ್ತಿಗಳಿಗೆ ಯಾವುದೇ ಹೆಸರಿನಲ್ಲಿ ಸಂಸ್ಥೆಯ ಹಣವನ್ನು ವರ್ಗಾಯಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸರ್ಕಾರಿ ಸವಲತ್ತುಗಳ ಲೆಕ್ಕ ಕೊಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕಡಿಮೆ ದರದಲ್ಲಿ ಪಡೆದ ಭೂ ಹಂಚಿಕೆ, ಕಾನೂನು ವಿನಾಯಿತಿಗಳು ಹಾಗೂ ತೆರಿಗೆ ಸಡಿಲಿಕೆಗಳಂತಹ ವಿಶೇಷ ಸವಲತ್ತುಗಳ ಸಂಪೂರ್ಣ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ನ್ಯಾಯಾಲಯಕ್ಕೆ ಸಲ್ಲಿಸಬೇಕು.

ಮತ್ತಷ್ಟು ಓದಿ: ಸಂಘರ್ಷಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಚುನಾವಣೆ: ABVP ಗೆಲುವು; ಸಿಎಂಗೆ ದೂರು ನೀಡಲು ಮುಂದಾದ NSUI

ಶುಲ್ಕ ಮತ್ತು ಪ್ರವೇಶ ಪರೀಕ್ಷೆಗಳ ವಿವರ: ಪ್ರವೇಶದ ಸಮಯದಲ್ಲಿ ಮತ್ತು ಕೋರ್ಸ್ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಅಭಿವೃದ್ಧಿ ನಿಧಿ, ವಿಶೇಷ ಶುಲ್ಕಗಳ ಹೆಸರಿನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿದ ಹಣ, ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ನಡೆಸುವುದು ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ಹಸ್ತಕ್ಷೇಪದ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ

ತರಗತಿಗಳು ಮತ್ತು ಸಿಬ್ಬಂದಿ ಆಡಿಟ್: ಜನವರಿ 2025ರಿಂದ ಬೋಧಕ ಸಿಬ್ಬಂದಿಗೆ ಹಂಚಿಕೆಯಾದ ತರಗತಿಗಳು ಎಷ್ಟು, ಅವರು ವಾಸ್ತವವಾಗಿ ತೆಗೆದುಕೊಂಡ ತರಗತಿಗಳು ಎಷ್ಟು, ಶಿಕ್ಷಕರು ಲಭ್ಯವಿಲ್ಲದಿದ್ದಾಗ ವಿದ್ಯಾರ್ಥಿಗಳಿಗೆ ಯಾವ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು ಎಂಬ ವಿವರಗಳನ್ನು ಹಾಜರುಪಡಿಸಬೇಕು

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ 6 ವಾರಗಳ ಗಡುವು: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಂದ ಈ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಆರು ವಾರಗಳೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 19 ಕ್ಕೆ ನಿಗದಿಪಡಿಸಿದೆ.

ಪ್ರಕರಣದ ಮೂಲ: ನೋಯ್ಡಾ ಮೂಲದ ಅಮಿಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರಿಗೆ ದಾಖಲೆಗಳಲ್ಲಿ ಹೆಸರು ತಿದ್ದುಪಡಿ ಮಾಡಲು ಕಿರುಕುಳ ನೀಡಿದ ದೂರಿನ ವಿಚಾರಣೆ ವೇಳೆ ಈ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸುಪ್ರೀಂ ಕೋರ್ಟ್ ಇದನ್ನು ದೇಶದ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳ ಹಣಕಾಸು ಹಾಗೂ ಆಡಳಿತ ನಿಯಂತ್ರಣದ ತನಿಖೆಯಾಗಿ ವಿಸ್ತರಿಸಿತು.

ಶಿಕ್ಷಣ ವಾಣಿಜ್ಯೀಕರಣಕ್ಕೆ ಬ್ರೇಕ್: ಭಾರತದಲ್ಲಿ ಖಾಸಗಿ ವಿವಿಗಳು ‘ಲಾಭರಹಿತ ಸಂಸ್ಥೆಗಳು’ ಎಂಬ ಹೆಸರಿನಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೂರಾರು ಎಕರೆ ಜಮೀನು ಮತ್ತು ತೆರಿಗೆ ವಿನಾಯಿತಿಗಳನ್ನು ಪಡೆಯುತ್ತವೆ. ಆದರೆ ವಾಸ್ತವದಲ್ಲಿ ಡೊನೇಶನ್ ಮತ್ತು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿವೆ ಎಂಬ ದೂರುಗಳಿಗೆ ಈ ತೀರ್ಪು ದೊಡ್ಡ ಕಡಿವಾಣ ಹಾಕಲಿದೆ.

ವೃತ್ತಿಪರ ನಿಯಂತ್ರಣ ಮಂಡಳಿಗಳಿಗೂ ನೋಟಿಸ್: ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ದಂತ ಮಂಡಳಿ (DCI), ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮತ್ತು ನರ್ಸಿಂಗ್ ಕೌನ್ಸಿಲ್ ಸೇರಿದಂತೆ ಎಲ್ಲಾ ನಿಯಂತ್ರಣ ಮಂಡಳಿಗಳು ಖಾಸಗಿ ಕಾಲೇಜುಗಳಲ್ಲಿ ನಡೆಸಿದ ತಪಾಸಣೆಗಳು, ಅಲ್ಲಿ ಪತ್ತೆಯಾದ ಲೋಪದೋಷಗಳು ಮತ್ತು ಅವುಗಳನ್ನು ಸರಿಪಡಿಸಲಾಗಿದೆಯೇ ಎಂಬ ವರದಿಯನ್ನು ಕೋರ್ಟ್‌ಗೆ ನೀಡುವಂತೆ ಆದೇಶಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹೆಸ್ಕಾಂ ಎಇಇ ಕಿರಣ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!
ಹೆಸ್ಕಾಂ ಎಇಇ ಕಿರಣ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!
ಮತ್ತೆ ನಾಲಿಗೆ ಹರಿಬಿಟ್ಟ ಲಿಖಿತ್; ಈ ವಿಷಯಕ್ಕೆ ಸುದೀಪ್ ಕ್ಲಾಸ್ ಫಿಕ್ಸ್?
ಮತ್ತೆ ನಾಲಿಗೆ ಹರಿಬಿಟ್ಟ ಲಿಖಿತ್; ಈ ವಿಷಯಕ್ಕೆ ಸುದೀಪ್ ಕ್ಲಾಸ್ ಫಿಕ್ಸ್?
ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವಿಶೇಷ ದಿನ
ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವಿಶೇಷ ದಿನ
ಕೆಪಿಎಸ್​ಸಿ ನೇಮಕಾತಿ ಹಗರಣ: ಸಿಐಡಿ ತನಿಖೇಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು
ಕೆಪಿಎಸ್​ಸಿ ನೇಮಕಾತಿ ಹಗರಣ: ಸಿಐಡಿ ತನಿಖೇಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು
ಕೆಪಿಎಸ್​​ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೆಪಿಎಸ್​​ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್