AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News ಕೊವಿಡ್​​​ 19 ವೈರಸ್​​ ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ಹೊಸ ಕಾರ್ಯವಿಧಾನವು ಜೀವಕೋಶಗಳಿಗೆ ವೈರಸ್ ಪ್ರವೇಶವನ್ನು ನಿರ್ಬಂಧಿಸುತ್ತದೆ ಮತ್ತು ಸೋಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬುಧವಾರ ಹೇಳಿದೆ.

Big News ಕೊವಿಡ್​​​ 19 ವೈರಸ್​​ ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು
ಸಾಂಧರ್ಬಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 13, 2022 | 8:57 PM

Share

ದೆಹಲಿ: ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಸಿಎಸ್ಐಆರ್ (CSIR)-ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿಯ ಸಂಶೋಧಕರ ಸಹಯೋಗದೊಂದಿಗೆ ಕೊವಿಡ್ (SARS-CoV-2) ವೈರಸ್ ಅನ್ನು ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಜೀವಕೋಶಗಳಿಗೆ ವೈರಸ್  ಪ್ರವೇಶವನ್ನು ನಿರ್ಬಂಧಿಸುತ್ತದೆ ಮತ್ತು ಸೋಂಕಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬುಧವಾರ ಹೇಳಿದೆ. ಸಂಶೋಧಕರು ಹೊಸ ವರ್ಗದ ಸಿಂಥೆಟಿಕ್ ಪೆಪ್ಟೈಡ್‌ಗಳ ವಿನ್ಯಾಸವನ್ನು ಮಾಡಿದ್ದು ಇದು ಕೊವಿಡ್ ವೈರಸ್‌ನ ಜೀವಕೋಶಗಳ ಪ್ರವೇಶವನ್ನು ನಿರ್ಬಂಧಿಸುವುದು ಮಾತ್ರವಲ್ಲದೆ ವೈರಿಯಾನ್‌ಗಳನ್ನು (ವೈರಸ್ ಕಣಗಳು) ಒಟ್ಟಿಗೆ ಜೋಡಿಸಿ, ಅವುಗಳ ಸೋಂಕಿಗೆ ಒಳಗಾಗುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ನೂತನ ವಿಧಾನವು SARS-CoV-2 ನಂತಹ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಲು ಪರ್ಯಾಯ ಕಾರ್ಯವಿಧಾನವನ್ನು ಒದಗಿಸುತ್ತದೆ. SARS-CoV-2 ವೈರಸ್‌ನ ಹೊಸ ತಳಿಗಳ ತ್ವರಿತ ಹೊರಹೊಮ್ಮುವಿಕೆಯು ವೈರಸ್‌ನಿಂದ ಸೋಂಕನ್ನು ತಡೆಗಟ್ಟಲು ಬಳಸುವ ಕೊವಿಡ್ ಲಸಿಕೆಯ ಹೊರತಾಗಿ ಹೊಸ ವಿಧಾನಗಳಿಗೆ ಮೊರೆ ಹೋಗುವಂತೆ ಮಾಡಿದೆ.

ಪ್ರೊಟೀನ್- ಪ್ರೊಟೀನ್ ಪರಸ್ಪರ ಕ್ರಿಯೆಯ ಲಾಕ್ ಮತ್ತು ಕೀಯಂತೆ ವರ್ತಿಸುತ್ತದೆ. ಈ ಪರಸ್ಪರ ಕ್ರಿಯೆಗೆ ಸಿಂಥೆಟಿಕ್ ಪೆಪ್ಟೈಡ್ ಅಡಚಣೆಯುಂಟು ಮಾಡುತ್ತದೆ. ಇವು ಕೀ ಮತ್ತು ಲಾಕ್ ಬಂಧಿಸುವುದನ್ನು ತಡೆಯುತ್ತದೆ. ಸಚಿವಾಲಯದ ಪ್ರಕಾರ ಐಐಎಸ್​​ಸಿ ವಿಜ್ಞಾನಿಗಳು SARS-CoV-2 ವೈರಸ್‌ನ ಮೇಲ್ಮೈಯಲ್ಲಿ ಸ್ಪೈಕ್ ಪ್ರೊಟೀನ್‌ಗೆ ಬಂಧಿಸುವ ಮತ್ತು ನಿರ್ಬಂಧಿಸುವ ಪೆಪ್ಟೈಡ್‌ಗಳನ್ನು ವಿನ್ಯಾಸಗೊಳಿಸಲು ಈ ವಿಧಾನವನ್ನು ಬಳಸಿಕೊಂಡಿದ್ದಾರೆ. ಈ ಬಂಧಿಸುವಿಕೆಯು ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ (cryo-EM) ಮತ್ತು ಇತರ ಜೈವಿಕ ಭೌತಶಾಸ್ತ್ರದ ವಿಧಾನಗಳಿಂದ ನಿರೂಪಿಸಲ್ಪಟ್ಟಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಸ್ಥೆಯಾದ ಎಸ್ಇಆರ್ ಬಿ (SERB) ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿಯ ಕೊವಿಡ್-19 ಐಆರ್​​ಪಿಎಚ್ಎ ಅಡಿಯಲ್ಲಿ ಸಂಶೋಧನೆ ಮಾಡಲಾಗಿದೆ.

ಇದನ್ನೂ ಓದಿ
Image
‘ಆ ಉದ್ಯಮಿಗೆ ಹೆಂಡತಿಯಾಗಿ ಇದ್ದರೆ ಸ್ಯಾಲರಿ ಕೊಡ್ತೀನಿ ಅಂದ್ರು’; ಕೆಲಸ ಇಲ್ಲದೆ ಗೋಳಾಡಿದ ನಟಿ
Image
ದ್ರೌಪದಿ ಮುರ್ಮು ಒಳ್ಳೆಯವರು, ನನ್ನ ಮಾತನ್ನು ಬೇರೇ ರೀತಿಯಲ್ಲಿ ಅರ್ಥೈಸಲಾಗಿದೆ: ಕಾಂಗ್ರೆಸ್ ನಾಯಕ
Image
India Covid Updates: ಭಾರತದಲ್ಲಿ 16,906 ಕೊರೊನಾ ಸೋಂಕಿತರು ಪತ್ತೆ, 45 ಸಾವು

Published On - 8:40 pm, Wed, 13 July 22

Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್