ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಶ್ರೀ ಅರೆಸ್ಟ್
haitanyananda Saraswati arrested: ದಕ್ಷಿಣ ದೆಹಲಿಯ ವಸಂತ್‌ಕುಂಜ್‌ನಲ್ಲಿರೋ ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕನಾಗಿದ್ದ ಶ್ರೀ ಚೈತನ್ಯಾನಂದ ಸರಸ್ವತಿ ಅನ್ನು ಪೊಲೀಸರ ಕೊನೆಗೂ ಆಗ್ರಾದಲ್ಲಿ ಬಂಧಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ತಲೆಮರೆಸಿಕೊಂಡಿದ್ದರು. ಇದೀಗ ಅರೆಸ್ಟ್ ಮಾಡಲಾಗಿದೆ.

ದೆಹಲಿ, ಸೆಪ್ಟೆಂಬರ್ 28: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 50 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯನ್ನು (Chaitanyananda Saraswati) ಪೊಲೀಸರು ಕೊನೆಗೂ ಆಗ್ರಾದಲ್ಲಿ ಬಂಧಿಸಿದ್ದಾರೆ (Arrested). ವಿದ್ಯಾರ್ಥಿಗಳು, ಮಹಿಳೆಯರು ನೀಡಿದ ದೂರನ್ನು ಸ್ವೀಕರಿಸಿದ್ದ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲೂ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು.
ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟು 32 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 16 ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅಶ್ಲೀಲ ವಾಟ್ಸಾಪ್ ಸಂದೇಶ ಕಳಿಸೋದು, ಅನಗತ್ಯ ಲೈಂಗಿಕ ಸಂಪರ್ಕ ನಡಿಸಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿತ್ತು.
ಇದನ್ನೂ ಓದಿ: ತೀಟೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಫಾರಿನ್ ಟ್ರಿಪ್ ಆಫರ್: ದೆಹಲಿ ಚೈತನ್ಯಾನಂದ ಸ್ವಾಮೀಜಿಯ ಕಾಮ ಪುರಣ ಬಟಾಬಯಲು
ಈ ಬಗ್ಗೆ ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 16 ವಿದ್ಯಾರ್ಥಿನಿಯರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಯು ವಿದ್ಯಾರ್ಥಿನಿಯರನ್ನ ವ್ಯವಸ್ಥಿತವಾಗಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದನಂತೆ. ವಿದ್ಯಾರ್ಥಿನಿಯರನ್ನ ತನ್ನ ಕೋಣೆಗೆ ಕರೆಸಿಕೊಳ್ಳುತ್ತಿದ್ದು, ತಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ರೆ, ಅಂಕಗಳನ್ನ ಕಡಿಮೆ ನೀಡ್ತೀನಿ ಅಂತಾ ಬೆದರಿಕೆ ಹಾಕುತ್ತಿದ್ನಂತೆ.
300 ಪುಟಗಳಿಗೂ ಹೆಚ್ಚು ಸಾಕ್ಷ್ಯ ಸಲ್ಲಿಕೆ
ಇನ್ನು ಸ್ವಾಮೀಜಿಯ ಜೊತೆ ಸಂಸ್ಥೆಯ ಡೀನ್ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಯೂ ಭಾಗಿಯಾಗಿ, ಸ್ವಾಮೀಜಿಗೆ ಸಹಕರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಗಸ್ಟ್ 4 ಮತ್ತು 5 ರಂದು, ಶಾರದಾ ಪೀಠ ಪೊಲೀಸರಿಗೆ ದೂರು ಸಲ್ಲಿಸಿದ್ದು, 300 ಪುಟಗಳಿಗೂ ಹೆಚ್ಚು ಸಾಕ್ಷ್ಯಗಳನ್ನು ಸಲ್ಲಿಸಿದೆ. ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿದ ನಂತರ ಹೊಸ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: ಶಾರದಾ ಪೀಠದ ಚೈತನ್ಯಾನಂದ ಸ್ವಾಮಿ ಕೊಟ್ಟ ಕಿರುಕುಳದ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟ ವಿದ್ಯಾರ್ಥಿನಿಯರು
ಶೃಂಗೇರಿಯ ಶಾರದಾ ಪೀಠವು ಸ್ವಾಮೀಜಿಯ ಪವರ್ ಆಫ್ ಅಟಾರ್ನಿ ರದ್ದು ಮಾಡಿ, 11 ಸದಸ್ಯರ ಹೊಸ ಆಡಳಿತ ಮಂಡಳಿ ರಚಿಸಲಾಗಿದೆ. ಇನ್ನು ಆರೋಪಿ ವಿದೇಶಕ್ಕೆ ಪಲಾಯನ ಮಾಡುವುದನ್ನ ತಡೆಯಲು ಲುಕ್ ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:15 am, Sun, 28 September 25








