AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಬಾರಿ ಗುಂಡೇಟು ತಿಂದು ರಕ್ತ ಸುರಿಯುತ್ತಿದ್ದರೂ ಕಾರು ಚಲಾಯಿಸಿಕೊಂಡು 25 ಕಿ.ಮೀ. ದೂರದ ಆಸ್ಪತ್ರೆ ತಲುಪಿದ ವ್ಯಕ್ತಿ!

ಗಾಜಿಯಾಬಾದ್​ನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಡಾಬಾ ಬಳಿ 35 ವರ್ಷದ ವ್ಯಕ್ತಿಗೆ 5 ಬಾರಿ ಗುಂಡು ಹಾರಿಸಲಾಗಿತ್ತು. ಇದರಿಂದ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಆದರೂ ಆ ವ್ಯಕ್ತಿ ರಕ್ತಸ್ರಾವದಲ್ಲೇ 25 ಕಿ.ಮೀ ದೂರ ಕಾರು ಚಲಾಯಿಸಿಕೊಂಡು ಹೋಗಿ ಆಸ್ಪತ್ರೆಗೆ ತಲುಪಿದ್ದಾರೆ. ಅವರ ಮೇಲಾದ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಲಿಗೆ ಪ್ರಕರಣದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ 35 ವರ್ಷದ ವ್ಯಕ್ತಿಯ ಮೇಲೆ ಗುರುವಾರ ಗಾಜಿಯಾಬಾದ್‌ನ ಮೋದಿನಗರದ ರಸ್ತೆಬದಿಯ ತಿನಿಸುಗಳ ಹೊರಗೆ ದಾಳಿಕೋರರು ಐದು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ.

5 ಬಾರಿ ಗುಂಡೇಟು ತಿಂದು ರಕ್ತ ಸುರಿಯುತ್ತಿದ್ದರೂ ಕಾರು ಚಲಾಯಿಸಿಕೊಂಡು 25 ಕಿ.ಮೀ. ದೂರದ ಆಸ್ಪತ್ರೆ ತಲುಪಿದ ವ್ಯಕ್ತಿ!
ShootImage Credit source: iStock
ಸುಷ್ಮಾ ಚಕ್ರೆ
|

Updated on: Apr 04, 2026 | 4:31 PM

Share

ಗಾಜಿಯಾಬಾದ್, ಏಪ್ರಿಲ್ 4: ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ 35 ವರ್ಷದ ವ್ಯಕ್ತಿಯ ಮೇಲೆ ಗುರುವಾರ (ಏಪ್ರಿಲ್ 2) ರಾತ್ರಿ ಗಾಜಿಯಾಬಾದ್‌ನ ಮೋದಿನಗರದಲ್ಲಿರುವ ರಸ್ತೆಬದಿಯ ಡಾಬಾ ಹೊರಗೆ 5 ಬಾರಿ ಗುಂಡು (Shootout) ಹಾರಿಸಲಾಗಿತ್ತು. ಇದರಿಂದ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಅಷ್ಟಾದರೂ ಆ ವ್ಯಕ್ತಿ ತಾವೇ ಕಾರು ಚಲಾಯಿಸಿಕೊಂಡು ಹೋಗಿ 25 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. 35 ವರ್ಷದ ರಾಹುಲ್ ಚೌಧರಿ 25 ಕಿ.ಮೀ.ಗಿಂತ ದೂರದ ಆಸ್ಪತ್ರೆಗೆ ತಲುಪುವಲ್ಲಿ ಯಶಸ್ವಿಯಾದರು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಚೌಧರಿ ರಾತ್ರಿ 9.30ರ ಸುಮಾರಿಗೆ NH-58 ಬಳಿಯ ಸೀಕ್ರಿ ಕಲಾನ್ ಪ್ರದೇಶದ ಸ್ವಾಗತ್ ಡಾಬಾದ ಹೊರಗೆ ನಿಂತಿದ್ದಾಗ ಸ್ಕೂಟರ್​ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಅವರ ಬಳಿ ನಿಂತಿರುವುದನ್ನು ತೋರಿಸುವ 49 ಸೆಕೆಂಡುಗಳ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇ ಸಮಯಕ್ಕೆ ಕಾರಿನಲ್ಲಿ ಬಂದ ಕೆಲವರು ರಾಹುಲ್ ಮೇಲೆ ಗುಂಡು ಹಾರಿಸಿದ್ದಾರೆ. ಅದಾದ ಸುಮಾರು 20 ಸೆಕೆಂಡುಗಳ ನಂತರ ಮೂರನೇ ವ್ಯಕ್ತಿ ಕೂಡ ಎಸ್‌ಯುವಿ ಬಳಿ ಬಂದು ರಾಹುಲ್ ಚೌಧರಿಯ ಮೇಲೆ ಗುಂಡು ಹಾರಿಸಿದ್ದಾನೆ. ಆ ವೇಳೆ ಅಲ್ಲೇ ಹಲವು ಕಾರುಗಳು ಸಂಚರಿಸುತ್ತಿದ್ದರೂ ಯಾರೂ ರಾಹುಲ್ ಸಹಾಯಕ್ಕೆ ಬರಲಿಲ್ಲ. ಒಟ್ಟು 5 ಬಾರಿ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!

ರಾಹುಲ್ ಚೌಧರಿಯ ಕುತ್ತಿಗೆ, ಎದೆ, ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿವೆ. ಆದರೂ ಅವರೇ ಕಾರು ಚಲಾಯಿಸಿಕೊಂಡು ಸಂಜಯ್ ನಗರದ ಖಾಸಗಿ ಆಸ್ಪತ್ರೆಗೆ ಹೋದರು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು. ನಂತರ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆರೋಪಿಗಳನ್ನು ಬಂಧಿಸಲು 5 ತಂಡಗಳನ್ನು ರಚಿಸಲಾಗಿದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us