AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!

ಆವಲಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್ ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ ವಿಚಾರ ಮಾರಾಮಾರಿಗೆ ತಿರುಗಿದೆ. ಪ್ರಪೋಸ್ ಒಪ್ಪದಿದ್ದಕ್ಕೆ ಬ್ಯೂಟಿಷಿಯನ್ ಅನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆಕೆಯ ಪತಿ ಮತ್ತು ಗ್ಯಾಂಗ್ ಸಲೂನ್ ಮೇಲೆ ದಾಳಿ ನಡೆಸಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!
ಆವಲಹಳ್ಳಿ ಸಲೂನ್ ಗಲಾಟೆ ಸಿಸಿಟಿವಿ ಸ್ಕ್ರೀನ್​ಗ್ರ್ಯಾಬ್Image Credit source: tv9
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Apr 04, 2026 | 11:11 AM

Share

ಬೆಂಗಳೂರು, ಏಪ್ರಿಲ್ 4: ಬೆಂಗಳೂರಿನ (Bangalore) ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ಶುರುವಾದ ಸಣ್ಣ ವಿವಾದವೊಂದು ಇದೀಗ ಭೀಕರ ಮಾರಾಮಾರಿಯಲ್ಲಿ ಅಂತ್ಯವಾಗಿದೆ. ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಮಾಲೀಕ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಹಾಗೂ ಅದನ್ನು ವಿರೋಧಿಸಿದ್ದಕ್ಕೆ ಕೆಲಸದಿಂದ ತೆಗೆದಿದ್ದೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗಿದೆ.

ಆಲವಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್, ತನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರಿಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ ಇದನ್ನು ಆಕೆ ನಿರಾಕರಿಸಿದ್ದರು. ಈ ವಿಚಾರವಾಗಿ ಮನಸ್ತಾಪ ಉಂಟಾಗಿ ಮೋಹನ್ ಕುಮಾರ್ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಬ್ಯೂಟಿಷಿಯನ್​​ನ ಪತಿ ಆಕ್ರೋಶಗೊಂಡಿದ್ದರು. ಪತ್ನಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆತ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್‌ಗೆ ನುಗ್ಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯ

ಬ್ಯೂಟಿಷಿಯನ್‌ ಪತಿ ಮತ್ತು ಆತನ ಬೆಂಬಲಿಗರು ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಲಾಗಿದ್ದು, ಬಂದವರೆಲ್ಲರೂ ಸೇರಿ ಸಲೂನ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ಈ ಇಡೀ ದಾಳಿಯ ದೃಶ್ಯಗಳು ಸಲೂನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಸದ್ಯ ಹಲ್ಲೆಗೊಳಗಾದ ಮೋಹನ್ ಕುಮಾರ್ ಅವರು ಬ್ಯೂಟಿಷಿಯನ್‌, ಆಕೆಯ ಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Sat, 4 April 26

Follow Us
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ