AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ್ದೇ ಸ್ವಂತವಾದ, ವಿಶ್ವದರ್ಜೆಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಕಟ್ಟುತ್ತಿರುವ ನಥಿಂಗ್; ಸಿಇಒ ಕಾರ್ಲ್ ಪೇ ಬಿಚ್ಚಿಟ್ಟ ಸಿಎಂಎಫ್ ರಹಸ್ಯ

Nothing ಸಂಸ್ಥೆಯ ಸಹ-ಸ್ಥಾಪಕ ಮತ್ತು ಸಿಇಒ ಕಾರ್ಲ್ ಪೇ (Carl Pei) ಅವರು ಭಾರತೀಯ ಕಂಪನಿಗಳು ಗ್ರಾಹಕ ಎಲೆಕ್ಟ್ರಾನಿಕ್ಸ್ ಜಗತ್ತು ಆಳುವ ಕಾಲ ಬಂದಿದೆ ಎಂದಿದ್ದಾರೆ. ಭಾರತದ ಯಶಸ್ಸಿನ ಓಟದಲ್ಲಿ ಜೊತೆಯಾಗಲು ಹೊರಟಿರುವ ಅವರು, ನಥಿಂಗ್​ನಿಂದ ಭಾರತಕ್ಕೆ ಸಿಎಂಎಫ್ ಅನ್ನು ಇತ್ತಿದ್ದಾರೆ. ಸಿಎಂಎಫ್ ಸಂಪೂರ್ಣ ಭಾರತದ್ದೇ ಆದ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾಗಲಿದೆ. ಕಾರ್ಲ್ ಪೇ ಅವರು ತಮ್ಮ ಎಕ್ಸ್ ಬ್ಲಾಗ್​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದ್ದೇ ಸ್ವಂತವಾದ, ವಿಶ್ವದರ್ಜೆಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಕಟ್ಟುತ್ತಿರುವ ನಥಿಂಗ್; ಸಿಇಒ ಕಾರ್ಲ್ ಪೇ ಬಿಚ್ಚಿಟ್ಟ ಸಿಎಂಎಫ್ ರಹಸ್ಯ
ನಥಿಂಗ್​ನಿಂದ ಸಿಎಂಎಫ್Image Credit source: x @getpeid (Carl Pei)
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 21, 2026 | 9:11 PM

Share

ನವದೆಹಲಿ, ಸೆಪ್ಟೆಂಬರ್ 21: ಜಾಗತಿಕ ಮಟ್ಟದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸುವ ಭಾರತೀಯ ಕಂಪನಿಗಳು ನಿರ್ಮಾಣವಾಗುವ ಕಾಲ ಬಂದಿದೆ ಎಂದು ನಥಿಂಗ್ ಸ್ಮಾರ್ಟ್​ಫೋನ್ ಸಂಸ್ಥೆಯ ಸಿಇಒ ಕಾರ್ಲ್ ಪೇ ಹೇಳಿದ್ದಾರೆ. ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚಾಂಪಿಯನ್ ಕಂಪನಿಗಳನ್ನು ಜಪಾನ್, ಕೊರಿಯಾ ಮತ್ತು ಚೀನಾ ಕೊಟ್ಟಿವೆ. ಈಗ ಭಾರತದ ಸರದಿಯಾಗಿದೆ. ಅದು ಅನಿವಾರ್ಯವೇ ಆಗಿದೆ. ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಉತ್ಪಾದನಾ ದೇಶವಾಗಿರುವ ಭಾರತಕ್ಕೆ, ತನ್ನದೇ ಆದ ಜಾಗತಿಕ ಮಟ್ಟದ ಸ್ವಂತ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಕಟ್ಟುವ ಸಾಮರ್ಥ್ಯವಿದೆ ಎಂದು ಅವರು ಹೇಳಿದ್ದಾರೆ. ಎಕ್ಸ್​ನಲ್ಲಿ ಸುದೀರ್ಘವಾದ ಬ್ಲಾಗ್ ಪೋಸ್ಟ್ ಹಾಕಿರುವ ನಥಿಂಗ್ ಸಹ-ಸಂಸ್ಥಾಪಕರು, ಭಾರತದ ಗೆಲುವಿನ ಓಟದಲ್ಲಿ ಭಾಗಿಯಾಗಲು ಹೆಜ್ಜೆಗಳನ್ನಿಟ್ಟಿರುವುದಾಗಿ ವಿವರಿಸಿದ್ದಾರೆ. ಬಹಳ ಸುದೀರ್ಘವಾಗಿರುವ ಈ ಪೋಸ್ಟ್​ನಲ್ಲಿ ಅವರು, ಭಾರತದ್ದೇ ಸ್ವಂತವಾದ ಮತ್ತು ಜಾಗತಿಕವಾಗಿ ಶ್ರೇಷ್ಠವಾದ ಎಲೆಕ್ಟ್ರಾನಿಕ್ಸ್ ಕಂಪನಿ ಕಟ್ಟಲು ಹೊರಟಿರುವ ವಿಚಾರವನ್ನು ವಿವರಿಸಿದ್ದಾರೆ. ಅದೇ ಸಿಎಂಎಫ್ ಬ್ರ್ಯಾಂಡ್.

ಲಂಡನ್ ಮೂಲದ ನಥಿಂಗ್ ಸಂಸ್ಥೆಯಿಂದ CMF ಬ್ರ್ಯಾಂಡ್ ಅನ್ನು ಪ್ರತ್ಯೇಕಿಸಿ, ಭಾರತೀಯ ಮಾಲೀಕತ್ವದ ಸ್ವತಂತ್ರ ಕಂಪನಿಯನ್ನಾಗಿ ಮಾಡಲಾಗುತ್ತಿದೆ ಎಂದು ಕಾರ್ಲ್ ಪೇ ಘೋಷಿಸಿದ್ದಾರೆ. ಜಾಗತಿಕ ಶ್ರೇಷ್ಠತೆ ಸಾಧಿಸಬೇಕಾದರೆ ಆರ್ ಅಂಡ್ ಡಿ ಎಷ್ಟು ಮುಖ್ಯ ಎಂಬುದನ್ನು ಅವರು ದಶಕದ ಹಿಂದಿನ ಭಾರತೀಯ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳ ನಿದರ್ಶನದ ಮೂಲಕ ವಿವರಿಸಿದ್ದಾರೆ. ಮೈಕ್ರೋಮ್ಯಾಕ್ಸ್ ಇತ್ಯಾದಿ ಭಾರತೀಯ ಬ್ರ್ಯಾಂಡ್​ಗಳು ಫೇಲ್ ಆಗಲು ಆರ್ ಅಂಡ್ ಡಿ ಇಲ್ಲದಿರುವುದು ಕಾರಣವೆಂದು ಅವರು ತಿಳಿಸಿದ್ದಾರೆ.

ಕಾರ್ಲ್ ಪೇ ಅವರ ಲೇಖನ

ಇದನ್ನೂ ಓದಿ: ಗೂಗಲ್‌ನಲ್ಲಿ ತಪ್ಪಿಯೂ ಇವುಗಳನ್ನು ಸರ್ಚ್ ಮಾಡಬೇಡಿ: ಲಕ್ಷಾಂತರ ರೂ. ಹಣ ಕಳೆದುಕೊಳ್ಳಬಹುದು ಎಚ್ಚರ

ನಥಿಂಗ್ ಸಿಇಒ ಕಾರ್ಲ್ ಪೇ ಅವರ ಎಕ್ಸ್ ಬ್ಲಾಗ್​ಪೋಸ್ಟ್​ನ ಪ್ರಮುಖ ಅಂಶಗಳು

ಭಾರತೀಯ ಕಂಪನಿಯಾಗಿ CMF: ಹೊಸ ಯೋಜನೆಯಂತೆ, CMF ಇನ್ನು ಮುಂದೆ ಲಂಡನ್ ಕಂಪನಿಯ ಭಾಗವಾಗಿರದೆ ಭಾರತದಲ್ಲೇ ನೋಂದಾಯಿತಗೊಂಡು, ಭಾರತದಲ್ಲೇ ಪ್ರಧಾನ ಕಚೇರಿಯನ್ನು ಹೊಂದಿರಲಿದೆ. ಇದರಲ್ಲಿ ಬಹುಪಾಲು ಷೇರುಗಳು ಭಾರತೀಯ ಹೂಡಿಕೆದಾರರ ಕೈಲಿರಲಿವೆ. ನಥಿಂಗ್ ಸಂಸ್ಥೆಯು ಕೇವಲ ಷೇರುದಾರ ಹಾಗೂ ಪಾಲುದಾರ ಕಂಪನಿಯಾಗಿ ಮುಂದುವರಿಯಲಿದೆ.

R&D ಮತ್ತು ಸ್ವಂತ ಇಂಜಿನಿಯರಿಂಗ್ ತಂಡ: ಕೇವಲ ಮೊಬೈಲ್ ಬಿಡಿಭಾಗಗಳನ್ನು ತಂದು ಜೋಡಿಸುವುದು (Assembly) ನೈಜ R&D ಅಲ್ಲ. ಸ್ವಂತ ಆಪರೇಟಿಂಗ್ ಸಿಸ್ಟಮ್ (OS), ಕ್ಯಾಮೆರಾ ಪ್ರೊಸೆಸಿಂಗ್, ಡಿಸೈನ್ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನವನ್ನು ಸ್ವತಃ ಅಭಿವೃದ್ಧಿಪಡಿಸುವುದೇ ನೈಜ R&D. CMF ಭಾರತದಲ್ಲೇ ತನ್ನದೇ ಆದ ಪ್ರತ್ಯೇಕ ಇಂಜಿನಿಯರಿಂಗ್ ಮತ್ತು R&D ತಂಡವನ್ನು ಹೊಂದಿರಲಿದೆ ಎಂದು ನಥಿಂಗ್ ಸಿಇಒ ಹೇಳಿದ್ದಾರೆ.

2015ರ ಇತಿಹಾಸದಿಂದ ಕಲಿತ ಪಾಠ: 2015ರಲ್ಲಿ ಮೈಕ್ರೋಮ್ಯಾಕ್ಸ್‌ನಂತಹ ಭಾರತೀಯ ಬ್ರ್ಯಾಂಡ್‌ಗಳು ದೇಶದ ಶೇ. 50ರಷ್ಟು ಮಾರುಕಟ್ಟೆ ಹೊಂದಿದ್ದವು. ಆದರೆ, ಸ್ವಂತ ಇಂಜಿನಿಯರಿಂಗ್ ಕೊರತೆಯಿಂದಾಗಿ ಚೀನಾ ಬ್ರ್ಯಾಂಡ್‌ಗಳ ಎದುರು ಸೋತು, 2025ರ ವೇಳೆಗೆ ಶೇ. 1ಕ್ಕಿಂತ ಕಡಿಮೆ ಶೇರು ಮಾರುಕಟ್ಟೆಗೆ ಕುಸಿದವು. ಅಂತಹ ತಪ್ಪನ್ನು CMF ಮಾಡುವುದಿಲ್ಲ ಎಂದು ಕಾರ್ಲ್ ಪೇ ಸ್ಪಷ್ಟಪಡಿಸಿದ್ದಾರೆ.

ವರ್ಷಕ್ಕೆ 10 ಕೋಟಿ ಫೋನ್ ತಲುಪುವ ಗುರಿ: ಜಾಗತಿಕ ಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಎನಿಸಿಕೊಳ್ಳಲು ವರ್ಷಕ್ಕೆ ಕನಿಷ್ಠ 10 ಕೋಟಿ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮಟ್ಟಕ್ಕೆ ತಲುಪಬೇಕು. ಅಂತಹ ಬೃಹತ್ ಗುರಿಯನ್ನು ಸಾಧಿಸಲು ಭಾರತವೇ ಅತ್ಯಂತ ಸೂಕ್ತ ಮಾರುಕಟ್ಟೆಯಾಗಿದೆ ಎಂದು ಕಾರ್ಲ್ ಪೇ ತಿಳಿಸಿದ್ದಾರೆ.

ಇದನ್ನೂ ಓದಿ: Tata Aeris: ಟಾಟಾ ಕಂಪನಿಯಿಂದ ಬರುತ್ತಿದೆ ಏರಿಸ್ ಹೆಸರಿನ ಹೊಸ ಕಾರು: ದಂಗಾದ ಅಟೋ ಮಾರುಕಟ್ಟೆ

“ಕಳೆದ ದಶಕದಲ್ಲಿ ಶೇನ್ಝೆನ್ (Shenzhen) ನಗರದಲ್ಲಿ ಚೀನಾ ಬ್ರ್ಯಾಂಡ್‌ಗಳು ವಿಶ್ವಮಟ್ಟಕ್ಕೆ ಬೆಳೆದದ್ದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಈಗ ಭಾರತದಲ್ಲೂ ಅದೇ ಕ್ರಾಂತಿ ನಡೆಯಲಿದೆ. ನಥಿಂಗ್ ಬೆಳೆಸಿದ ಇಂಜಿನಿಯರಿಂಗ್ DNA, ನಥಿಂಗ್ OS ಮತ್ತು ಜಾಗತಿಕ ಸರಬರಾಜು ಜಾಲವನ್ನು ನಾವು CMFಗೆ ನೀಡಲಿದ್ದು, ಭಾರತವು ತನ್ನ ಮಾರುಕಟ್ಟೆ ಹಾಗೂ ಕೌಶಲ್ಯಪೂರ್ಣ ಶಕ್ತಿಯನ್ನು ನೀಡಲಿದೆ” ಎಂದು ನಥಿಂಗ್ ಸಹ-ಸ್ಥಾಪಕರೂ ಆಗಿರುವ ಕಾರ್ಲ್ ಪೇ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:07 pm, Mon, 21 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ