AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂ ಕೋರ್ಟ್‌ನಲ್ಲಿ 130 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸ್​ ಆಗಿದ್ರೆ ಸಾಕು!

ಭಾರತದ ಸುಪ್ರೀಂ ಕೋರ್ಟ್ 130 ಜೂನಿಯರ್ ಕೋರ್ಟ್ ಅಟೆಂಡೆಂಟ್ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಪಾಸಾದವರು ಈ ಸರ್ಕಾರಿ ಉದ್ಯೋಗಕ್ಕೆ ಅರ್ಹರು. ನವೆಂಬರ್ 4 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 25 ಕೊನೆಯ ದಿನ. ಆನ್‌ಲೈನ್ ಮೂಲಕ sci.gov.in ನಲ್ಲಿ ಅರ್ಜಿ ಸಲ್ಲಿಸಿ, ಉತ್ತಮ ವೇತನದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಸುಪ್ರೀಂ ಕೋರ್ಟ್‌ನಲ್ಲಿ 130 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸ್​ ಆಗಿದ್ರೆ ಸಾಕು!
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 18, 2026 | 2:36 PM

Share

ನವದೆಹಲಿ: ನೀವು 10ನೇ ತರಗತಿ ಪಾಸಾಗಿದ್ದು, ಭಾರತದ ಸುಪ್ರೀಂ ಕೋರ್ಟ್‌ನಲ್ಲಿ (Supreme Court of India) ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯುತ್ತಮ ಅವಕಾಶ ಇಲ್ಲಿದೆ. ಭಾರತದ ಸುಪ್ರೀಂ ಕೋರ್ಟ್ ಸಚಿವಾಲಯವು ‘ಜೂನಿಯರ್ ಕೋರ್ಟ್ ಅಟೆಂಡೆಂಟ್’ (Junior Court Attendant) ಹುದ್ದೆಗಳ ಭರ್ತಿಗೆ ಅಧಿಕೃತ ಅಭಿಯಾನವನ್ನು ಕೈಗೊಂಡಿದ್ದು, ಒಟ್ಟು 130 ಗ್ರೂಪ್-ಸಿ (Group-C) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ಪೋರ್ಟಲ್:

ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ನವೆಂಬರ್ 4 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕವಾಗಿದೆ (ರಾತ್ರಿ 11:55 ರವರೆಗೆ). ಆಸಕ್ತ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಆದ sci.gov.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಫಾರ್ಮ್ ಭರ್ತಿ ಮಾಡುವ ಮುನ್ನ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೇಮಕಾತಿ ಅಧಿಸೂಚನೆಯನ್ನು ಓದಿ, ಎಲ್ಲಾ ಅರ್ಹತಾ ಮಾನದಂಡಗಳು ಮತ್ತು ಷರತ್ತುಗಳನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ವಿವರ:

ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಕನಿಷ್ಠ 10ನೇ ತರಗತಿ (SSLC/Matriculation) ಪಾಸಾಗಿರಬೇಕು. 12ನೇ ತರಗತಿ (PUC) ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಇನ್ನು ವಯೋಮಿತಿಗೆ ಸಂಬಂಧಿಸಿದಂತೆ, 2026ರ ಅಕ್ಟೋಬರ್ 1 ನ್ನು ಆಧಾರವಾಗಿಟ್ಟುಕೊಂಡು ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಇರಬೇಕಾಗುತ್ತದೆ. ಸರ್ಕಾರದ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಇತರೆ ಕಾಯ್ದಿರಿಸಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ದೊರೆಯಲಿದೆ.

ಅರ್ಜಿ ಶುಲ್ಕದ ವಿವರಗಳು:

ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ವಿಭಿನ್ನ ವರ್ಗದ ಅಭ್ಯರ್ಥಿಗಳಿಗೆ ನಿಗದಿತ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಮತ್ತು ಕಾಯ್ದಿರಿಸದ (General/Unreserved) ವರ್ಗದ ಅಭ್ಯರ್ಥಿಗಳು 1,500ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು SC, ST, OBC, EWS ಮತ್ತು ಮಾಜಿ ಸೈನಿಕ (Ex-Servicemen) ಅಭ್ಯರ್ಥಿಗಳಿಗೆ 750ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಈ ಎಲ್ಲಾ ಶುಲ್ಕ ಪಾವತಿಯನ್ನು ಆನ್‌ಲೈನ್ (Net Banking, Debit/Credit Card, UPI) ಮೂಲಕವೇ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ (Objective Test) ಮತ್ತು ಸಂದರ್ಶನದ (Interview) ಆಧಾರದ ಮೇಲೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಒಟ್ಟು 100 ಅಂಕಗಳಿಗೆ ನಡೆಯಲಿದ್ದು, ಇದರಲ್ಲಿ ಜನರಲ್ ಇಂಟೆಲಿಜೆನ್ಸ್ ಆ್ಯಂಡ್ ರೀಸನಿಂಗ್, ನ್ಯೂಮರಿಕಲ್ ಎಬಿಲಿಟಿ (ಗಣಿತ), ಸಾಮಾನ್ಯ ಇಂಗ್ಲಿಷ್ ಮತ್ತು ಜನರಲ್ ಅವೇರ್‌ನೆಸ್ ವಿಷಯಗಳಿಂದ ಬಹುಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳನ್ನು 25 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಒಟ್ಟು 13 ಪ್ರಶ್ನೆಗಳಿದ್ದು, ಅರ್ಹತೆ ಪಡೆಯಲು ಅಭ್ಯರ್ಥಿಗಳು ಕನಿಷ್ಠ 13 ಅಂಕಗಳನ್ನು ಪಡೆಯಬೇಕಾಗುತ್ತದೆ.

ನಿಯೋಜಿತ ಅಭ್ಯರ್ಥಿಗಳಿಗೆ ಸಿಗುವ ವೇತನ:

ಸುಪ್ರೀಂ ಕೋರ್ಟ್‌ನಲ್ಲಿ ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3 (Pay Level-3) ಅಡಿಯಲ್ಲಿ ಮಾಸಿಕ ವೇತನವನ್ನು ನೀಡಲಾಗುತ್ತದೆ. ಇದರ ಪ್ರಕಾರ ತಿಂಗಳಿಗೆ 21,700 ರಿಂದ 69,100 ರೂ. ವರೆಗೆ ವೇತನ ಶ್ರೇಣಿ ಸಿಗಲಿದೆ. ನೇಮಕಗೊಂಡ ಆರಂಭದಲ್ಲಿ ಅಭ್ಯರ್ಥಿಯ ಮೂಲ ವೇತನ (Basic Pay) 21,700ರೂ. ಇರಲಿದ್ದು, ಇದರ ಜೊತೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಿಗುವ ಇತರೆ ಭತ್ಯೆಗಳು (DA, HRA ಇತ್ಯಾದಿ) ಸೇರಿ ಒಟ್ಟು ಮಾಸಿಕ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ