Danish Ali: ಬಿಎಸ್‌ಪಿಯಿಂದ ಅಮಾನತುಗೊಂಡಿರುವ ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್‌ಗೆ ಸೇರ್ಪಡೆ

ಬಹುಜನ ಸಮಾಜ ಪಕ್ಷದಿಂದ ಅಮಾನತುಗೊಂಡಿರುವ ಲೋಕಸಭೆ ಸಂಸದ ಡ್ಯಾನಿಶ್‌ ಅಲಿ ಕಾಂಗ್ರೆಸ್ ಸೇರಿದ್ದಾರೆ.ಮಣಿಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಅಲಿ ಅವರು ಕಾಂಗ್ರೆಸ್ ಸೇರುವ ಕ್ರಮಕ್ಕೆ ಮುಂದಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದ ಬಿಎಸ್‌ಪಿಯಿಂದ ಅಮಾನತುಗೊಂಡ ನಂತರ ಅಲಿ ಪಕ್ಷ ಬದಲಿಸಿದ್ದಾರೆ.

Danish Ali: ಬಿಎಸ್‌ಪಿಯಿಂದ ಅಮಾನತುಗೊಂಡಿರುವ ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್‌ಗೆ ಸೇರ್ಪಡೆ
ಡ್ಯಾನಿಶ್ ಅಲಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 20, 2024 | 6:18 PM

ದೆಹಲಿ ಮಾರ್ಚ್20: ಬಹುಜನ ಸಮಾಜ ಪಕ್ಷ (BSP)ದಿಂದ ಅಮಾನತುಗೊಂಡಿರುವ ಲೋಕಸಭೆ ಸಂಸದ ಡ್ಯಾನಿಶ್‌ ಅಲಿ (Danish Ali) ಬುಧವಾರ ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುವ ಅಲಿ, ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದ ಬಿಎಸ್‌ಪಿಯಿಂದ ಅಮಾನತುಗೊಂಡ ನಂತರ ಪಕ್ಷ ಬದಲಿಸಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಅಲಿ ಅವರು ಕಾಂಗ್ರೆಸ್ ಸೇರುವ ಕ್ರಮಕ್ಕೆ ಮುಂದಾಗಿದ್ದರು.ಯಾತ್ರೆಯ ಸಂದರ್ಭದಲ್ಲಿ ತೌಬಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಅಲಿ ಅವರು “ಏಕತೆ ಮತ್ತು ನ್ಯಾಯಕ್ಕಾಗಿ ಅತಿ ದೊಡ್ಡ ಅಭಿಯಾನ” ಎಂದು ಉಲ್ಲೇಖಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ರಾಜಕಾರಣಿಯಾಗಿ ತಮ್ಮ ಕರ್ತವ್ಯವನ್ನು ಒತ್ತಿ ಹೇಳಿದರು.

ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ಉತ್ತರ ಪ್ರದೇಶದ ಅಮ್ರೋಹಾ ಅವರ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಿದ್ದರು.

ವರದಿಗಳ ಪ್ರಕಾರ, ಕಾಂಗ್ರೆಸ್, ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರಕ್ಕೆ ಅಲಿಯನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಸ್ಥಾನ ಹಂಚಿಕೆಯ ಮಾತುಕತೆಯಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದಿಂದ ಚೌಕಾಶಿ ಮಾಡಿದೆ.

ಕಾಂಗ್ರೆಸ್ ಸೇರಿದ ಡ್ಯಾನಿಶ್ ಅಲಿ

ಮಾರ್ಚ್ 14 ರಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ, ಅಲಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ  ಸುಳಿವು ನೀಡಿದ್ದರು. “ತ್ಯಾಗದ ಪ್ರತಿರೂಪವಾದ  ಸೋನಿಯಾ ಗಾಂಧಿಯವರು ನನ್ನ 2ನೇ ಲೋಕಸಭೆ ಚುನಾವಣೆಗೆ ಅಮ್ರೋಹದಿಂದ ಆಶೀರ್ವಾದ ಪಡೆದಿದ್ದಾರೆ. ಆಕೆಯ ಹೃದಯವು ಭಾರತದ ಬಡವರಿಗಾಗಿ ಮಿಡಿಯುತ್ತದೆ. ಅವರ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯು (NAC) ಬಡವರ ಪರವಾದ ಮತ್ತು MNREGA, RTI, ಶಿಕ್ಷಣದ ಹಕ್ಕು, ಆಹಾರ ಭದ್ರತಾ ಮಸೂದೆಯಂತಹ ಹೆಗ್ಗುರುತು ಕಾನೂನುಗಳನ್ನು ಪ್ರಾಯೋಗಿಕವಾಗಿ ರೂಪಿಸಿತು,” ಎಂದು ಅಲಿ ಎಕ್ಸ್ ನಲ್ಲಿ ಬರೆದಿದ್ದರು.

ಅಲಿ 2018 ರವರೆಗೆ ದೇವೇಗೌಡರ ಜನತಾ ದಳ(ಎಸ್) ನೊಂದಿಗೆ ಸಂಬಂಧ ಹೊಂದಿದ್ದರು. ಅವರು 2018 ರಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ಆಗ ಬಿಎಸ್ಪಿ ದೇವೇಗೌಡರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಗೌಡರ ಶಿಫಾರಸಿನ ಮೇರೆಗೆ ಅಲಿ ಅವರನ್ನು ಬಹುಜನ ಸಮಾಜ ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಕಲ್ಲು ತೂರಾಟ

ಬಿಎಸ್​​ಪಿಯಿಂದ ಡ್ಯಾನಿಶ್ ಅಲಿ ಅಮಾನತು

ಟಿಎಂಸಿ ಸದಸ್ಯ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಇತರ ವಿರೋಧ ಪಕ್ಷದ ಸದಸ್ಯರೊಂದಿಗೆ ಲೋಕಸಭೆಯ ಕಲಾಪದಿಂದ ಹೊರನಡೆದ ದಿನಗಳ ನಂತರ ಬಿಎಸ್‌ಪಿ ಕಳೆದ ವರ್ಷ ಅಲಿ ಅವರನ್ನು “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಳಿಸಿತು. ಆ ಸಮಯದಲ್ಲಿ, ಇತರ ಬಿಎಸ್​​ಪಿ ಸದಸ್ಯರು ಸದನದಲ್ಲಿ ಕುಳಿತಿದ್ದರು.

“ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನಿಮಗೆ ಮೊದಲೇ ಸ್ಪಷ್ಟಪಡಿಸಲಾಗಿತ್ತು..ಆದರೆ, ಪಕ್ಷಕ್ಕೆ ಸೇರುವಾಗ ನೀವು ನೀಡಿದ ಭರವಸೆಗಳನ್ನು ನೀವು ಮರೆತಿರುವಂತೆ ತೋರುತ್ತಿದೆ. ಹೀಗಾಗಿ ನಿನ್ನನ್ನು ಅಮಾನತು ಮಾಡಲಾಗುತ್ತಿದೆ” ಎಂದು ಅಲಿಗೆ ನೀಡಿದ ಅಧಿಕೃತ ಸೂಚನೆಯಲ್ಲಿ  ಬಿಎಸ್‌ಪಿ ತಿಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ