ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ; ಕಲಾಪ ಬಿಟ್ಟು ಹೊರನಡೆದ ರಾಜ್ಯಪಾಲ ಆರ್ಎನ್ ರವಿ
ಜಾತ್ಯತೀತತೆ ಮತ್ತು ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖಗಳನ್ನು ಹೊಂದಿರುವ ರಾಜ್ಯ ಸರ್ಕಾರವು ಸಿದ್ಧಪಡಿಸಿದ ಭಾಷಣದ ಭಾಗಗಳನ್ನು ರಾಜ್ಯಪಾಲರು ಕೈಬಿಟ್ಟು, ತಮ್ಮದೇ ಭಾಷಣವನ್ನು ಆರಂಭಿಸಿದರು.
ಚೆನ್ನೈ: ತಮಿಳುನಾಡು ವಿಧಾನಸಭೆ ಅಧಿವೇಶನದ (Tamil Nadu Assembly Session) ಮೊದಲ ದಿನವಾದ ಇಂದು ನಾಟಕೀಯ ಬೆಳವಣಿಗೆ ನಡೆದಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ (RN Ravi) ವಿಧಾನಸಭೆಯಲ್ಲಿ ಭಾಷಣ ಶುರು ಮಾಡುತ್ತಿದ್ದಂತೆ ಡಿಎಂಕೆ (DMK) ಶಾಸಕರು ಇಂದು ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (CM MK Stalin) ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ರೆಕಾರ್ಡ್ಗೆ ಸೇರಿಸುವಂತೆ ನಿರ್ಣಯ ಮಂಡಿಸಿದರು. ಅಲ್ಲದೆ, ರಾಜ್ಯಪಾಲರ ಭಾಷಣದ ಭಾಗವನ್ನು ತೆಗೆದುಹಾಕುವಂತೆ ಸೂಚಿಸಿದರು. ಇದರಿಂದ ರಾಜ್ಯಪಾಲ ಆರ್.ಎನ್. ರವಿ ಕಲಾಪದಿಂದ ಹೊರನಡೆದರು.
ತಮಿಳುನಾಡಿನ ರಾಜ್ಯಪಾಲರ ಸಾಂಪ್ರದಾಯಿಕ ಭಾಷಣದ ಭಾಗವನ್ನು ತೆಗೆದುಹಾಕಲು ಸೂಚಿಸಲಾಯಿತು. ರಾಜ್ಯ ಸರ್ಕಾರವು ಸಿದ್ಧಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ದಾಖಲಿಸಲು ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿತು.
ಇದನ್ನೂ ಓದಿ: Tamil Nadu Rain: ಕನ್ಯಾಕುಮಾರಿ ಸೇರಿ ತಮಿಳುನಾಡಿನ 4 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ
ಜಾತ್ಯತೀತತೆ ಮತ್ತು ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖಗಳನ್ನು ಹೊಂದಿರುವ ರಾಜ್ಯ ಸರ್ಕಾರವು ಸಿದ್ಧಪಡಿಸಿದ ಭಾಷಣದ ಭಾಗಗಳನ್ನು ರಾಜ್ಯಪಾಲರು ಕೈಬಿಟ್ಟು, ತಮ್ಮದೇ ಭಾಷಣವನ್ನು ಆರಂಭಿಸಿದರು. ಇದಾದ ನಂತರ ಮುಖ್ಯಮಂತ್ರಿ ಸ್ಟಾಲಿನ್ ನಿರ್ಣಯವನ್ನು ಮಂಡಿಸಿದರು. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
#WATCH | Chennai: A ruckus breaks out at the Tamil Nadu assembly soon after Governor RN Ravi begins his address as the Session begins.
A few MLAs of DMK alliance parties are raising slogans against the Governor.
(Video Source: Tamil Nadu Assembly) pic.twitter.com/M8gzGDwKO7
— ANI (@ANI) January 9, 2023
ಅಂದಹಾಗೆ, ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ನಡುವೆ ಹಲವು ವಿಚಾರಗಳಲ್ಲಿ ಜಗಳ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ದ್ರಾವಿಡ ರಾಜಕೀಯವನ್ನು ‘ಪ್ರತಿಗಾಮಿ ರಾಜಕೀಯ’ ಎಂದು ಕರೆದಿದ್ದ ರಾಜ್ಯಪಾಲ ರವಿ ಅವರ ಹೇಳಿಕೆಗೆ ಡಿಎಂಕೆ ಬಲವಾದ ವಿರೋಧ ವ್ಯಕ್ತಪಡಿಸಿತ್ತು. ತಮಿಳುನಾಡು ರಾಜ್ಯದ ಹೆಸರನ್ನು ‘ತಮಿಳಗಂ’ ಎಂದು ಬದಲಾಯಿಸಲು ರಾಜ್ಯಪಾಲರು ಸೂಚಿಸಿದ್ದರು.
ಜನವರಿ 4ರಂದು ಚೆನ್ನೈನ ರಾಜಭವನದಲ್ಲಿ ನಡೆದ ಕಾಶಿ ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆರ್.ಎನ್.ರವಿ ತಮಿಳುನಾಡಿಗೆ ‘ತಮಿಳಗಂ’ ಪದವು ಹೆಚ್ಚು ಸೂಕ್ತವಾದ ಪದವಾಗಿದೆ ಎಂದು ಟೀಕಿಸಿದ್ದರು.