AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನದಲ್ಲಿ ಸಿಲಿಂಡರ್ ದಂಧೆ

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನೆಪವೊಡ್ಡಿ ಗ್ಯಾಸ್ ಕೊರತೆ ಸುಳ್ಳು ಭಯ ಹುಟ್ಟಿಸಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಪಂಜಗುಟ್ಟ ಸ್ಮಶಾನದಲ್ಲಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ₹2,100 ಮೌಲ್ಯದ ವಾಣಿಜ್ಯ ಸಿಲಿಂಡರ್‌ಗಳನ್ನು 6,000 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ದಾಳಿಯಲ್ಲಿ 414 ಸಿಲಿಂಡರ್‌ಗಳು ವಶ, 10 ಮಂದಿ ಬಂಧಿತರಾಗಿದ್ದಾರೆ.

ಸ್ಮಶಾನದಲ್ಲಿ ಸಿಲಿಂಡರ್ ದಂಧೆ
ಸಾಂಧರ್ಬಿಕ ಚಿತ್ರImage Credit source: Google Gemini
ನಯನಾ ರಾಜೀವ್
|

Updated on: Mar 31, 2026 | 12:46 PM

Share

ತೆಲಂಗಾಣ, ಮಾರ್ಚ್​ 31: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿ ದೇಶದಲ್ಲಿರುವ ಅನಿಲ ಕೊರತೆ ಭಯವನ್ನೇ ಉಪಯೋಗಿಸಿಕೊಂಡು ಸ್ಮಶಾನದಲ್ಲಿ ಸಿಲಿಂಡರ್(Cylinder) ದಂಧೆ ನಡೆಸುತ್ತಿದ್ದವರ ವಿರುದ್ಧ ತೆಲಂಗಾಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪಂಜಗುಟ್ಟದಲ್ಲಿರುವ ಸ್ಮಶಾನವನ್ನು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಅನಿಲ ಲಭ್ಯತೆ ಕಡಿಮೆಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಸಿಲಿಂಡರ್‌ಗಳು ಲಭ್ಯವಿರುವುದಿಲ್ಲ ಎಂಬ ಕೃತಕ ಭಯವನ್ನು ಒಡ್ಡಿ ಈ ಗ್ಯಾಂಗ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಮಾಲೀಕರಿಂದ ಹೆಚ್ಚುವರಿ ಹಣ ಪಡೆದಿದೆ. ಸುಮಾರು 2,100 ರೂ. ಬೆಲೆಯ ವಾಣಿಜ್ಯ ಸಿಲಿಂಡರ್ ಅನ್ನು 6,000 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಟಾಸ್ಕ್ ಫೋರ್ಸ್ ಡಿಸಿಪಿ ವೈಭವ್ ರಘುನಾಥ್ ಬಹಿರಂಗಪಡಿಸಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಲು, ಸಿಲಿಂಡರ್‌ಗಳನ್ನು ಪಂಜಗುಟ್ಟದಲ್ಲಿರುವ ಸ್ಮಶಾನದಲ್ಲಿ ಸಂಗ್ರಹಿಸಲಾಗಿತ್ತು. ಆರೋಪಿಗಳು ಶಂಷಾಬಾದ್‌ನಲ್ಲಿ ಬೃಹತ್ ಗೋಡೌನ್ ಮತ್ತು ಅಫ್ಜಲ್‌ಗಂಜ್‌ನಲ್ಲಿ ಕಚೇರಿಯನ್ನು ಸಹ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ರಾಜ್ಯದಲ್ಲಿ ಗ್ಯಾಸ್​​ ಸಿಲಿಂಡರ್​​ ಬೆನ್ನಲ್ಲೇ ರಸಗೊಬ್ಬರ ಅಭಾವ ಆತಂಕ: ಸೂಕ್ತ ಕ್ರಮಕ್ಕೆ ಆಗ್ರಹ

ಟಾಸ್ಕ್ ಫೋರ್ಸ್ ಜುಬಿಲಿ ಹಿಲ್ಸ್ ತಂಡ ಮತ್ತು ಬಂಜಾರಾ ಹಿಲ್ಸ್ ಪೊಲೀಸರು ಜಂಟಿಯಾಗಿ ನಡೆಸಿದ ಈ ದಾಳಿಗಳಲ್ಲಿ 414 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು 22 ಲಕ್ಷ ರೂ. ಎಂದು ಅವರು ಹೇಳಿದರು. 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಮೊಹಮ್ಮದ್ ಅಮೀರ್ ಜೊತೆಗೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರು ಗ್ಯಾಸ್ ಡೆಲಿವರಿ ಬಾಯ್ಸ್ ಆಗಿದ್ದರು ಎಂಬುದು ಅಚ್ಚರಿಯ ಸಂಗತಿ.

ಈ ಗ್ಯಾಂಗ್ ಕಳೆದ 18 ತಿಂಗಳಿನಿಂದ ಈ ಅಕ್ರಮ ವ್ಯವಹಾರ ನಡೆಸುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಮೆಟ್ರೋ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ವಾಣಿಜ್ಯ ಅನಿಲ ಸರಬರಾಜುಗಳನ್ನು ಬೇರೆಡೆಗೆ ತಿರುಗಿಸಿ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿನ ಸಣ್ಣ ಪ್ರಮಾಣದ ಹೋಟೆಲ್‌ಗಳು ಮತ್ತು ಟಿಫಿನ್ ಕೇಂದ್ರಗಳು ಹತಾಶ ಪರಿಸ್ಥಿತಿಯಲ್ಲಿದ್ದಾಗ ಅವರಿಂದ ಮೂರು ಪಟ್ಟು ಬೆಲೆಗೆ ಅನಿಲವನ್ನು ಖರೀದಿಸುತ್ತಿವೆ ಎಂದು ವರದಿಯಾಗಿದೆ.

ನಗರದಲ್ಲಿ ಗ್ಯಾಸ್ ಕೊರತೆ ಇಲ್ಲ, ಸರಬರಾಜು ಸುಗಮವಾಗಿದೆ. ಯಾರೂ ವದಂತಿಗಳನ್ನು ನಂಬಿ ಕಾಳಸಂತೆಯಲ್ಲಿ ಖರೀದಿಸಬಾರದು ಎಂದು ಡಿಸಿಪಿ ರಘುನಾಥ್ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಕೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us