AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ಮುಂದಿನ ಶೈಕ್ಷಣಿಕ ವರ್ಷದಿಂದ ತೆಲಂಗಾಣದ ಶಾಲೆಗಳಲ್ಲಿ ತೆಲುಗು ಭಾಷಾ ಬೋಧನೆ, ಕಲಿಕೆ ಕಡ್ಡಾಯ

2025-26ರ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ, ಐಸಿಎಸ್ಇ, ಐಬಿ ಮತ್ತು ರಾಜ್ಯದ ಇತರ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆ ಬೋಧನೆ ಮತ್ತು ಕಲಿಕೆಯನ್ನು ಕಡ್ಡಾಯಗೊಳಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.ಮಂಗಳವಾರ ಸಿಬಿಎಸ್​ಇ ನಿರ್ವಹಣಾ ಮಂಡಳಿಯೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅಲ್ಲಿ ತೆಲಂಗಾಣದ ಎಲ್ಲಾ CBSE, ICSE, IB ಮತ್ತು ಇತರ ಮಂಡಳಿ-ಸಂಯೋಜಿತ ಶಾಲೆಗಳು ವಿದ್ಯಾರ್ಥಿಗಳಿಗೆ ತೆಲುಗು ಕಡ್ಡಾಯ ವಿಷಯವಾಗಿ ಕಲಿಸಬೇಕು ಎಂದು ನಿರ್ಧರಿಸಲಾಯಿತು.

ತೆಲಂಗಾಣ:  ಮುಂದಿನ ಶೈಕ್ಷಣಿಕ ವರ್ಷದಿಂದ ತೆಲಂಗಾಣದ ಶಾಲೆಗಳಲ್ಲಿ ತೆಲುಗು ಭಾಷಾ ಬೋಧನೆ, ಕಲಿಕೆ ಕಡ್ಡಾಯ
ಶಾಲೆ Image Credit source: Pexels
ನಯನಾ ರಾಜೀವ್
|

Updated on: Feb 26, 2025 | 11:43 AM

Share

ತೆಲಂಗಾಣ, ಫೆಬ್ರವರಿ 26: ತೆಲಂಗಾಣ ಸರ್ಕಾರವು ಶಾಲಾ ಪಠ್ಯಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2025-26ರ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸಿಬಿಎಸ್​ಇ, ಐಸಿಎಸ್​ಇ, ಐಬಿ ಸೇರಿ ಎಲ್ಲಾ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಕಲಿಸಲು ಆದೇಶ ಹೊರಡಿಸಿದೆ.

ಈ ಆದೇಶವು 1 ರಿಂದ 10ನೇ ತರಗತಿವರೆಗೆ ಅನ್ವಯವಾಗುತ್ತದೆ. ಸರ್ಕಾರಿ ಜಿಲ್ಲಾ ಪರಿಷತ್, ಮಂಡಲ ಪರಿಷತ್, ಅನುದಾನಿತ ಶಾಲೆಗಳು ಹಾಗೂ ಸಿಬಿಎಸ್​ಇ, ಐಸಿಎಸ್​ಇ, ಐಬಿ ಮತ್ತು ಇತರ ಮಂಡಳಿ-ಸಂಯೋಜಿತ ಸಂಸ್ಥೆಗಳಲ್ಲಿ ತೆಲುಗು ಬೋಧನೆಯನ್ನು ಕಡ್ಡಾಯಗೊಳಿಸಲು 2018 ರಲ್ಲಿ ಸ್ಥಾಪಿಸಲಾದ ತೆಲಂಗಾಣ (ಶಾಲೆಗಳಲ್ಲಿ ತೆಲುಗು ಕಡ್ಡಾಯ ಬೋಧನೆ ಮತ್ತು ಕಲಿಕೆ) ಕಾಯ್ದೆಯಡಿಯಲ್ಲಿ ಈ ಉಪಕ್ರಮವನ್ನು ಜಾರಿಗೆ ತರಲಾಗಿದೆ.

ಮಂಗಳವಾರ ಸಿಬಿಎಸ್​ಇ ನಿರ್ವಹಣಾ ಮಂಡಳಿಯೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅಲ್ಲಿ ತೆಲಂಗಾಣದ ಎಲ್ಲಾ CBSE, ICSE, IB ಮತ್ತು ಇತರ ಮಂಡಳಿ-ಸಂಯೋಜಿತ ಶಾಲೆಗಳು ವಿದ್ಯಾರ್ಥಿಗಳಿಗೆ ತೆಲುಗು ಕಡ್ಡಾಯ ವಿಷಯವಾಗಿ ಕಲಿಸಬೇಕು ಎಂದು ನಿರ್ಧರಿಸಲಾಯಿತು.

ಮತ್ತಷ್ಟು ಓದಿ: ಅಂಗನವಾಡಿ ಶಿಕ್ಷಕರ ಹುದ್ದೆಗೆ ಉರ್ದು ಕಡ್ಡಾಯ: ಕರ್ನಾಟಕ ಸರ್ಕಾರದ ಆದೇಶಕ್ಕೆ ಭಾರೀ ವಿರೋಧ

ಸಿಬಿಎಸ್‌ಇ ಮತ್ತು ಇತರ ಮಂಡಳಿಗಳ 9 ಮತ್ತು 10 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳ ಭಾಷೆಯ ತಿಳುವಳಿಕೆಯನ್ನು ಹೆಚ್ಚಿಸಲು ಪರೀಕ್ಷೆಗಳಿಗೆ ‘ಸರಳ ತೆಲುಗು’ ಪಠ್ಯಪುಸ್ತಕ ‘ವೆನ್ನೆಲ’ವನ್ನು ಬಳಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ತೆಲುಗು ಮಾತೃಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಮಂಡಳಿಗಳ ಅಡಿಯಲ್ಲಿರುವ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಗಳಿಗೆ 2025-26 ಶೈಕ್ಷಣಿಕ ವರ್ಷದಿಂದ ತೆಲುಗು ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​
ಅಕ್ರಮವಾಗಿ ಸಾಗಿಸುತ್ತಿದ್ದ 32 ಟನ್ ಅನ್ನಭಾಗ್ಯ ಅಕ್ಕಿ ಜಪ್ತಿ
ಅಕ್ರಮವಾಗಿ ಸಾಗಿಸುತ್ತಿದ್ದ 32 ಟನ್ ಅನ್ನಭಾಗ್ಯ ಅಕ್ಕಿ ಜಪ್ತಿ
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳಿಗೆ ಲಕ್ಷ ಲಕ್ಷ ಪ್ರೋತ್ಸಾಹಧನ
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳಿಗೆ ಲಕ್ಷ ಲಕ್ಷ ಪ್ರೋತ್ಸಾಹಧನ
ಶಾಲೆ ಬಳಿ ಬೈಕ್​ನಲ್ಲಿ ಇಟ್ಟುಕೊಂಡು ಪಿಸ್ತೂಲ್ ಮಾರುತ್ತಿದ್ದ ಇಬ್ಬರ ಬಂಧನ
ಶಾಲೆ ಬಳಿ ಬೈಕ್​ನಲ್ಲಿ ಇಟ್ಟುಕೊಂಡು ಪಿಸ್ತೂಲ್ ಮಾರುತ್ತಿದ್ದ ಇಬ್ಬರ ಬಂಧನ
ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ
ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ
CET ಕೋರ್ಸ್​ಗಳಿಗೆ ಕೌನ್ಸೆಲಿಂಗ್ ಬಗ್ಗೆ KEA ನಿರ್ದೇಶಕ ಪ್ರಸನ್ನ ಅಪ್ಡೇಟ್
CET ಕೋರ್ಸ್​ಗಳಿಗೆ ಕೌನ್ಸೆಲಿಂಗ್ ಬಗ್ಗೆ KEA ನಿರ್ದೇಶಕ ಪ್ರಸನ್ನ ಅಪ್ಡೇಟ್
ಪ್ರವಾಸಿಗರೇ ಎಚ್ಚರ!: ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ ಗೋಪುರ
ಪ್ರವಾಸಿಗರೇ ಎಚ್ಚರ!: ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ ಗೋಪುರ
ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ: ವಿಡಿಯೋ
ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ: ವಿಡಿಯೋ