ಮಮತಾ ಬ್ಯಾನರ್ಜಿಯತ್ತ ಬೆರಳು ತೋರಿಸುವವರ ಬೆರಳು ಮುರಿಯುತ್ತೇವೆ: ಟಿಎಂಸಿ ಸಚಿವ ಉದಯನ ಗುಹಾ

ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ನಡೆಸುತ್ತಿರುವವರು, ಅವರತ್ತ ಬೆರಳು ತೋರಿಸುವವರು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುವವರು ಎಂದಿಗೂ ಯಶಸ್ವಿಯಾಗುವುದಿಲ್ಲ. ಮಮತಾ ಬ್ಯಾನರ್ಜಿಯತ್ತ ಬೆರಳು ತೋರುವವರ ಬೆರಳು ಮುರಿಯಲಾಗುವುದು" ಎಂದು ಸಚಿವರು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.

ಮಮತಾ ಬ್ಯಾನರ್ಜಿಯತ್ತ ಬೆರಳು ತೋರಿಸುವವರ ಬೆರಳು ಮುರಿಯುತ್ತೇವೆ: ಟಿಎಂಸಿ ಸಚಿವ ಉದಯನ ಗುಹಾ
ಉದಯನ್ ಗುಹಾ
Follow us
|

Updated on: Aug 19, 2024 | 7:32 PM

ಕೊಲ್ಕತ್ತಾ ಆಗಸ್ಟ್ 19: ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ (Kolkata rape  murder case) ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ದೂಷಿಸುತ್ತಿರುವವರ ಮತ್ತು ರಾಜೀನಾಮೆಗೆ ಒತ್ತಾಯಿಸುವವರ ಬೆರಳುಗಳನ್ನು ಮುರಿಯಲಾಗುವುದು ಎಂದು ಟಿಎಂಸಿಯ ಹಿರಿಯ ಸಚಿವ ಉದಯನ ಗುಹಾ (Udayan Guha) ಹೇಳಿದ್ದಾರೆ. ಗುಹಾ ಈ ರೀತಿ ಬೆದರಿಕೆಯೊಡ್ಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ನಡೆಸುತ್ತಿರುವವರು, ಅವರತ್ತ ಬೆರಳು ತೋರಿಸುವವರು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುವವರು ಎಂದಿಗೂ ಯಶಸ್ವಿಯಾಗುವುದಿಲ್ಲ. ಮಮತಾ ಬ್ಯಾನರ್ಜಿಯತ್ತ ಬೆರಳು ತೋರುವವರ ಬೆರಳು ಮುರಿಯಲಾಗುವುದು” ಎಂದು ಅವರು ವಿಡಿಯೊದಲ್ಲಿ ಹೇಳಿರುವುದು ಕೇಳುತ್ತದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಯುವ ಮಹಿಳಾ ವೈದ್ಯರ ಶವ ಆಗಸ್ಟ್ 9 ರಂದು ಪತ್ತೆಯಾಗಿತ್ತು. ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಮರುದಿನ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಯಿತು.  ಇದಾದ ನಂತರ ಆಗಸ್ಟ್ 15 ರ ಮುಂಜಾನೆ ಜನರ ಗುಂಪು ಆಸ್ಪತ್ರೆಗೆ ಪ್ರವೇಶಿಸಿ ತುರ್ತು ವಿಭಾಗ, ನರ್ಸಿಂಗ್ ಸ್ಟೇಷನ್ ಮತ್ತು ಮೆಡಿಕಲ್ ನ್ನು ಧ್ವಂಸಗೊಳಿಸಿತು. ಆಗಸ್ಟ್ 13 ರಂದು ಕಲ್ಕತ್ತಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು, ಅದು ಆಗಸ್ಟ್ 14 ರಂದು ತನಿಖೆಯನ್ನು ಪ್ರಾರಂಭಿಸಿತು.

ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ವೈದ್ಯರು ಮಧ್ಯರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಲಾಗಿದೆ.

ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಹನ್ನೊಂದನೇ ದಿನವೂ ಪಶ್ಚಿಮ ಬಂಗಾಳದಾದ್ಯಂತ ಮುಂದುವರಿದಿದ್ದು, ಆಸ್ಪತ್ರೆ ಸೇವೆಗಳನ್ನು ಕುಂಠಿತಗೊಳಿಸಿದೆ.

ಇದನ್ನೂ ಓದಿ: Kolkata doctor rape-murder: ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?

ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಹೊರರೋಗಿ ವಿಭಾಗಗಳು ಮುಚ್ಚಲ್ಪಟ್ಟಿವೆ. ಇದರಿಂದಾಗಿ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ನೆರೆಯ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಉಲ್ಲೇಖಿಸಿದಗುಹಾ, “ಪಶ್ಚಿಮ ಬಂಗಾಳವನ್ನು ಮತ್ತೊಂದು ಬಾಂಗ್ಲಾದೇಶವಾಗಿ ಪರಿವರ್ತಿಸಲು ನಾವು ಎಂದಿಗೂ ಅನುಮತಿಸುವುದಿಲ್ಲ” ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ