AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಂಚ್​ನಲ್ಲಿ ಪಾಕ್​ ದಾಳಿ: ಅವಳಿ ಮಕ್ಕಳ ಸಾವು, ತಂದೆ ಐಸಿಯುನಲ್ಲಿ, ಇಡೀ ಕುಟುಂಬವೇ ನಾಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಗೆ ಅವಳಿ ಮಕ್ಕಳು ಪ್ರಾಣಬಿಟ್ಟಿದ್ದಾರೆ. ಅವರ ಕುಟುಂಬದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ತಂದೆ ಐಸಿಯುನಲ್ಲಿದ್ದಾರೆ. ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಮೇ 5 ರ ರಾತ್ರಿ, ಪಾಕಿಸ್ತಾನಿ ಸೇನೆಯ ಶೆಲ್ ದಾಳಿಯು ಅವರ ಪುಟ್ಟ ಕುಟುಂಬವನ್ನೇ ನಾಶ ಮಾಡಿತು. ಆ ಮಕ್ಕಳ ತಂದೆ 48 ವರ್ಷದ ರಮೀಜ್ ಖಾನ್ ಪ್ರಸ್ತುತ ಜಮ್ಮು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಮಕ್ಕಳ ಸಾವಿನ ಬಗ್ಗೆ ಅವರಿಗೆ ಇನ್ನೂ ಮಾಹಿತಿ ನೀಡಲಾಗಿಲ್ಲ

ಪೂಂಚ್​ನಲ್ಲಿ ಪಾಕ್​ ದಾಳಿ: ಅವಳಿ ಮಕ್ಕಳ ಸಾವು, ತಂದೆ ಐಸಿಯುನಲ್ಲಿ, ಇಡೀ ಕುಟುಂಬವೇ ನಾಶ
ಅವಳಿ
ನಯನಾ ರಾಜೀವ್
|

Updated on: May 13, 2025 | 7:46 AM

Share

ಪೂಂಚ್, ಮೇ 13: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನಿ ಶೆಲ್ ದಾಳಿ(Shell Attack)ಯು ಇಡೀ ಕುಟುಂಬವನ್ನು ನಾಶಮಾಡಿದೆ. ಈ ದಾಳಿಯಲ್ಲಿ 12 ವರ್ಷದ ಅವಳಿ ಸಹೋದರ ಮತ್ತು ಸಹೋದರಿ ಜೋಯಾ ಮತ್ತು ಅಯಾನ್ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಿಂದ ಬಂದ ಶೆಲ್ ಮನೆಯ ಮೇಲೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ಕುಟುಂಬದ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೂಡ ಸ್ಥಳದಲ್ಲೇ ಸಾವನ್ನಪ್ಪಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಈ ಕುಟುಂಬ ಕೇವಲ ಎರಡು ತಿಂಗಳ ಹಿಂದೆ ಪೂಂಚ್‌ಗೆ ಬಂದಿತ್ತು.

ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಮೇ 5 ರ ರಾತ್ರಿ, ಪಾಕಿಸ್ತಾನಿ ಸೇನೆಯ ಶೆಲ್ ದಾಳಿಯು ಅವರ ಪುಟ್ಟ ಕುಟುಂಬವನ್ನೇ ನಾಶ ಮಾಡಿತು.

ಆ ಮಕ್ಕಳ ತಂದೆ 48 ವರ್ಷದ ರಮೀಜ್ ಖಾನ್ ಪ್ರಸ್ತುತ ಜಮ್ಮು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಮಕ್ಕಳ ಸಾವಿನ ಬಗ್ಗೆ ಅವರಿಗೆ ಇನ್ನೂ ಮಾಹಿತಿ ನೀಡಲಾಗಿಲ್ಲ. ತಾಯಿ ಉರ್ಷಾ ಖಾನ್ ಮಾನಸಿಕವಾಗಿ ಕುಸಿದಿದ್ದಾರೆ. ಒಂದೆಡೆ ತಾಯಿಯ ನೋವು, ಮತ್ತೊಂದೆಡೆ ಐಸಿಯುನಲ್ಲಿ ದಾಖಲಾಗಿರುವ ಗಂಡನನ್ನು ನೋಡಿಕೊಳ್ಳುವುದು. ಜೋಯಾ ಮತ್ತು ಅಯಾನ್ ತುಂಬಾ ಬುದ್ಧಿವಂತ ಮತ್ತು ಪ್ರೀತಿಯ ಮಕ್ಕಳಾಗಿದ್ದರು ಎಂದು ಕುಟುಂಬದ ನಿಕಟ ಸಂಬಂಧಿಗಳಾದ ಮಾರಿಯಾ ಮತ್ತು ಸೊಹೈಲ್ ಖಾನ್ ಹೇಳಿದರು.

ಇದನ್ನೂ ಓದಿ
Image
ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
Image
ಪ್ರಬಲ ಸಮರ ತಂತ್ರ: ಭಾರತದ ಉದಾಹರಣೆ ಕೊಟ್ಟ ಜಾನ್ ಸ್ಪೆನ್ಸರ್
Image
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಅಯಾನ್ ನನ್ನು ಉಳಿಸಲು ಪ್ರಯತ್ನಿಸಲಾಯಿತು ಆದರೆ ಅವನ ಕರುಳುಗಳು ಆಗಲೇ ದೇಹದಿಂದ ಹೊರಬಂದಿದ್ದವು. ಜೋಯಾ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರೂ ಕೆಲವೇ ನಿಮಿಷಗಳ ವ್ಯತ್ಯಾಸದಲ್ಲಿ ನಿಧನರಾದರು.

ಮತ್ತಷ್ಟು ಓದಿ: ರಕ್ತ, ನೀರು ಒಟ್ಟಿಗೆ ಹರಿಯಲ್ಲ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ

ರಮೀಜ್ ನನ್ನು ದೆಹಲಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆ ನೀಡಬೇಕೆಂದು ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ. ಕಳೆದ ತಿಂಗಳು ತಮ್ಮ 12 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವಳಿಗಳು ಮೇ 7 ರಂದು ನಿಮಿಷಗಳ ಅಂತರದಲ್ಲಿ ಪ್ರಾಣಬಿಟ್ಟಿದ್ದಾರೆ.

ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಭಾರತವು ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ತಟಸ್ಥಗೊಳಿಸಿತ್ತು.

ಇದಾದ ಬಳಿಕ ದಾಳಿ ಪ್ರತಿದಾಳಿಗಳು ನಡೆಯುತ್ತಿದ್ದವು. ಈಗ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಮಾತುಕತೆಗಳು ಮುಂದುವರೆದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ