AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕ್ ಕದನ ವಿರಾಮಕ್ಕೆ ಏಕಾಏಕಿ ಸಿದ್ಧರಾಗಿದ್ದೇಕೆ?

ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಸಿತ್ತು. ಆದರೆ ಇದು ಇಷ್ಟಕ್ಕೆ ನಿಲ್ಲಲಿಲ್ಲ. ದಾಳಿ ಪ್ರತಿ ದಾಳಿ ನಡೆಯುತ್ತಲೇ ಇತ್ತು. ಆದರೆ ಕೇವಲ ಎರಡೇ ಗಂಟೆಗಳಲ್ಲಿ ಎರಡೂ ದೇಶಗಳು ಅಘೋಷಿತ ಯುದ್ಧಕ್ಕೆ ಫುಲ್​ಸ್ಟಾಪ್​ ಇಟ್ಟಿದ್ದೇಕೆ ಎಂಬ ಕುತೂಹಲಕಾರ ಸಂಗತಿ ಇಲ್ಲಿದೆ.

ಭಾರತ-ಪಾಕ್ ಕದನ ವಿರಾಮಕ್ಕೆ ಏಕಾಏಕಿ ಸಿದ್ಧರಾಗಿದ್ದೇಕೆ?
ನಯನಾ ರಾಜೀವ್
|

Updated on:May 13, 2025 | 11:20 AM

Share

ನವದೆಹಲಿ, ಮೇ 13: ಭಾರತ(India) ಮತ್ತು ಪಾಕಿಸ್ತಾನ(Pakistan) ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಐದು ದಿನಗಳ ಕಾಲ ಪಾಕಿಸ್ತಾನದ ಮೇಲೆ ನಿರಂತರ ದಾಳಿ ಮಾಡಿದ್ದ ಭಾರತವು ಕೂಡ ಅಘೋಷಿತ ಯುದ್ಧದಿಂದ ಹಿಂದೆ ಸರಿದಿದೆ. ಹಾಗಾದರೆ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಕ್ಕೆ ಕಾರಣ ಏನಿರಬಹುದು ಅದಕ್ಕೆ ಪಾಠಶಾಲಾ ಯೂಟ್ಯೂಬ್​ ಚಾನೆಲ್​ನ ಅಂಕಿತ್ ಅವಸ್ಥಿ ಕೆಲವು ಕಾರಣಗಳನ್ನು ನೀಡಿದ್ದಾರೆ. ನೇಪಾಳಿ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾದ ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಸುದ್ದಿಯಿಂದ ಹಿಡಿದು ಪಾಕಿಸ್ತಾನವು ಚೀನಾದೊಂದಿಗೆ ನಡೆಸಿದ ಮಾತುಕತೆವರೆಗೂ ಎಲ್ಲವರನ್ನೂ ವಿವರಿಸಿದ್ದಾರೆ.

ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಸಿತ್ತು. ಆದರೆ ಇದು ಇಷ್ಟಕ್ಕೆ ನಿಲ್ಲಲಿಲ್ಲ. ದಾಳಿ ಪ್ರತಿ ದಾಳಿ ನಡೆಯುತ್ತಲೇ ಇತ್ತು. ಆದರೆ ಕೇವಲ ಎರಡೇ ಗಂಟೆಗಳಲ್ಲಿ ಎರಡೂ ದೇಶಗಳು ಅಘೋಷಿತ ಯುದ್ಧಕ್ಕೆ ಫುಲ್​ಸ್ಟಾಪ್​ ಇಟ್ಟಿದ್ದೇಕೆ ಎಂಬ ಕುತೂಹಲಕಾರ ಸಂಗತಿ ಇಲ್ಲಿದೆ.

ಎರಡೂವರೆ ಗಂಟೆಗಳಲ್ಲಿ ದಾಳಿ ನಿಲ್ಲಿಸಲು ನಿರ್ಧರಿಸಿದ್ದೇಕೆ?

ಇದನ್ನೂ ಓದಿ
Image
ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
Image
ಪ್ರಬಲ ಸಮರ ತಂತ್ರ: ಭಾರತದ ಉದಾಹರಣೆ ಕೊಟ್ಟ ಜಾನ್ ಸ್ಪೆನ್ಸರ್
Image
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಆ ಯುದ್ಧ ಎಂದಿಗೂ ಯುದ್ಧವಾಗಿರಲಿಲ್ಲ ಅದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು, ಆದರೆ ಅದು ಇದ್ದಕ್ಕಿದ್ದಂತೆ ಹೇಗೆ ನಿಂತುಹೋಯಿತು ಎನ್ನುವ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ. ಪಾಕಿಸ್ತಾನದ ಯಾವ ಕ್ರಮದಿಂದ ಭಾರತ ಯಾವ ರೀತಿಯಲ್ಲಿ ಕದನ ವಿರಾಮ ಹೇರಬೇಕಾಯಿತು ಅಥವಾ ಅಮೆರಿಕಕ್ಕೆ ಪಾಕಿಸ್ತಾನದ ಬಗ್ಗೆ ಭಯವಿತ್ತೇ? ಅಮೆರಿಕ ಯಾಕೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಸಲಹೆ ನೀಡಿತ್ತು? ಇಲ್ಲಿದೆ ಮಾಹಿತಿ. ಹಾಗಾದರೆ ನೇಪಾಳ, ಚೀನಾ, ಭಾರತ, ಈಜಿಪ್ಟ್​, ಪಾಕಿಸ್ತಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂಬುದನ್ನು ನೋಡೋಣ.

ಪಾಕಿಸ್ತಾನದ ವಾಯುನೆಲೆ ಧ್ವಂಸ ಭಾರತವು ಪಾಕಿಸ್ತಾನದ ಎರಡು ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದಲ್ಲಿ ದೊಡ್ಡ ಅಣುಬಾಂಬ್ ನೆಲೆ ಇದ್ದು, ಭಾರತವು ಕ್ಷಿಪಣಿಯನ್ನು ಆ ನೆಲೆಯತ್ತ ಹಾರಿಸಿತ್ತು. ಆಗ ಅಣುಬಾಂಬ್​ ಸ್ಥಾವರದ ಕೆಳಗೆ ಹುದುಗಿಸಿಟ್ಟಿದ್ದ ಅಣುಬಾಂಬ್​ಗಳು ಕೆಲವು ಸ್ಫೋಟಗೊಂಡಿವೆ. ಅದನ್ನೇ ಭೂಕಂಪ ಎಂದು ಪಾಕಿಸ್ತಾನವು ಬಿಂಬಿಸಿದೆ.

ಪಾಕಿಸ್ತಾನದಲ್ಲಿ ಎರಡೆರಡು ಭೂಕಂಪಗಳು ಸಂಭವಿಸಿದ್ದು ನಿಜವೇ? ಪಾಕಿಸ್ತಾನದಲ್ಲಿ ಮೇ 10 ಹಾಗೂ ಮೇ 12ರಂದು ಎರಡು ಭೂಕಂಪಗಳು ಸಂಭವಿಸಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಹಾಗಾದರೆ ಅವೆರಡೂ ಭೂಕಂಪವೇ ಹೌದಾ ಎನ್ನುವ ಪ್ರಶ್ನೆಯೂ ಕಾಡಿದೆ. ಭೂಕಂಪದ ತೀವ್ರತೆ 5.7 ಆಗಿತ್ತು. ಈ ಶನಿವಾರ ಬೆಳಗಿನ ಜಾವ ಇಲ್ಲಿ ಭೂಕಂಪ ಸಂಭವಿಸಿದೆ. ಕೇವಲ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಈ ಭೂಕಂಪ ಸಂಭವಿಸಿದೆ.

ಆದರೆ ಆ ಪ್ರದೇಶದಲ್ಲಿ ಪರಮಾಣು ನೆಲೆಗಳು ಇರುವುದು ಕಂಡುಬಂದಿದೆ. ಅಲ್ಲಿ ಪರಮಾಣು ಚಟುವಟಿಕೆಗಳು ನಡೆಯುತ್ತಿರುವುದು ಕೂಡ ಕಂಡುಬಂದಿದೆ. ಸಾಮಾನ್ಯವಾಗಿ ಭೂಮಿಯಲ್ಲಿ ಅಡಗಿರುವ ಫಲಕಗಳು ಒಂದಕ್ಕೊಂದು ಘರ್ಷಣೆಯುಂಟಾದಾಗ ಭೂಕಂಪ ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಫಲಕಗಳು ಪರಸ್ಪರ ಡಿಕ್ಕಿ ಹೊಡೆದು ಟೆಕ್ಟೋನಿಕ್ ಚಟುವಟಿಕೆ ನಡೆದಾಗ, ಭೂಕಂಪಗಳು ಸಹ ಸಂಭವಿಸುತ್ತವೆ. ಪ್ಲೇಟ್ ದೂರ ಹೋದರೂ ಭೂಕಂಪಗಳು ಸಂಭವಿಸುತ್ತವೆ. ಆದರೆ ಪರಮಾಣು ಬಾಂಬ್ ಸ್ಫೋಟಗೊಂಡರೂ, ರಿಕ್ಟರ್ ಮಾಪಕ ಭೂಕಂಪ ಎಂದೇ ಹೇಳುತ್ತದೆ.

ಅಮೆರಿಕದ ಒತ್ತಡ ಆರಂಭವಾಗಿದ್ದು ಯಾವಾಗ? ಅಣುಬಾಂಬ್​ ಸ್ಫೋಟದ ಬೆದರಿಕೆ ಹಿನ್ನೆಲೆ ಅಮೆರಿಕದ ವಿಮಾನವೊಂದು ಪಾಕಿಸ್ತಾನದಾದ್ಯಂತ ಗಸ್ತು ತಿರುಗುವಾಗ ಭೂಮಿಯೊಳಗೆ ಅಣುಬಾಂಬ್ ಸ್ಫೋಟಗೊಂಡು ಅದರ ಪರಿಣಾಮ ಭೂಮಿಯ ಮೇಲ್ಭಾಗದಲ್ಲಿ ಅಪಾಯ ಮಟ್ಟವನ್ನು ಮೀರಿದ್ದನ್ನು ಗಮನಿಸಿದೆ. ಆಗ ಎಚ್ಚರಿಕೆ ನೀಡಿ ಭಾರತದ ಬಳಿ ಕೂಡಲೇ ಅಘೋಷಿತ ಯುದ್ಧವನ್ನು ನಿಲ್ಲಿಸುವಂತೆ ಸಲಹೆ ನೀಡಿತ್ತು. ಆದರೆ ಭಾರತವು ಪಾಕಿಸ್ತಾನ ಡಿಜಿಎಂಒ ನಮ್ಮ ಬಳಿ ಕೇಳುವವರೆಗೂ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿತ್ತು.

ವಿದೇಶಾಂಗ ಸಚಿವ ಜೈಶಂಕರ್​ಗೆ ಈಜಿಪ್ಟ್​ನಿಂದ ಕರೆ

ಪಾಕಿಸ್ತಾನದ ಸ್ಥಿತಿ ಬಗ್ಗೆ ​ ವಿದೇಶಾಂಗ ಸಚಿವ ಜೈಶಂಕರ್​ಗೆ ಈಜಿಪ್ಟ್​  ಕರೆ ಮಾಡಿತ್ತು. ಈ ಕುರಿತು ಜೈಶಂಕರ್​ ಮಾಹಿತಿ ನೀಡಿದ್ದರು, ಭಯೋತ್ಪಾದಕತೆ ಕುರಿತು ಮಾತನಾಡಿದ್ದರೂ ಕೂಡ ಮುಂದಿನ ದಿನಗಳಲ್ಲಿ ಭಾರತ ಹಾಗೂ ಈಜಿಪ್ಟ್​ ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದರು ಇದನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸಬಹುದು. ಈಜಿಪ್ಟ್​ ಬೋರಾನ್ ಕಳುಹಿಸಿತ್ತು. ಜತೆಗೆ ಲಕ್ಷಾಂತರ ಮಂದಿ ಸಾವನ್ನಪ್ಪುವ ಭಯವನ್ನೂ ಈಜಿಪ್ಟ್​ ವ್ಯಕ್ತಪಡಿಸಿತ್ತು.

ಪಾಕಿಸ್ತಾನಕ್ಕೆ ನೂರ್​ಖಾನ್ ಪರಮಾಣು ಕೇಂದ್ರ ಸ್ಫೋಟ ಭಯ ಭಾರತವು ನೂರ್​ಖಾನ್​ನಲ್ಲಿರುವ ಪರಮಾಣು ಕೇಂದ್ರವನ್ನು ಸ್ಫೋಟಿಸಬಹುದು ಎನ್ನುವ ಭಯ ಪಾಕಿಸ್ತಾನವನ್ನು ಕಾಡುತ್ತಿದೆ , ಒಂದೊಮ್ಮೆ ಹಾಗೇನಾದರೂ ಆದರೆ ಅಲ್ಲಿರುವ ಪರಮಾಣು ಬಾಂಬ್​ಗಳು ಯಾವ ಕೆಲಸಕ್ಕೂ ಬರುತ್ತಿರಲಿಲ್ಲ.

ಬ್ರಹ್ಮೋಸ್ ಕ್ಷಿಪಣಿ ಕಂಡು ಭಯಬಿತ್ತೇ ಪಾಕಿಸ್ತಾನ? ಒಂದೆಡೆ ತಮ್ಮ ಉಳಿದ ಅಣುಸ್ಥಾವರಗಳನ್ನು ಭಾರತ ನಾಶಪಡಿಸಬಹುದು ಎನ್ನುವ ಭಯದಿಂದಲೇ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಪಾಕಿಸ್ತಾನ ಭಯಪಟ್ಟು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೆರಿಕ ಕೂಡಲೇ ಮಾಡಿದ್ದೇನು? ಈಜಪ್ಟ್​ನಿಂದ ಪಾಕಿಸ್ತಾನಕ್ಕೆ ಹಡಗಿನಲ್ಲಿ ಫ್ಲೈಟ್​ ರಾಡಾರ್​ನನ್ನು ಹೊತ್ತು ಹೊರಟಿತ್ತು. ಬಳಿಕ ಅಮೆರಿಕ ಪಾಕಿಸ್ತಾನ ಎರಡೂ ಕುಳಿತು ಮಾತನಾಡಿ, ಮುಂದಿನ ಅಪಾಯದ ಕುರಿತು ಚರ್ಚಿಸಿದ್ದರು. ಇದಾದ ಬಳಿಕ ಪಾಕಿಸ್ತಾನವು ಭಾರತದೊಂದಿಗೆ ಮಾತನಾಡಿ ಯುದ್ಧವನ್ನು ನಿಲ್ಲಿಸುವ ಕುರಿತು ಮನವಿ ಮಾಡಿತ್ತು.

ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ, ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪರಮಾಣು ಅಸ್ತ್ರ ಬಳಕೆ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡುತ್ತಿತ್ತು. ನಿಮ್ಮ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ. ನಾವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ನಾವು ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಎಲ್ಲದ್ದಕ್ಕೂ ಸಿದ್ಧವಿದೆ ಎಂಬ ಸಂದೇಶ ರವಾನಿಸಿದರು. ಯಾಕೆಂದರೆ ಭಾರತವು ನೇರವಾಗಿ ಒಪ್ಪಿಕೊಳ್ಳದಿದ್ದರೂ ಪಾಕಿಸ್ತಾನವು ಕೆಲವು ಪುರಾವೆಗಳನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನದಲ್ಲಿ ವಾಯುನೆಲೆ ಸೇರಿದಂತೆ ಹಲವನ್ನು ಭಾರತ ನಾಶ ಮಾಡಿರುವ ಕುರಿತು ದೂರು ನೀಡಿದೆ.

ಮಾರ್ಷಲ್ ಎಕೆ ಭಾರ್ತಿ ನುಗುವಿನಲ್ಲಡಗಿದೆ ಹಲವು ಉತ್ತರ ಮೂರು ಸೇನೆಗಳು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದಾಗ ನಮ್ಮ ಪತ್ರಕರ್ತರು ನೀವು ಪಾಕಿಸ್ತಾನದ ವಾಯು ನೆಲೆಗಳನ್ನು ನಾಶ ಮಾಡಿದ್ದೀರಾ, ಈ ವಿಚಾರಗಳು ಸಾಕಷ್ಟು ಹರಿದಾಡುತ್ತಿವೆ ಎಂದು ಕೇಳಿದ್ದಾರೆ, ಆದಕ್ಕೆ ಎಕೆ ಭಾರ್ತಿ ಹೌದಾ ನಮಗೇನು ಗೊತ್ತೇ ಇಲ್ಲ ಎಂದು ತಲೆ ಬಗ್ಗಿಸಿ ನಕ್ಕಿದ್ದರು. ಈ ನಗುವಿನ ಹಿಂದೆಯೇ ಹಲವು ಉತ್ತರಗಳು ಅಡಗಿವೆ ಎನ್ನಬಹುದು.

ಭಾರತ ಸೇನೆಯ ನಕಲು ಭಾರತದ ಸೇನೆಯಂತೆಯೇ ಪಾಕಿಸ್ತಾನದಲ್ಲಿ ಕೂಡ ವಾಯು, ಭೂ ಹಾಗೂ ನೌಕಾಪಡೆಯ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಭಾರತದ ನಕಲು ಮಾಡಿದ್ದಾರೆ. ಅದೇ ರೀತಿ ತಮ್ಮ ಡಿಜಿಎಂಒಗಳ ಸಭೆಯನ್ನೂ ಕರೆದಿದ್ದವು. ಆರಂಭದಿಂದ ಇಲ್ಲಿಯವರೆಗೆ ಅವರು ನಾವು ಮಾಡುವ ಸಾಮಾನ್ಯ ಅಭ್ಯಾಸಗಳನ್ನೇ ಅನುಸರಿಸುತ್ತಿದ್ದಾರೆ, ಅವರು ಅದೇ ವಿಷಯಗಳನ್ನು ಪುನರಾವರ್ತಿಸುತ್ತಾರೆ.

ಅಮೆರಿಕಕ್ಕೆ ಪರಮಾಣು ಬೆದರಿಕೆ ಹಾಕಿತ್ತಾ ಪಾಕಿಸ್ತಾನ? ಪ್ರಶ್ನೆ ಕೇಳಿದ ಪಾಕ್ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಕೆಲವು ಪಾಕಿಸ್ತಾನಿ ಪತ್ರಕರ್ತರು ನೀವು ಅಮೆರಿಕಕ್ಕೆ ಪರಮಾಣು ಬೆದರಿಕೆ ಹಾಕಿದ್ದೀರಾ, ಅದಕ್ಕಾಗಿಯೇ ಅಮೆರಿಕವು ಭಾರತದ ಮೇಲೆ ಕದನ ವಿರಾಮ ಒಪ್ಪಿಕೊಳ್ಳಲು ಒತ್ತಡ ಹೇರಿತ್ತಾ ಎಂಬುದರ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಆಸಿಮ್ ಮುನೀರ್ ಎರಡು ದೇಶಗಳು ಪರಮಾಣು ಸಾಮರ್ಥ್ಯ ಹೊಂದಿದ್ದು, ಪರಮಾಣು ಬಾಂಬ್‌ಗಳನ್ನು ಹೊಂದಿದ್ದರೆ ಮತ್ತು ಅವು ಯುದ್ಧಕ್ಕೆ ಹೋದರೆ, ಯುದ್ಧ ಮಾಡಲು ಸಾಧ್ಯವಿಲ್ಲ ಎಂಬ ಅಂಶದ ಬಗ್ಗೆ ಜಾಗೃತವಾಗಿರುತ್ತವೆ. ಹಾಗಾದರೆ ಎಲ್ಲೋ ಒಂದು ಕಡೆ ಪರಮಾಣು ದಾಳಿಯತ್ತ ಈ ದಾಳಿ ಕೊಂಡೊಯ್ಯುತ್ತಿತ್ತು ಎಂದರ್ಥ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:00 am, Tue, 13 May 25