ಅತ್ಯಾಚಾರ ದೂರನ್ನು ಹಿಂಪಡೆದ ಸಂದೇಶ್​ಖಾಲಿಯ ಇಬ್ಬರು ಮಹಿಳೆಯರು

ಸಂದೇಶ್​ಖಾಲಿಯ ಇಬ್ಬರು ಮಹಿಳೆಯರು ತೃಣಮೂಲ ಕಾಂಗ್ರೆಸ್​ನ ಶಹಜಹಾನ್​ ಶೇಖ್​ ವಿರುದ್ಧದ ಅತ್ಯಾಚಾರ ದೂರನ್ನು ಹಿಂಪಡೆದಿದ್ದಾರೆ. ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆ ಮತ್ತು ಆಕೆಯ ಅತ್ತೆ ತೃಣಮೂಲ ಕಾಂಗ್ರೆಸ್ ನಾಯಕರ ಮೇಲಿನ ಅತ್ಯಾಚಾರ ದೂರನ್ನು ಹಿಂಪಡೆದಿದ್ದಾರೆ.

ಅತ್ಯಾಚಾರ ದೂರನ್ನು ಹಿಂಪಡೆದ ಸಂದೇಶ್​ಖಾಲಿಯ ಇಬ್ಬರು ಮಹಿಳೆಯರು
ಸಂದೇಶ್​ಖಾಲಿ
Follow us
ನಯನಾ ರಾಜೀವ್
|

Updated on: May 09, 2024 | 2:36 PM

ತೃಣಮೂಲ ಕಾಂಗ್ರೆಸ್​ನ ಶಹಜಹಾನ್​ ಶೇಖ್(Shahjahan Sheikh)​ ವಿರುದ್ಧದ ಅತ್ಯಾಚಾರ ದೂರನ್ನು ಸಂದೇಶ್​ಖಾಲಿಯ ಇಬ್ಬರು ಮಹಿಳೆಯರು ಹಿಂಪಡೆದಿದ್ದಾರೆ. ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆ ಮತ್ತು ಆಕೆಯ ಅತ್ತೆ ತೃಣಮೂಲ ಕಾಂಗ್ರೆಸ್ ನಾಯಕರ ಮೇಲಿನ ಅತ್ಯಾಚಾರ ದೂರನ್ನು ಹಿಂಪಡೆದಿದ್ದಾರೆ.

ದೆಹಲಿ ಮಹಿಳಾ ಆಯೋಗದ ಆದೇಶದ ಮೇರೆಗೆ ದೂರಿನ ವಿಷಯವನ್ನೂ ಸಹ ತಿಳಿಯದೆ ತಾನು ಮತ್ತು ತನ್ನ ಅತ್ತೆಯನ್ನು ನಕಲಿ ಅತ್ಯಾಚಾರದ ದೂರುಗಳನ್ನು ದಾಖಲಿಸಲು ಹೇಗೆ ಒತ್ತಾಯಿಸಲಾಯಿತು ಎಂದು ವಿವರಿಸಿದ್ದಾರೆ. ಮಹಿಳೆ ಮತ್ತು ಆಕೆಯ ಅತ್ತೆ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ನಾವು ದೂರು ಹಿಂಪಡೆಯಲು ನಿರ್ಧರಿಸಿರುವುದರಿಂದ ಅಕ್ಕಪಕ್ಕದ ಮನೆಯವರು ಯಾರೂ ಕೂಡ ಮಾತನಾಡುತ್ತಿಲ್ಲ, ಅವರ ಬಳಿಯೂ ದೂರು ಹಿಂಪಡೆಯುವಂತೆ ಹೇಳಿದಾಗ ನಮಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.

ಒಂದು ದಿನ ಇಬ್ಬರು ಮಹಿಳೆಯರು – ಪಿಯಾಲಿ ದಾಸ್ ಮತ್ತು ಮಂಪಿ ದಾಸ್- ತಮ್ಮ ಮನೆಗೆ ಬಂದು ತನ್ನ ಅತ್ತೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ವೈಟ್​ ಪೇಪರ್​ ಮೇಲೆ ಸಹ ಹಾಕಿಸಿಕೊಂಡಿದ್ದರು.

ಮತ್ತಷ್ಟು ಓದಿ: ಸಂದೇಶ್​ಖಾಲಿ ಸಂತ್ರಸ್ತೆ, ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾಗೆ ಎಕ್ಸ್​ ಶ್ರೇಣಿಯ ಭದ್ರತೆ

ಸ್ಥಳೀಯ ತೃಣಮೂಲ ನಾಯಕರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿರುವ ಮಹಿಳೆಯರ ಪಟ್ಟಿಯಲ್ಲಿ ತಾನು ಮತ್ತು ಅತ್ತೆ ಇರುವುದು ತಿಳಿದು ದಿಗ್ಭ್ರಮೆಯಾಗಿದೆ ಎಂದು ಹೇಳಿದ್ದಾರೆ.

ಬಂಗಾಳದ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಲು ಲೋಕಸಭೆ ಚುನಾವಣೆಯ ನಡುವೆ ಬಿಜೆಪಿ ಸಂದೇಶಖಾಲಿ ವಿಷಯವನ್ನು ಕೆದಕುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ತೃಣಮೂಲದ ಪ್ರಬಲ ವ್ಯಕ್ತಿ ಶಹಜಹಾನ್ ಶೇಖ್ ಮತ್ತು ಅವರ ಸಹಾಯಕರ ವಿರುದ್ಧ ಭೂಹಗರಣ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಹಲವಾರು ಮಹಿಳೆಯರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ