ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾಗೆ ನಮಿಸಿದ ಕೇರಳದ ರಾಜ್ಯಪಾಲ ಆರಿಫ್ ಖಾನ್
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲರಾಮನಿಗೆ ನಮಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆ(Ayodhya)ಯ ರಾಮ ಮಂದಿರ(Ram Mandir)ಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು. ಖಾನ್ ದೇವಾಲಯವನ್ನು ಶಾಂತಿಯ ಸ್ಥಳ ಎಂದು ಕರೆದಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕೇರಳ ರಾಜಭವನದಲ್ಲಿ ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಮಾಹಿತಿಯನ್ನು ನೀಡಿದ್ದಾರೆ.
ರಾಮ್ ಲಲ್ಲಾ ವಿಗ್ರಹದ ಮುಂದೆ ರಾಜ್ಯಪಾಲರು ನಮಸ್ಕರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೈ ಶ್ರೀ ರಾಮ್ ಘೋಷಣೆಗಳು ಕೇಳಿ ಬರುತ್ತಿದ್ದವು.
ನಾನು ಅಯೋಧ್ಯೆಗೆ ಭೇಟಿ ನೀಡುತ್ತಲೇ ಇದ್ದೇನೆ. ಜನವರಿ ತಿಂಗಳಲ್ಲಿ ಪ್ರಾಣ ಪ್ರತಿಷ್ಠೆಗೂ ಮುನ್ನ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದೆ, ಇಲ್ಲಿಗೆ ಬರುವುದು ಮನಸ್ಸಿಗೆ ಶಾಂತಿ ನೀಡುತ್ತದೆ,ಇದು ನಮಗೆ ಕೇವಲ ಸಂತೋಷದ ವಿಷಯವಲ್ಲ, ಬದಲಾಗಿ ಅಯೋಧ್ಯೆಗೆ ಬಂದು ಶ್ರೀರಾಮನನ್ನು ಪೂಜಿಸುತ್ತಿರುವುದು ಹೆಮ್ಮೆ ಎಂದರು.
ಮತ್ತಷ್ಟು ಓದಿ: Ram Navami 2024: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ
ವೈದಿಕ ಶಿಕ್ಷಣವನ್ನು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದು ವೈದಿಕ ಶಿಕ್ಷಣವನ್ನು ಪ್ರಚಾರ ಮಾಡಲು ಉತ್ತಮ ಮಾರ್ಗವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು ಮತ್ತು ಜಗತ್ತು ಅದರಿಂದ ಪಾಠ ಕಲಿಯುತ್ತದೆ ಎಂದು ಹೇಳಿದರು.
ಆರಿಫ್ ಖಾನ್ ವಿಡಿಯೋ
Hon’ble Governor Shri Arif Mohammed Khan at Prabhu Shri Ram Temple Ayodhya: PRO KeralaRajBhavan pic.twitter.com/wCzZCSirLt
— Kerala Governor (@KeralaGovernor) May 8, 2024
ನಾವು ನೋಡುತ್ತಿರುವಂತೆ ಯಾವಾಗಲೂ ಇರುವುದಿಲ್ಲ, ಮತ್ತು ನಾವು ಕಣ್ಣು ಮುಚ್ಚಿ ವಾಸ್ತವವನ್ನು ನೋಡಬೇಕು ಎಂದು ಅವರು ಒತ್ತಿ ಹೇಳಿದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡ ದಿನ, ಎಲ್ಲಾ ಅನುಮಾನಗಳು ಕಾಣೆಯಾಗುತ್ತವೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ