Water Scarcity: 2050ರ ವೇಳೆಗೆ ಭಾರತದಲ್ಲಿ ಉಂಟಾಗಲಿದೆ ನೀರಿನ ಅಭಾವ: ವಿಶ್ವ ಸಂಸ್ಥೆ ವರದಿ
ಭಾರತದಲ್ಲಿ 2050ರ ವೇಳೆಗೆ ಭಾರಿ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಾಗತಿಕ ನಗರ ಜನಸಂಖ್ಯೆಯು 2016 ರಲ್ಲಿ 933 ಮಿಲಿಯನ್‌ನಿಂದ 2050 ರಲ್ಲಿ 1.7-2.4 ಶತಕೋಟಿ ಜನರಿಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಭಾರತದಲ್ಲಿ 2050ರ ವೇಳೆಗೆ ಭಾರಿ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಾಗತಿಕ ನಗರ ಜನಸಂಖ್ಯೆಯು 2016 ರಲ್ಲಿ 933 ಮಿಲಿಯನ್‌ನಿಂದ 2050 ರಲ್ಲಿ 1.7-2.4 ಶತಕೋಟಿ ಜನರಿಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯು ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಕುರಿತಂತೆ ವಿಶ್ವಸಂಸ್ಥೆಯು ಕಳವಳಕಾರಿ ಮಾಹಿತಿ ಹೊರಹಾಕಿದೆ. ವಿಶ್ವದ ಜನಸಂಖ್ಯೆ ಶೇ.26 ಪ್ರತಿಶತದಷ್ಟು ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ. ಅಲ್ಲದೇ ವಿಶ್ವದಲ್ಲಿ 46 ಪ್ರತಿಶತದಷ್ಟು ಜನರು ನೈರ್ಮಲ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಕಳೆದ 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿ ವರ್ಷಕ್ಕೆ ಸರಿಸುಮಾರು 1 ಪ್ರತಿಶತದಷ್ಟು ಹೆಚ್ಚುತ್ತಿದ್ದು, 2050ರ ಹೊತ್ತಿಗೆ ಇದೇ ದರದಲ್ಲಿ ಹೆಚ್ಚುವ ನಿರೀಕ್ಷೆ ಇದೆ. ಹಾಗೆಯೇ 2050ರ ಹೊತ್ತಿಗೆ ಭಾರತದಲ್ಲಿನ ಸುಮಾರು 3,700 ಅಣೆಕಟ್ಟುಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇ.26ರಷ್ಟನ್ನು ಕಳೆದುಕೊಳ್ಳಲಿವೆ. ಹೆಚ್ಚುತ್ತಿರುವ ಹೂಳಿನಿಂದಾಗಿ ಸಂಗ್ರಹಣಾ ಸಾಮರ್ಥ್ಯವು ಕುಸಿಯಲಿದ್ದು, ಭವಿಷ್ಯದಲ್ಲಿ ನೀರಿನ ಕೊರತೆಯುಂಟಾಗಬಹುದು ಎಂದು ಅಂದಾಜಿಸಲಾಗಿದೆ.
ಮತ್ತಷ್ಟು ಓದಿ: Dharwad News: ಯುಗಾದಿ ಹಬ್ಬದ ಸಂದರ್ಭದಲ್ಲೇ ಧಾರವಾಡ ಜನತೆಗೆ ಶಾಕ್; ಎರಡು ದಿನ ನೀರು ಪೂರೈಕೆ ಬಂದ್
ವಿಪರೀತ ಹೂಳಿನಿಂದಾಗಿ ಈಗಾಗಲೇ ಜಗತ್ತಿನ ಸುಮಾರು 50 ಸಾವಿರ ಅಣೆಕಟ್ಟುಗಳು ತಮ್ಮ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.13ರಿಂದ ಶೇ.19ರಷ್ಟು ಕಳೆದುಕೊಂಡಿವೆ.
ಜಾಗತಿಕ ನೀರಿನ ಬಿಕ್ಕಟ್ಟು ನಿಯಂತ್ರಣದಿಂದ ಹೊರಗುಳಿಯುವುದನ್ನು ತಡೆಯಲು ಬಲವಾದ ಅಂತರರಾಷ್ಟ್ರೀಯ ಕಾರ್ಯವಿಧಾನಗಳನ್ನು ಸ್ಥಾಪಿಸುವ ತುರ್ತು ಅವಶ್ಯಕತೆಯಿದೆ ಎಂದು ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಹೇಳಿದರು.
150 ದೇಶಗಳಲ್ಲಿನ ಅಣೆಕಟ್ಟುಗಳು 4665 ಶತಕೋಟಿ ಘನ ಮೀಟರ್ಗೆ ಕುಸಿಯಲಿವೆ. 2050ರ ವೇಳೆಗೆ ಶೇ.26ರಷ್ಟು ಸಂಗ್ರಹ ನಷ್ಟವಾಗಲಿದೆ. 1650 ಶತಕೋಟಿ ಘನ ಮೀಟರ್ ಶೇಖರಣಾ ಸಾಮರ್ಥ್ಯದ ನಷ್ಟವು ಭಾರತ, ಚೀನಾ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಕೆನಡಾದ ವಾರ್ಷಿಕ ನೀರಿನ ಬಳಕೆಗೆ ಸರಿಸಮನಾಗಿರುತ್ತದೆ ಎಂದು ಹೇಳಲಾಗಿದೆ.
ಕಡಿಮೆ ಲಭ್ಯತೆ ಮತ್ತು ಹೆಚ್ಚಿದ ಬೇಡಿಕೆಯು ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ನೀರಿನಕೊರತೆ ಇರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲದೆ 3.5 ಶತಕೋಟಿ ಜನರು ವರ್ಷಕ್ಕೆ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
2000ರಿಂದ ಉಷ್ಣವಲಯದಲ್ಲಿನ ಪ್ರವಾಹಗಳು ಸಾಕಷ್ಟು ಹೆಚ್ಚಾಗಿವೆ, ಉತ್ತರ ಮಧ್ಯ ಅಕ್ಷಾಂಶಗಳಲ್ಲಿ ಪ್ರವಾಹವು 2.5 ಪಟ್ಟು ಹೆಚ್ಚಾಗಿವೆ ಎಂದು ವರದಿ ಬಹಿರಂಗಪಡಿಸಿದೆ. ಇನ್ನು ಜಲಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಾಲಿನ್ಯದ ದೊಡ್ಡ ಮೂಲವೆಂದರೆ ಸಂಸ್ಕರಿಸದ ತ್ಯಾಜ್ಯ ನೀರು ಎಂದು ಕಾನರ್ ಹೇಳಿದ್ದಾರೆ.
ಜಾಗತಿಕವಾಗಿ ಶೇ.80ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಬಹುಮಟ್ಟಿಗೆ ಶೇ.99ರಷ್ಟಿದೆ.
2023ರಿಂದ 2030ರ ವೇಳೆಗೆ ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಸ್ಯೆ ಸರಿದೂಗಿಸಲು ವರ್ಷಕ್ಕೆ ಅಂದಾಜು ವೆಚ್ಚ 600 ಶತಕೋಟಿ ಡಾಲರ್ನಿಂದ 1 ಟ್ರಿಲಿಯನ್ ಡಾಲರ್ವರೆಗೆ ತಗುಲಲಿದೆ ಎಂದು ಹೇಳಿದರು.
ಇದಕ್ಕೋಸ್ಕರ ಹಣಕಾಸುದಾರರು, ಹೂಡಿಕೆದಾರರು, ಸರ್ಕಾರಗಳು ಹಾಗೂ ಹವಾಮಾನ ಇಲಾಖೆಯು ಸಮುದಾಯದೊಂದಿಗೆ ಪಾಲುದಾರಿಕೆಯನ್ನುರೂಪಿಸುವುದು ಪರಿಸರವನ್ನು ಉಳಿಸಿಕೊಳ್ಳಲು ಯಾವ ರೀತಿಯಾಗಿ ಹಣ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ