AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಜ್​ಗಾರ್ ಮೇಳದಡಿ ನಾಳೆ ಪ್ರಧಾನಿ ಮೋದಿಯಿಂದ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ದಾಖಲೆ ಹಸ್ತಾಂತರ

ಕೇಂದ್ರ ಸರ್ಕಾರದ 'ರೋಜ್‌ಗಾರ್ ಮೇಳ'ದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ದೇಶಾದ್ಯಂತ ಹೊಸದಾಗಿ ಆಯ್ಕೆಯಾದ 51,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ದಾಖಲೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸ್ತಾಂತರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಯುವಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನ ಮಂತ್ರಿ ಮೋದಿಯ ಬದ್ಧತೆಗೆ ಅನುಗುಣವಾಗಿ ರೋಜ್‌ಗಾರ್ ಮೇಳವನ್ನು ಆಯೋಜಿಸಲಾಗಿದೆ.

ರೋಜ್​ಗಾರ್ ಮೇಳದಡಿ ನಾಳೆ ಪ್ರಧಾನಿ ಮೋದಿಯಿಂದ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ದಾಖಲೆ ಹಸ್ತಾಂತರ
Pm Modi
ಸುಷ್ಮಾ ಚಕ್ರೆ
|

Updated on: May 22, 2026 | 10:33 PM

Share

ನವದೆಹಲಿ, ಮೇ 22: ದೇಶಾದ್ಯಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರೋಜ್‌ಗಾರ್ ಮೇಳ’ದ (Rozgar Mela) ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ (PM Modi) ಮೇ 23ರಂದು ದೇಶಾದ್ಯಂತ ಹೊಸದಾಗಿ ಆಯ್ಕೆಯಾದ 51,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ದಾಖಲೆಗಳನ್ನು ವಿತರಿಸಲಿದ್ದಾರೆ. ಈ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದುವರೆಗೂ ದೇಶಾದ್ಯಂತ ಆಯೋಜಿಸಲಾದ 18 ರೋಜ್‌ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ನಾಳೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯುವ ಈ ಮೇಳವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಭಾರೀ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಟಿಸಿಎಸ್​ನಿಂದ ಬ್ಯಾಂಡ್ ಡಿ ಪ್ಲಾನ್? 29,000ಕ್ಕೂ ಹೆಚ್ಚು ಮಂದಿಗೆ ಲೇ ಆಫ್ ಭೀತಿ?

ಯಾವೆಲ್ಲಾ ಇಲಾಖೆಗಳಲ್ಲಿ ನೇಮಕಾತಿ?:

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF): ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಸಿಆರ್‌ಪಿಎಫ್ (CRPF), ಬಿಎಸ್‌ಎಫ್ (BSF), ಎಸ್‌ಎಸ್‌ಬಿ (SSB), ಸಿಐಎಸ್‌ಎಫ್ (CISF) ಮುಂತಾದ ಭದ್ರತಾ ಪಡೆಗಳು.

ರೈಲ್ವೆ ಇಲಾಖೆ (Railways): ಭಾರತೀಯ ರೈಲ್ವೆಯ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳು.

ಟಪಾಲು ಇಲಾಖೆ (Posts): ಅಂಚೆ ಇಲಾಖೆಯ ವಿವಿಧ ಹುದ್ದೆಗಳು.

ಬ್ಯಾಂಕಿಂಗ್ ಮತ್ತು ಕಂದಾಯ: ಕೇಂದ್ರ ಸಾರ್ವಜನಿಕ ವಲಯದ ಬ್ಯಾಂಕುಗಳು, ಆದಾಯ ತೆರಿಗೆ ಇಲಾಖೆ ಮತ್ತು ಕಸ್ಟಮ್ಸ್ ಇಲಾಖೆಗಳು.

ಇದನ್ನೂ ಓದಿ: UPSSSC Recruitment 2026: UPSSSC ಇಲಾಖೆಯಲ್ಲಿ ಉದ್ಯೋಗಾವಕಾಶ; 1,182 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಮೇಳದ ಮೂಲಕ ನೇಮಕಗೊಳ್ಳುವ ಎಲ್ಲಾ ಹೊಸ ಅಭ್ಯರ್ಥಿಗಳಿಗೆ ‘ಐಗಾಟ್ ಕರ್ಮಯೋಗಿ’ (iGOT Karmayogi) ಪೋರ್ಟಲ್‌ನಲ್ಲಿ ಲಭ್ಯವಿರುವ ‘ಕರ್ಮಯೋಗಿ ಪ್ರಾರಂಭ್’ ಎಂಬ ಆನ್‌ಲೈನ್ ತರಬೇತಿ ಕೋರ್ಸ್ ಅನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ಇದು ಸರ್ಕಾರಿ ನೌಕರರಿಗೆ ಅಗತ್ಯವಿರುವ ನೀತಿ ಸಂಹಿತೆ, ವೃತ್ತಿಪರತೆ ಮತ್ತು ಸಾರ್ವಜನಿಕ ಸೇವಾ ಮನೋಭಾವನೆಯನ್ನು ಕಲಿಸಿಕೊಡುವ ಡಿಜಿಟಲ್ ತರಬೇತಿ ವೇದಿಕೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More