ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ನೂಕುನುಗ್ಗಲು; ರೈಲು ಹಳಿಗೆ ಜಾರಿ ಬಿದ್ದ ಬಿಜೆಪಿ ಶಾಸಕಿ
ಹೊಸ ವಂದೇ ಭಾರತ್ ರೈಲಿಗಾಗಿ ಜನರು ಕುತೂಹಲದಿಂದ ಕಾಯುತ್ತಿರುವಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ನಲ್ಲಿ ಸರಿತಾ ಬದೌರಿಯಾ ರೈಲಿಗೆ ಚಾಲನೆ ಮಾಡಲು ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ನೂಕು ನುಗ್ಗಲಿನಿಂದಾಗಿ, 61 ವರ್ಷದ ಬಿಜೆಪಿ ಶಾಸಕಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಅಲ್ಲಿದ್ದವರು ಸಹಾಯ ಮಾಡಿ ಫ್ಲಾಟ್ ಫಾರ್ಮ್ ಮೇಲೆ ಹತ್ತಿಸಿದ್ದಾರೆ
ಲಕ್ನೋ ಸೆಪ್ಟೆಂಬರ್ 17: ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ (Agra-Varanasi Vande Bharat Express) ಫ್ಲ್ಯಾಗ್ ಆಫ್ ಮಾಡುವ ವೇಳೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಬಿಜೆಪಿ ಶಾಸಕಿ ಸರಿತಾ ಭದೌರಿಯಾ (Sarita Bhadauria) ಹಳಿಗಳ ಮೇಲೆ ಜಾರಿ ಬಿದ್ದಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೊಸ ವಂದೇ ಭಾರತ್ ರೈಲಿಗಾಗಿ ಜನರು ಕುತೂಹಲದಿಂದ ಕಾಯುತ್ತಿರುವಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ನಲ್ಲಿ ಸರಿತಾ ಬದೌರಿಯಾ ರೈಲಿಗೆ ಚಾಲನೆ ಮಾಡಲು ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ನೂಕು ನುಗ್ಗಲಿನಿಂದಾಗಿ, 61 ವರ್ಷದ ಬಿಜೆಪಿ ಶಾಸಕಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಅಲ್ಲಿದ್ದವರು ಸಹಾಯ ಮಾಡಿ ಫ್ಲಾಟ್ ಫಾರ್ಮ್ ಮೇಲೆ ಹತ್ತಿಸಿದ್ದಾರೆ.
ಸೆಪ್ಟೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರು ಹೊಸ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದ ನಂತರ ಆಗ್ರಾದಿಂದ ರೈಲಿಗೆ ಫ್ಲ್ಯಾಗ್ ಆಫ್ ಮಾಡಲಾಯಿತು.
ಶಾಸಕಿ ರೈಲು ಹಳಿ ಮೇಲೆ ಬೀಳುತ್ತಿರುವ ವಿಡಿಯೊ
Etawah, UP: The flag-off ceremony for the Agra-Varanasi Vande Bharat Express faced chaos due to heavy rush, and BJP’s Etawah Sadar MLA, Sarita Bhadoria, fell in front of the train pic.twitter.com/p10CfbDIF0
— IANS (@ians_india) September 16, 2024
ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ, “ಶಾಸಕಿಯನ್ನು ಹಳಿಗಳಿಂದ ಮೇಲೆತ್ತಿ ನಂತರ ಫ್ಲಾಗ್-ಆಫ್ ಕಾರ್ಯಕ್ರಮ ನಡೆಯಿತು ಎಂದು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ. ವೈದ್ಯರು ಸರಿತಾ ಬದೌರಿಯಾ ಅವರನ್ನು ಪರೀಕ್ಷಿಸಿದ್ದಾರೆ ಮತ್ತು ಯಾವುದೇ ಗಂಭೀರವಾದ ಗಾಯಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.
ಇಟಾವಾ ನಿಲ್ದಾಣಕ್ಕೆ ಬರುವ ಮೊದಲು ರೈಲು ತುಂಡ್ಲಾದಲ್ಲಿ ನಿಲುಗಡೆ ಮಾಡಿತು. ಅದರ ಆಗಮನದ ನಂತರ, ವಿಡಿಯೊಗಳಲ್ಲಿ ತೋರಿಸಿರುವಂತೆ ಸಮಾಜವಾದಿ ಪಕ್ಷದ ಸಂಸದ ಜಿತೇಂದ್ರ ದೌವ್ಹಾರೆ, ಬಿಜೆಪಿಯ ಮಾಜಿ ಸಂಸದ ರಾಮ್ ಶಂಕರ್ ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳು ಫ್ಲ್ಯಾಗ್‌ಆಫ್‌ಗೆ ಜಮಾಯಿಸಿದ್ದರಿಂದ ವೇದಿಕೆ ತುಂಬಿತ್ತು.
ರೈಲು ಹೊರಡುವ ಸೂಚನೆ ನೀಡಿದಾಗ, ವೇದಿಕೆಯಲ್ಲಿ ಜನ ಕಿಕ್ಕಿರಿದು ನಿಂತಿದ್ದರು. ಹೀಗೆ ನೂಕು ನುಗ್ಗಲಾದಾಗ ಶಾಸಕಿ ಪ್ಲಾಟ್‌ಫಾರ್ಮ್‌ನಿಂದ ತಳ್ಳಲ್ಪಟ್ಟು ರೈಲಿನ ಮುಂಭಾಗದ ರೈಲು ಹಳಿಗಳ ಮೇಲೆ ಬಿದ್ದಿದ್ದಾರೆ. ಅದೃಷ್ಟವಶಾತ್, ಪಕ್ಕದಲ್ಲಿದ್ದವರು ರೈಲನ್ನು ಸಕಾಲದಲ್ಲಿ ನಿಲ್ಲಿಸಿದ್ದರಿಂದ ಭಾರೀ ಅನಾಹುತ ತಪ್ಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಾಸಕಿಯನ್ನು ಪೊಲೀಸರು ಕೂಡಲೇ ಟ್ರ್ಯಾಕ್‌ಗಳಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು.
ಇದನ್ನೂ ಓದಿ: ನರೇಂದ್ರ ಮೋದಿ ವಿದೇಶಾಂಗ ನೀತಿ ಸೂಪರ್ಹಿಟ್; ಭಾರತಕ್ಕೆ ಹೆಚ್ಚಾದ ಜಾಗತಿಕ ಮಾನ್ಯತೆ
ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು
ವರದಿಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರೈಲ್ವೆಯ ಆಗ್ರಾ ವಿಭಾಗದ PRO ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ. ರೈಲು ಆಗ್ರಾ ಮತ್ತು ವಾರಣಾಸಿ ನಡುವೆ ಸುಮಾರು ಏಳು ಗಂಟೆಗಳಲ್ಲಿ ಪ್ರಯಾಣಿಸಲಿದೆ. ರಿಟರ್ನ್ ಸೇವೆಯು ವಾರಣಾಸಿಯಿಂದ ಆಗ್ರಾಕ್ಕೆ ರೈಲು ಸಂಖ್ಯೆ 20176 ನಂತೆ ಕಾರ್ಯನಿರ್ವಹಿಸುತ್ತದೆ, ಆಗ್ರಾ-ವಾರಣಾಸಿಯನ್ನು 20175 ರೈಲು ಸಂಪರ್ಕಿಸಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 17 September 24