
ನವದೆಹಲಿ, ಆಗಸ್ಟ್ 15: ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. “ನಾವು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ, ಆತ್ಮನಿರ್ಭರರಾಗಬೇಕು” ಎಂದು ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಪುನರುಚ್ಛರಿಸಿದ್ದಾರೆ. ‘ಆತ್ಮನಿರ್ಭರ ಭಾರತ’ದ ಕನಸಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಭಾರತದ ಸೆಮಿಕಂಡಕ್ಟರ್ ಪ್ಲಾಂಟ್‌ಗಳು (ಉತ್ಪಾದನಾ ಘಟಕಗಳು) ಮತ್ತು ಈ ಕ್ಷೇತ್ರದಲ್ಲಿ ದೇಶ ಹೊಂದಿರುವ ಹೆಚ್ಚಿನ ಆಕಾಂಕ್ಷೆಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ‘ಹರ್ ಘರ್ ತಿರಂಗಾ, ಹರ್ ಮನ್ ತಿರಂಗಾ’ ಎಂದ ಪ್ರಧಾನಿ ಮೋದಿ, “ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಂದು ನಾವೆಲ್ಲರೂ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇಂದು ಪ್ರತಿಯೊಂದು ಹೃದಯದ ಬಡಿತದಲ್ಲೂ ‘ವಂದೇ ಮಾತರಂ’ ಜಪ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವಿದೆ, ಪ್ರತಿಯೊಂದು ಮನದಲ್ಲೂ ತ್ರಿವರ್ಣ ಧ್ವಜವಿದೆ. ದೇಶವು ಇಂದು ಹೊಸ ಸಂಕಲ್ಪಗಳೊಂದಿಗೆ, ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಮುಂದೆ ಸಾಗುತ್ತಿದೆ” ಎಂದು ಹೇಳಿದರು.
“ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಆಶಯದೊಂದಿಗೆ ಜನರು ಒಂದಾಗುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಈಗ ‘ವೋಕಲ್ ಫಾರ್ ಲೋಕಲ್’ ಮತ್ತು ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುತ್ತಿದ್ದಾನೆ. ‘ಆತ್ಮನಿರ್ಭರ’ ಆಗುವ ಪ್ರಯತ್ನದ ಭಾಗವಾಗಿ ಭಾರತವು ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಸ್ಥಾಪಿಸಿದ್ದು, ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ” ಎಂದು ಮೋದಿ ಹೇಳಿದ್ದಾರೆ.
ತಮ್ಮ ಸರ್ಕಾರವು 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ 12 ವರ್ಷಗಳಲ್ಲಿ ದೇಶವು ತನ್ನ ಅಭಿವೃದ್ಧಿಯನ್ನು ವೇಗಗೊಳಿಸಿದೆ ಎಂದು ಅವರು ಹೇಳಿದರು. “ಅಭಿವೃದ್ಧಿಯತ್ತ ಸಂಕಲ್ಪದೊಂದಿಗೆ ಸಾಗುತ್ತಿರುವ 140 ಕೋಟಿ ಭಾರತೀಯರನ್ನು ತಡೆಯುವುದು ಈಗ ಅಸಾಧ್ಯ” ಎಂದು ಅವರು ಅಭಿಪ್ರಾಯಪಟ್ಟರು.
PM Modi inspects Guard of Honour at Red Fort on 80th Independence Day at Red Fort.@narendramodi #IndependenceDay #15August2026 #IndependenceDay2026 pic.twitter.com/fliIn8Ckcx
— SansadTV (@sansad_tv) August 15, 2026
2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ:
“ಇಂದು ಭಾರತವು ಅತ್ಯಂತ ದೊಡ್ಡ ಕನಸನ್ನು ಕಂಡಿದೆ. ಹೊಸ ಎತ್ತರವನ್ನು ತಲುಪುವ ಗುರಿಯೊಂದಿಗೆ, ಬಲವಾದ ಸಂಕಲ್ಪದೊಂದಿಗೆ ಈ ಕನಸನ್ನು ಕಾಣಲಾಗಿದೆ. ಆ ಕನಸೆಂದರೆ 2047ರ ವೇಳೆಗೆ, ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದ್ದೇವೆ. 140 ಕೋಟಿ ಭಾರತೀಯರ ಶ್ರಮದಿಂದ ನಾವು ಈ ಗುರಿಯನ್ನು ಸಾಧಿಸಬೇಕಾಗಿದೆ. ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಲು ಸಂಕಲ್ಪ ಮಾಡಿದಾಗ ಅದು ಖಂಡಿತ ಸಾಧ್ಯವಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.
#WATCH || Delhi: Prime Minister @narendramodi hoists the National Flag at the Red Fort on the occasion of the 80th Independence Day.
The hoisting of the National Flag was synchronised with the 21-Gun Salute by the gunners of the 1721 Field Battery (Ceremonial).… pic.twitter.com/RLG93nforz
— All India Radio News (@airnewsalerts) August 15, 2026
ಇದನ್ನೂ ಓದಿ: Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?
ದೊಡ್ಡ ಗುರಿಗಳನ್ನು ಇಟ್ಟುಕೊಂಡಾಗ ಮಾತ್ರ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕನಸುಗಳು ದೊಡ್ಡದಾಗಿದ್ದಾಗ, ನಮ್ಮ ಸಾಮರ್ಥ್ಯವೂ ಬೆಳೆಯುತ್ತದೆ” ಎಂದು ಹೇಳಿದರು.

ಯುವ ಸಂಶೋಧಕರು, ಇಂಟರ್ನ್‌ಗಳು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 27,000 ಜನರು ಕೆಂಪುಕೋಟೆಯ ಈ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Sat, 15 August 26